ಕಾರ್ಕಳ: ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ: ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಸಾವು

ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದ ಗುಮ್ಮೆಟ್ಟು ನಿವಾಸಿ ಗೀತಾ ಅವರ ಮೇಲೆ ಪತಿ ಸುನೀಲ್ ಕುಮಾರ್ ಮಾರಣಾಂತಿಕ ಹಲ್ಲೆ ನಡೆಸಿದ್ದು ಆರೋಪಿ ಪತ್ನಿ ಗೀತಾ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ ಮಂಗಳವಾರ ಗೀತಾ ಹಾಗೂ ಅವರ ಪತಿ ಸುನೀಲ್ ಕುಮಾ‌ರ್ ನಡುವೆ ಸಾಂಸಾರಿಕ ವಿಚಾರವಾಗಿ ಗಲಾಟೆ ನಡೆದಿದ್ದು, ಈ ಸಂದರ್ಭ ಸುನೀಲ್ ಕುಮಾರ್ ಗೀತಾ ಅವರನ್ನು ಕೊಲ್ಲುವ ಉದ್ದೇಶದಿಂದ ಯಾವುದೋ ಆಯುಧದಿಂದ ಹಣೆಗೆ ಹಾಗೂ ಗದ್ದಕ್ಕೆ ಹೊಡೆದು ಗಂಭೀರ ಗಾಯಗೊಳಿಸಿದ್ದಾನೆ […]

ಚಿತ್ತೂರು ಫ್ಯೂಯಲ್ಸ್ ಮಾಲಕ ಇಡೂರು ಕರುಣಾಕರ ಶೆಟ್ಟಿ ನಿಧನ

ಚಿತ್ತೂರು : ಕುಂದಾಪುರ ತಾಲೂಕು ಚಿತ್ತೂರಿನಲ್ಲಿರುವ ಚಿತ್ತೂರು ಪ್ಯೂಯಲ್ಸ್ ಮಾಲಕ ಇಡೂರು ಕರುಣಾಕರ ಶೆಟ್ಟಿ (49) ಹೃದಯಾಘಾತದಿಂದ ನಿನ್ನೆ ಮಧ್ಯಾಹ್ನ ನಿಧನ ಹೊಂದಿದರು. ಅವರ ಖುಷಿ ಬಾ‌ರ್ & ರೆಸ್ಟೋರೆಂಟ್‌ನಲ್ಲಿ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಹೋಟೆಲ್ ಉದ್ಯಮಿಯಾಗಿರುವ ಅವರು ಬಳ್ಳಾರಿಯ ಸ್ಟೇಶನ್ ರಸ್ತೆಯಲ್ಲಿ ರೇಣುಕಾ ವೆಜ್ ಹಾಗೂ ಬಳ್ಳಾರಿಯ ಕೆ.ಎಸ್.ಆ‌ರ್.ಟಿ.ಸಿ ಬಸ್‌ಸ್ಟ್ಯಾಂಡ್ ಎದುರು ಹೋಟೆಲ್ ದ್ವಾರಕ ರೆಸಿಡೆನ್ಸಿ ಲಾಡ್ಡಿಂಗ್ & ರೆಸ್ಟೋರೆಂಟನ್ನು ನಡೆಸಿಕೊಂಡಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಊರಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿ ಚಿತ್ತೂರಿನಲ್ಲಿ […]

ಉಡುಪಿಯ ಹೋಟೆಲ್ ನಲ್ಲಿ ಉದ್ಯೋಗಾವಕಾಶ

ಉಡುಪಿ:ಉಡುಪಿಯ ಪ್ರಸಿದ್ಧ ಹೋಟೆಲ್‌ಗೆ ವೈಟರ್, ವೆಜ್ / ನಾನ್‌ವೆಜ್ ಕುಕ್ ಹಾಗೂ ಕೌಂಟರ್ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. 📞 ಸಂಪರ್ಕಿಸಿ:+91 94491 04708

ಕಾಂಗ್ರೆಸ್ ಪಕ್ಷದ ಪುಡಿ ರೌಡಿಗಳ ಬೀದಿ ಕಾಳಗಕ್ಕೆ ಕಡಿವಾಣ ಹಾಕಿ : ಉಡುಪಿ ನಗರ ಬಿಜೆಪಿ ಆಗ್ರಹ

ಉಡುಪಿ: ಉಡುಪಿ ನಗರದ ಹೃದಯ ಭಾಗದಲ್ಲಿ ರಾತ್ರಿ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪುಡಿ ರೌಡಿಗಳಂತೆ ಪಾನಮತ್ತರಾಗಿ ಹೊಡೆದಾಡಿಕೊಂಡು ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಆಪ್ತನ ಮೇಲೆ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯಿಂದ ಉಡುಪಿಯ ಜನತೆ ಭಯಭೀತರಾಗಿದ್ದು, ಕಾಂಗ್ರೆಸ್ ಪಕ್ಷದ ಪುಡಿ ರೌಡಿಗಳ ಬೀದಿ ಜಗಳಕ್ಕೆ ಪೊಲೀಸ್ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ನಗರ ಬಿಜೆಪಿ ಆಗ್ರಹ ಮಾಡಿದೆ.ಬಾರ್ ಒಂದರಲ್ಲಿ ನಡೆದ ಘಟನೆಯ ಮುಂದುವರಿದ ಭಾಗವಾಗಿ ಉಡುಪಿ ಮೀನು ಮಾರುಕಟ್ಟೆ ಬಳಿ ತಲವಾರಿನಿಂದ […]

ಉಡುಪಿ:ನಗರ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಿರುವುದು ಸ್ವಾಗತಾರ್ಹ- ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ.

ಉಡುಪಿ:ನಗರ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಿರುವುದು ಸ್ವಾಗತಾರ್ಹ.ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಬೆಂಗಳೂರಿಗೂ ವಿಸ್ತರಣೆ ಮಾಡಿರುವುದು ಶ್ಲಾಘನೀಯ.ಟ್ಯೂರಿಸಂ ಬೆಳವಣಿಗೆಗೆ ಪೂರಕವಾಗಿ ಮೆಡಿಕಲ್‌ ಟ್ಯುಾರಿಸಂ ಹೆಸರಿನಲ್ಲಿ ಐದು ಪ್ರದೇಶದಲ್ಲಿ ಮೆಡಿಕಲ್‌ ಹಬ್ ಸ್ಥಾಪನೆಗೆ ಮುಂದಾಗಿರುವುದು ಉದ್ಯೋಗ ಸೃಷ್ಟಿಕೆ ಸಹಾಯಕವಾಗ ಬಹುದು ಅನ್ನುವುದು ಸರ್ಕಾರದ ನಿರೀಕ್ಷೆ.ಪಶುವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಹೆಚ್ಚಿನ ಅನುದಾನದ ಭರವಸೆ ಆಶಾದಾಯಕ.ಸಣ್ಣ ಕೈಗಾರಿಕೆ ಮತ್ತು ಖಾದಿ ಗುಡಿಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಉತ್ತೇಜನ ಕ್ರಮ ಸ್ವಾಗತಾರ್ಹ. ಕರಾವಳಿಯ ಪ್ರದೇಶದ ಮೀನುಗಾರರ ಸಹಕಾರಿ ಸಂಸ್ಥೆ ಸ್ಥಾಪನೆ […]