ಜಾಲತಾಣಗಳಿಂದ ಮಕ್ಕಳಲ್ಲಿ ಹೆಚ್ಚುತ್ತಿರುವ ಮಾನಸಿಕ ಸಮಸ್ಯೆ: 16ವರ್ಷದೊಳಗಿನವರಿಗೆ ಜಾಲತಾಣ ಬಳಕೆ ನಿಷೇದಕ್ಕೆ ಚಿಂತನೆ!

ಬೆಂಗಳೂರು: 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಆಸ್ಟ್ರೇಲಿಯಾ ಹಾಗೂ ಗೋವಾದಲ್ಲಿ ಈಗಾಗಲೇ ಈ ನಿಯಮವನ್ನು ಜಾರಿಗೆ ತರಲಾಗಿದ್ದು, ಇದೇ ಮಾದರಿಯನ್ನು ಅನುಸರಿಸಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಶುಕ್ರವಾರ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸಾಮಾಜಿಕ ಜಾಲತಾಣಗಳ ದುರುಪಯೋಗ ಗಂಭೀರ ಸಮಸ್ಯೆಯಾಗಿದೆ ಎಂದು […]
ಉತ್ತರ ಪ್ರದೇಶ: ಗಂಡನ ತಮಾಷೆಗೆ ಬೇಸತ್ತು ಪತ್ನಿ ಆತ್ಮಹತ್ಯೆ!

ಲಖನೌ: ಗಂಡ ತಮಾಷೆಗೆ ‘ಮಂಗ’ ಎಂದು ಕರೆದದ್ದರಿಂದ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಖನೌನಲ್ಲಿ ಗುರುವಾರ ನಡೆದಿದೆ.ಮೃತ ಮಹಿಳೆ ತನು ಸಿಂಗ್ ಅವರಿಗೆ ಮಾಡೆಲಿಂಗ್‌ನಲ್ಲಿ ಆಸಕ್ತಿ ಇತ್ತು. ಹಾಗಾಗಿಯೇ, ಪತಿ ಮಾಡಿದ ತಮಾಷೆಯನ್ನು ಗಂಭೀರವಾಗಿ ಪರಿಗಣಿಸಿದ್ದರು ಎನ್ನಲಾಗಿದೆ. ಲಖನೌನ ತಕ್ರೋಹಿ ಪ್ರದೇಶದ ನಿವಾಸಿ ರಾಹುಲ್ ಶ್ರೀವಾಸ್ತವ ಹಾಗೂ ತನು ಅವರು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆಟೋ ಚಾಲಕನಾಗಿರುವ ರಾಹುಲ್ ಅವರು, ತನು ಅವರ ಕುರಿತು ತಮಾಷೆ ಮಾಡುತ್ತಾ ‘ಬಂಡಾರಿಯಾ’ (ಮಂಗ) ರೀತಿ ಕಾಣುತ್ತಿದ್ದೀಯ ಎಂದಿದ್ದರು. […]
ಕರ್ನಾಟಕ ಶಾಲಾ ಶಿಕ್ಷಣ ಮಂಡಳಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಸಾನಿಧ್ಯ ಎಸ್. ನಾಯ್ಕ್ ಸಾಧನೆ.

ಕುಂದಾಪುರ: ಕರ್ನಾಟಕ ಶಾಲಾ ಶಿಕ್ಷಣ ಮಂಡಳಿ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025-26 ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಕುಂದಾಪುರದ ಗುರುಕುಲ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸಾನಿಧ್ಯ ಎಸ್ ನಾಯ್ಕ್ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಕುಂದಾಪುರದ ಖಾರ್ವಿಕೇರಿ ನಿವಾಸಿ ಶ್ರೀಮತಿ ಶ್ಯಾಮಲಾ ಮತ್ತು ಸಂತೋಷ ನಾಯ್ಕ್ ಇವರ ಪುತ್ರಿಯಾಗಿರುವ ಇವರು, ಪ್ರಸ್ತುತ ಚಿತ್ರಕಲಾ ಶಿಕ್ಷಕರಾದ ಮಲ್ಲಪ್ಪ ಇವರ ಮಾರ್ಗದರ್ಶನದಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.
ಮಹೇಶ್ ಬಾಬು ಅಭಿನಯದ ‘ವಾರಣಾಸಿ’ ಸಿನಿಮಾ ಏ.07ರಂದು ಬಿಡುಗಡೆ!

ಎಸ್.ಎಸ್.ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ‘ವಾರಾಣಸಿ’ ಸಿನಿಮಾ 2027ರ ಏಪ್ರಿಲ್ 07ರಂದು ತೆರೆಗೆ ಬರುತ್ತಿದೆ.ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ತಾರಾಬಳಗದಲ್ಲಿದ್ದಾರೆ. ಸಿನಿಮಾದಲ್ಲಿ ಮಹೇಶ್ ಬಾಬು ‘ರುದ್ರ’ ಎಂಬ ಪಾತ್ರದಲ್ಲಿ ಅಭಿನಯಿಸಿದರೆ, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಕ್ರಮವಾಗಿ ‘ಮೋಹಿನಿ’ ಮತ್ತು ‘ಕುಂಭ’ ಎಂಬ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಈ ಚಿತ್ರವು ಪ್ರೀಮಿಯಂ ಫುಲ್ ಸ್ಕ್ರೀಮ್ ಐಮ್ಯಾಕ್ಸ್ ಫಾರ್ಮ್ಯಾಟ್‌ನಲ್ಲಿ ಇರಲಿದೆ. ಇದೊಂದು ಪೌರಾಣಿಕ ಹಿನ್ನೆಲೆಯ ಫ್ಯಾಂಟಸಿ ಚಿತ್ರವಾಗಿದ್ದು, ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್ […]
ಉಡುಪಿ: ಬೇಕಾಗಿದ್ದಾರೆ

ಉಡುಪಿ: ಉಡುಪಿ ಆತ್ರಾಡಿಯಲ್ಲಿರುವ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಶಾಪಿಗೆ ಯುವತಿಯರು/ಮಹಿಳೆಯರು ಬೇಕಾಗಿದ್ದಾರೆ. ಸಮಯ: ಬೆಳಿಗ್ಗೆ 9:00 ರಿಂದ ಸಂಜೆ 6 ಗಂಟೆ ಆಸುಪಾಸಿನವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ಸಂಪರ್ಕಿಸಿ: 9019638466