ಹಿಂದೂ ಸಂಗಮ ಕಾರ್ಯಕ್ರಮ: ಇಂದಿನ ಪೀಳಿಗೆಗೆ ಧಾರ್ಮಿಕ ಶಿಕ್ಷಣ ಅವಶ್ಯಕತೆ ಇದೆ: ಕೇಮಾರು ಶ್ರೀ ಈಶವಿಠ್ಠಲದಾಸ ಸ್ವಾಮೀಜಿ

ಉಡುಪಿ: ಇಂದಿನ ಪೀಳಿಗೆಗೆ ಧಾರ್ಮಿಕ ಶಿಕ್ಷಣದ ಅವಶ್ಯಕತೆ ಇದೆ. ಜೀವನ ಪದ್ದತಿಯಲ್ಲಿ ಆಧುನಿಕತೆ ಅತಿಯಾಗಿ ಅಳವಡಿಸಿಕೊಂಡ ಪರಿಣಾಮವಾಗಿ ಸಂಸ್ಕೃತಿಯನ್ನು ಮರೆಯುತ್ತಿರುವುದು ದುರಂತ ಎಂದು ಕೇಮಾರು ಸಾಂದೀಪನಿ ಮಠದ ಶ್ರೀ ಈಶವಿಠ್ಠಲದಾಸ ಸ್ವಾಮೀಜಿ ತಿಳಿಸಿದರು. ಅವರು ಶನಿವಾರ ಸಂತೆಕಟ್ಟೆಯ ಗೋಪಾಲಪುರದ ಶಿರೂರು ಮಠದ ವಠಾರದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು. ಶಂಕರ್ ಶೆಟ್ಟಿ ಪುತ್ತೂರು, ವಿನೋದ್ ಕುಮಾರ್, ಹಿಂದೂ ಸಂಗಮ ಉಡುಪಿ ನಗರ ಸಂಯೋಜಕ ಮುರುಳಿ ಪೆರಂಪಳ್ಳಿ ಉಪಸ್ಥಿತರಿದ್ದರು. ಸುಜಿತ್ ಶೆಟ್ಟಿ ಕೆಳಾರ್ಕಳಬೆಟ್ಟು ಪ್ರಾಸ್ತಾವಿಕ ಮಾತನಾಡಿದರು. […]

ಕೋಡಿಬೆಂಗ್ರೆ ಸಮುದ್ರದಲ್ಲಿ ಪ್ರವಾಸಿ ದೋಣಿ ಮುಳುಗಡೆ: ಹಲವು ಮಂದಿ ಅಸ್ವಸ್ಥ- ಇಬ್ಬರ ಸ್ಥಿತಿ ಗಂಭೀರ!

ಉಡುಪಿ: ಪ್ರವಾಸಿ ದೋಣಿಯೊಂದು ಸಮುದ್ರದಲ್ಲಿ ಮುಳುಗಿದ ಪರಿಣಾಮ ಇಬ್ಬರು ಗಂಭೀರ ಸೇರಿದಂತೆ ಹಲವು ಮಂದಿ ಅಸ್ವಸ್ಥಗೊಂಡ ಘಟನೆ ಸೋಮವಾರ ಬೆಳಿಗ್ಗೆ ಕೋಡಿಬೆಂಗ್ರೆ ಬೀಚ್ ಸಮೀಪ ನಡೆದಿದೆ. ರೆಸಾರ್ಟ್ ಲ್ಲಿ ಉಳಿದಿದ್ದ ಪ್ರವಾಸಿಗರನ್ನು ವಿಹಾರಕ್ಕೆಂದು ದೋಣಿಯಲ್ಲಿ ಸಮುದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಇದರಲ್ಲಿ ಸುಮಾರು 10-15 ಪ್ರವಾಸಿಗರಿದ್ದರು. ಇವರು ಯಾರು ಕೂಡ ಲೈಫ್ ಜಾಕೆಟ್ ಹಾಕಿಲ್ಲ ಎಂದು ತಿಳಿದುಬಂದಿದೆ. ನೀರಿನಲ್ಲಿ ದೋಣಿ ಅಕಸ್ಮಿಕವಾಗಿ ಮುಳುಗಿದ್ದು, ಎಲ್ಲ ಪ್ರವಾಸಿಗರು ನೀರಿಗೆ ಬಿದ್ದರೆಂದು ತಿಳಿದುಬಂದಿದೆ. ಇದರಲ್ಲಿ ಹಲವು ಮಂದಿಯನ್ನು ರಕ್ಷಿಸಲಾಗಿದೆ. ಆದರೆ ಇದರಲ್ಲಿ […]

ಕೆನಡಾದಲ್ಲಿ ಭಾರತೀಯ ಮೂಲದ ಯುವಕ ಮೃತ್ಯು!

ಕೆನಡಾ: ಕೆನಡಾದಲ್ಲಿ ಗ್ಯಾಂಗ್ ವಾರ್’ಗೆ ಭಾರತೀಯ ಮೂಲದ ಯುವಕನೊಬ್ಬ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮೃತನನ್ನು ಭಾರತೀಯ ಮೂಲದ ಯುವಕ, ವ್ಯಾಂಕೋವರ್ ನಿವಾಸಿ ದಿಲ್ರಾಜ್ ಸಿಂಗ್ ಗಿಲ್ (28) ಎಂದು ಗುರುತಿಸಲಾಗಿದೆ. ಕೆನಡಾದ ಬರ್ನಾಬಿಯಲ್ಲಿ ಗುಂಡಿನ ದಾಳಿಯಾಗಿದ್ದು, ಇದು ಗ್ಯಾಂಗ್ ವಾರ್ ಆಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಜನವರಿ 22ರಂದು ಸಂಜೆ 5.30ರ ಸುಮಾರಿಗೆ ಕೆನಡಾ ವೇಯ 3700 ಬ್ಲಾಕ್ ಬಳಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಬರ್ನಾಬಿ ಆರ್‌ಸಿಎಂಪಿ ಅಧಿಕಾರಿಗಳು ವರದಿ ಮಾಡಿದ್ದಾರೆ. ಅವರು ತಕ್ಷಣವೇ ಸ್ಥಳಕ್ಕೆ […]

ಉಡುಪಿ: ಗಣರಾಜ್ಯೋತ್ಸವ ದಿನದಂದೇ ಯೋಧನಿಗೆ ಅವಮಾನ- ವ್ಯಾಪಕ ಆಕ್ರೋಶ

ಉಡುಪಿ: ದೇಶಕ್ಕಾಗಿ ಹೋರಾಡಿದ ನಿವೃತ್ತ ಸೈನಿಕನಿಗೆ ಗಣರಾಜ್ಯೋತ್ಸವ ದಿನದಂದೇ ಅವಮಾನಪಡಿಸಿದ ಘಟನೆ ಬ್ರಹ್ಮಾವರ ಸಾಸ್ತಾನ ಟೋಲ್‌ ಪ್ಲಾಜಾದಲ್ಲಿ ನಡೆದಿದೆ. ಸಾಸ್ತಾನ ಟೋಲ್ ಮೂಲಕ ಪ್ರಯಾಣಿಸುತ್ತಿದ್ದ ವೇಳೆ ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ನೀಡಲಾಗುವ ಟೋಲ್‌ ವಿನಾಯಿತಿ ಪತ್ರವನ್ನು ತೋರಿಸಿದ್ದರೂ, ಟೋಲ್ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ನಿವೃತ್ತ ಸೈನಿಕ ಶ್ಯಾಮರಾಜ್ ಅವರು ವಿಡಿಯೋ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಶ್ಯಾಮರಾಜ್ ಅವರು ಇವಿ-21ನೇ ಪ್ಯಾರಾ ಸ್ಪೆಷಲ್ […]

ಸಾಹಿತಿ, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಅವರಿಗೆ ಪಂಚಮಿ ಪುರಸ್ಕಾರ ಪ್ರದಾನ

ಉಡುಪಿ: ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಹಕಾರದೊಂದಿಗೆ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಂಡ ಸಂಸ್ಕೃತಿ ಉತ್ಸವದ ಎರಡನೆ ದಿನದ ಕಾರ್ಯಕ್ರಮದಲ್ಲಿ ಉಡುಪಿ ಪಂಚಮಿ ಟ್ರಸ್ಟ್ ಪ್ರಾಯೋಜಿತ ಪಂಚಮಿ ಪುರಸ್ಕಾರವನ್ನು ಸಾಹಿತಿ, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಟಿ.ಎನ್. ಸೀತಾರಾಂ ಅವರು, ಕೃತಕ ಬುದ್ದಿಮತ್ತೆ ಸಾಹಿತ್ಯ, ಸಂಸ್ಕೃತಿಗಳ ಕ್ಷೇತ್ರಕ್ಕೆ ಕಾಲಿಟ್ಟರೆ ಸೃಷ್ಠಿಶೀಲ ಮನಸ್ಸುಗಳು ನಾಶವಾಗಿ ದೊಡ್ಡ ಅಪಾಯ ಉಂಟು […]