ಕೈಲಾಜೆ ಶ್ರೀ ಉಮಾಮಹೇಶ್ವರ ದೇವಸ್ಥಾನ ಅತ್ತೂರು: ದಾನಿಗಳ ನೆರವಿನಿಂದ ಡಾಮಾರಿಕರಣಗೊಂಡ ರಸ್ತೆ ಉದ್ಘಾಟನೆ.

ಕಾರ್ಕಳ: ಕಾರ್ಕಳ ಶ್ರೀ ಉಮಾಮಹೇಶ್ವರ ದೇವಸ್ಥಾನ ಕೈಲಾಜೆ ಅತ್ತೂರು ಇಲ್ಲಿಯ ಸುಮಾರು 200 ಮೀಟರ್ ರಸ್ತೆಗೆ ದಾನಿಗಳ ಮೂಲಕ ದಾಮರಿಕರಣ ಮಾಡಿ ಇಂದು ಉದ್ಘಾಟಿಸಲಾಯಿತು. ದೇವಸ್ಥಾನದ ಅರ್ಚಕರಾದ ಶಿವಶಂಕರ ಭಟ್ ಡಾಮರಿಕರಣಗೊಂಡ ರಸ್ತೆಯನ್ನು ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿಮುಖ್ಯ ಅತಿಥಿಗಳಾಗಿ ಸಿ ಎ ಕಮಲಾಕ್ಷ ಕಾಮತ್ ಭಾಗವಹಿಸಿ ಮಾತನಾಡಿ ದೇವಸ್ಥಾನಗಳಿಗೆ ಸಂಬಂಧಪಟ್ಟ ಮೂಲಭೂತ ಅವಶ್ಯಕತೆಗಳು ದಾನಿಗಳ ಸಹಕಾರದಿಂದ ನಡೆದರೆ ಅ ಮೂಲಕ ದೇವಸ್ಥಾನವೂ ಅಭಿವೃದ್ಧಿಗೊಳ್ಳುತ್ತದೆ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತದೆ. ಭಕ್ತಿ ಶ್ರದ್ಧೆಗಳಿಂದ […]

ಉಡುಪಿ: ಕೋಡಿಬೆಂಗ್ರೆ ಸಮುದ್ರದ ಮಧ್ಯೆ ಪ್ರವಾಸಿ ದೋಣಿ ಮುಳುಗಡೆ ಪ್ರಕರಣ: ಇಬ್ಬರು ಮೃತ್ಯು, ಓರ್ವನ ಸ್ಥಿತಿ ಗಂಭೀರ.!

ಉಡುಪಿ: ಕೋಡಿಬೇಂಗ್ರೆಯ ಡೆಲ್ಟಾ ಬೀಚ್ ಬಳಿ ಸೋಮವಾರ ಬೆಳಿಗ್ಗೆ ಪ್ರವಾಸಿ ದೋಣಿಯೊಂದು ಸಮುದ್ರ ಮಧ್ಯೆ ಮುಳುಗಡೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರವಾಗಿ ಅಸ್ವಸ್ಥಗೊಂಡ ನಾಲ್ವರ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಇನ್ನೋರ್ವ ಸ್ಥಿರವಾಗಿದ್ದಾನೆ. ಮೈಸೂರು ಮೂಲದ ಶಂಕರಪ್ಪ (22) ಮತ್ತು ಸಿಂಧು (23) ಮೃತ ದುರ್ದೈವಿಗಳು. ದಿಶಾ (26) ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಧರ್ಮರಾಜ್ ( 26) ಎಂಬವರು ಚಿಕಿತ್ಸೆಗೆ ಸ್ಪಂದಿಸಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ರೆಸಾರ್ಟ್ ರೊಂದರಲ್ಲಿ […]

ಫೋರ್ & ಸಿಕ್ಸ್ ಕ್ರಿಕೆಟರ್ಸ್ ಮಸ್ಕತ್ ವತಿಯಿಂದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಗೌತಮ್ ಕುಂದಾಪುರರಿಗೆ ಸನ್ಮಾನ

ಮಸ್ಕತ್: ಫೋರ್ & ಸಿಕ್ಸ್ ಕ್ರಿಕೆಟರ್ಸ್ ಮಸ್ಕತ್ ಸಂಘದ ವತಿಯಿಂದ ಭಾರತೀಯ ನೌಕಾದಳದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಗೌತಮ್ ಕುಂದಾಪುರ ಅವರನ್ನು ಗೌರವಿಸುವ ಸನ್ಮಾನ ಸಮಾರಂಭವು ವಾದಿಕಬೀರ ‌ನ ಹೋಟೆಲ್ ಗೋಲ್ಡನ್ ಓಯಾಸಿಸ್‌ನಲ್ಲಿ ಶನಿವಾರ ರಾತ್ರಿ 8 ಗಂಟೆಗೆ ನೆರವೇರಿತು. ಭಾರತೀಯ ನೌಕಾದಳದಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದ ಗೌತಮ್ ಕುಂದಾಪುರ ಅವರು ನೌಕಾ ನಿರ್ಮಾಣ, ಯೋಜನಾ ನಿರ್ವಹಣೆ ಹಾಗೂ ನಾಯಕತ್ವ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗಳನ್ನು ಮಾಡಿರುವುದಕ್ಕಾಗಿ ಸಮುದಾಯದ ಪರವಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಸಂಘದ ಸದಸ್ಯರು […]

ಸಮಾಜದಲ್ಲಿ ಎಂದೆಂದಿಗೂ ಶಿಕ್ಷಕರ ಸ್ಥಾನಮಾನ ಗುರುತರವಾದದ್ದು: ಡಾ.ವಾದಿರಾಜ ಗೋಪಾಡಿ

ಉಡುಪಿ: ಜಗತ್ತು ಅತ್ಯಂತ ವೇಗವಾಗಿ ಬದಲಾವಣೆಗೆ ಒಳಗಾಗುತ್ತಿದೆ. ತಂತ್ರಜ್ಞಾನದ ಯುಗದಲ್ಲಿ ಶಿಕ್ಷಣ ಪದದ ವ್ಯಾಪ್ತಿ ವ್ಯಾಪಕವಾಗಿ ಹಿಗ್ಗುತ್ತಿದೆ. ವಿದ್ಯಾರ್ಥಿಗಳ ನಡುವೆ ಮಾತ್ರವಲ್ಲದೆ ಅಧ್ಯಾಪಕರ ಹಾಗೂ ಶಾಲೆಗಳ ನಡುವೆಯೂ ಸ್ಪರ್ಧೆ ನಿರ್ಮಾಣವಾಗುತ್ತಿದೆ. ಕಲೆ, ಸಂಗೀತ, ಸಾಹಿತ್ಯ ಇವೆಲ್ಲವೂ ಕಾಲಕ್ಕೆ ತಕ್ಕಂತೆ ವಿಕಸನಗೊಳ್ಳುತ್ತಿವೆ. ಮಾರುಕಟ್ಟೆ ಅಧಾರಿತ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿರುವ ಇಂಥ ಸಂದರ್ಭದಲ್ಲಿಯೇ ಶಿಕ್ಷಕರು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ಸಮಾಜ ಮುಂದೆ ಪ್ರದರ್ಶಿಸಬೇಕಾಗಿದೆ. ಭಾವನಾತ್ಮಕ ಮತ್ತು ರಚನಾತ್ಮಕ ಯೋಜನೆಗಳ ಮೂಲಕ ಮುಂದಿನ ಪೀಳಿಗೆಯನ್ನು ಬದುಕು ಮತ್ತು ಭಾರತಕ್ಕಾಗಿ ಸಶಕ್ತಗೊಳಿಸಬೇಕಿದೆ. ಅದಕ್ಕಾಗಿ […]

ಬೆಳ್ತಂಗಡಿ: ಯುವಕ ಆತ್ಮಹತ್ಯೆ

ಯುವಕನೋರ್ವ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಜೆ ಬೆಳ್ತಂಗಡಿಯ ಮದ್ದಡ್ಕದಲ್ಲಿ ನಡೆದಿದೆ. ಮದ್ದಡ್ಕ ಸಹನಾ ಕ್ಲಿನಿಕ್ ವೈದ್ಯರಾದ ಹರೀಶ್ ಶೆಣೈರವರ ಪುತ್ರ ಹೇಮಂತ್ ಶೆಣೈ (28ವ) ಭಾನುವಾರ ಸಂಜೆ ಮನೆಯಲ್ಲಿಯೇ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ ಕಾರಣ ತಿಳಿದು బందిల్ల, ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.