ಉಡುಪಿ: ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಯೋಧನಿಗೆ ಅವಮಾನ ವಿಚಾರ- ಕ್ಷಮೆಯಾಚಿಸಿದ ಟೋಲ್ ಸಿಬ್ಬಂದಿ!

ಉಡುಪಿ: ದೇಶಕ್ಕಾಗಿ ಹೋರಾಡಿದ ನಿವೃತ್ತ ಸೈನಿಕನಿಗೆ ಭಾನುವಾರ ರಾತ್ರಿ ಬ್ರಹ್ಮಾವರ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಅವಮಾನಪಡಿಸಿದ ಘಟನೆ ನಡೆದಿತ್ತು. ಇದೀಗ ತಮ್ಮ ತಪ್ಪಿನಿಂದ ಎಚ್ಚೆತ್ತುಕೊಂಡ ಟೋಲ್ ಸಿಬ್ಬಂದಿ ನಿವೃತ್ತ ಯೋಧನ ಕ್ಷಮೆಯಾಚಿಸಿದ್ದಾರೆ.ಸಾಸ್ತಾನ ಟೋಲ್ ಪ್ಲಾಜಾದ ಸಿಬ್ಬಂದಿಗಳಾದ ಶೀನ ಹಾಗೂ ಸುರೇಶ್ ವಿಡಿಯೋ ಮೂಲಕ ಕ್ಷಮಾಪಣೆ ಕೇಳಿದ್ದಾರೆ. ನಿವೃತ್ತ ಸೈನಿಕ ಶ್ಯಾಮರಾಜ್ ಅವರು ಟೋಲ್ ವಿನಾಯಿತಿ ಪತ್ರವನ್ನು ತೋರಿಸಿದ್ದರೂ, ಟೋಲ್ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಸ್ವತಃ ನಿವೃತ್ತ ಸೈನಿಕ ಶ್ಯಾಮರಾಜ್ ಅವರು ವಿಡಿಯೋ ದಾಖಲಿಸಿ […]
ಜ.26 ರಿಂದ ಜ.30: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ಆಫರ್!

ಮಣಿಪಾಲ: (MSDC) ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಜ.26 ರಿಂದ ಜ.30 ರ ವರೆಗೆ ಉಗುರುಗಳು, ಕೂದಲು, ಚರ್ಮ, ಮೇಕ್ಅಪ್ ಹಾಗೂ ಕಾಸ್ಮೆಟಾಲಜಿ’ಗೆ ವೀಶೆಷ ಕೊಡುಗೆಯನ್ನು ಆಯೋಜಿಸಿದೆ. ಜ.26 ರಿಂದ ಭೇಟಿ ನೀಡಿ ಮತ್ತು ವಿಶೇಷ ಕೊಡುಗೆಗಳನ್ನು ಪಡೆಯಿರಿ. ನಿಮ್ಮ ಉತ್ಸಾಹವನ್ನು ವೃತ್ತಿಜೀವನಕ್ಕೆ ಬದಲಾಯಿಸಿ, ನಮ್ಮ ಕಾಸ್ಮೆಟಾಲಜಿ ಕೋರ್ಸ್‌ಗೆ ಸೇರಿಕೊಳ್ಳಬಹುದು. ಬೆಳಿಗ್ಗೆ 10:00 ರಿಂದ ಸಂಜೆ 04:00 ರವರೆಗೆ. ಕೋರ್ಸ್‌ಗಳು: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಸ್ಥಳ: ಓರೇನ್ ಇಂಟರ್ನ್ಯಾಷನಲ್, 3 ನೇ ಮಹಡಿ, […]
ಕಾರ್ಕಳ ಕ್ರೈಸ್ಟ್ಕಿಂಗ್: 77ನೇ ಗಣರಾಜ್ಯೋತ್ಸವ

ಕಾರ್ಕಳ: ಇಲ್ಲಿನ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ 77ನೇಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಕಳದ ಖ್ಯಾತ ಉದ್ಯಮಿ ವಿವೇಕಾನಂದ ಶೆಣೈ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಸಿದರು. ನಂತರ ಮಾತನಾಡಿದ ಅವರು “ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬಹಳಷ್ಟು ಬಲಿಷ್ಠವಾದ ರಾಷ್ಟ್ರವಾಗಿದೆ ಹಾಗೂ ಜನರ ಪಾಲ್ಗೊಳ್ಳುವಿಕೆಯಿಂದ ಪ್ರಜಾಪ್ರಭುತ್ವ ಇನ್ನಷ್ಟು ಬಲ ಪಡೆಯುತ್ತದೆ” ಎಂದು ಹೇಳಿದರು. ಎಂಟನೇ ತರಗತಿಯ ವಿದ್ಯಾರ್ಥಿನಿ ದಿಯಾ ಶೆಟ್ಟಿ ಹಾಗೂ ಪ್ರಾಥಮಿಕ ವಿಭಾಗದ ಶಿಕ್ಷಕಿ ಶ್ರೀಮತಿ ರಮಿತಾ ಶೆಟ್ಟಿ ಗಣರಾಜ್ಯೋತ್ಸವದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆಯ […]
ಕಾರ್ಕಳ ಜ್ಞಾನಸುಧಾ :77ನೇ ಗಣರಾಜ್ಯೋತ್ಸವ ಸಂಭ್ರಮ

ಕಾರ್ಕಳ: ನಮ್ಮ ಜೀವನ ವಿಧಾನವೇ ಸಂವಿಧಾನ.ಇದರ ಘನತೆ ಗೌರವವನ್ನು ಕಾಪಾಡಿಕೊಂಡು, ಅನುಷ್ಠಾನಗೊಳಿಸಿಕೊಂಡು ಹೋದಾಗ ಗಣರಾಜ್ಯ ದಿನಕ್ಕೆ ಅರ್ಥಬರಲು ಸಾಧ್ಯ. ಶಿಕ್ಷಣ ಕೇವಲ ಅಂಕ ಪಡೆಯುವುದಲ್ಲ. ಅದೊಂದು ಜವಾಬ್ದಾರಿ. ಉತ್ತಮ ನಾಗರಿಕನಾಗುವ ಸಂಕಲ್ಪ ತೊಟ್ಟಾಗ ನಮ್ಮ ದೇಶ ವಿಶ್ವಗುರುವಾಗಲು ಸಾಧ್ಯ ಎಂದು ಕಾರ್ಕಳ ರೋಟರಿ ಕ್ಲಬ್ಬಿನ ಅಂಗ ಸಂಸ್ಥೆ ಅನ್ಸ್ ಕಬ್ಬಿನ ಅಧ್ಯಕ್ಷೆಯಾಗಿರುವ ಶ್ರೀಮತಿ ಜಯಂತಿ ಎ ನಾಯಕ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಕ್ರೀಡಾಂಗಣದಲ್ಲಿ ಜರುಗಿದ 77ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಇದೇ ಸಂದರ್ಭ ಕಾರ್ಕಳ […]
ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಸಂದೀಪ್ ಶೆಟ್ಟಿಗೆ ವಿಶಿಷ್ಟ ಸೇವಾ ಪದಕ.

ಉಡುಪಿ: ಭಾರತೀಯ ಸೇನೆಯು ಪಾಕಿಸ್ತಾನದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ 2025 ರ ಮೇ ತಿಂಗಳಲ್ಲಿ ಭಾರತದ ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ನಡೆಸಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಕರಾವಳಿಯ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಸಂದೀಪ್ ಶೆಟ್ಟಿ ಅವರು 77 ನೇ ಗಣರಾಜ್ಯೋತ್ಸವದ ಸಂದರ್ಭ ರಾಷ್ಟ್ರಪತಿಗಳು ನೀಡುವ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಇವರು ಸದಾಶಿವ ಶೆಟ್ಟಿ ಕೊಂಡಾಡಿ (ಉಡುಪಿ) ಮತ್ತು ದೇವಕಿ ಶೆಟ್ಟಿ ಶಾನಕಟ್ಟು (ಶಂಕರನಾರಾಯಣ) ಅವರ ಪುತ್ರ. ಗ್ರೂಪ್ ಕ್ಯಾಪ್ಟನ್ ಸಂದೀಪ್ ಶೆಟ್ಟಿ […]