ದಿನಕರ ದೇಸಾಯಿ ಪ್ರಶಸ್ತಿ ವಿಜೇತ ಚುಟುಕು ಕವಿ ಗಣೇಶ್ ವೈದ್ಯ ಇನ್ನಿಲ್ಲ

ಉಡುಪಿ: ಪ್ರಖ್ಯಾತ ಚುಟುಕು ಕವಿ ಹಾಗೂ ದಿನಕರ ದೇಸಾಯಿ ಪ್ರಶಸ್ತಿ ವಿಜೇತ ಉಪ್ಪುಂದ ಗಣೇಶ್ ವೈದ್ಯ (53) ಅವರು ಜನವರಿ 23ರಂದು ಹೃದಯಾಘಾತದಿಂದ ಉಡುಪಿಯಲ್ಲಿ ನಿಧನರಾದರು. ಶ್ರೀಯುತರು ಚೆಸ್ ಕೋಚ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದು, ಅನೇಕ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಿ ಮಾರ್ಗದರ್ಶನ ನೀಡಿದ್ದರು. ಸಾಹಿತ್ಯ ಲೋಕದಲ್ಲಿ ತಮ್ಮ ವಿನೂತನ ಚುಟುಕು ಕವಿತೆಗಳ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಗಣೇಶ್ ವೈದ್ಯ ಅವರ ಪ್ರಕಟಿತ ಪುಸ್ತಕಗಳು ಓದುಗರ ಹೃದಯ ಗೆದ್ದಿದ್ದವು. ಸರಳ ಪದಗಳಲ್ಲಿ ಆಳವಾದ ಅರ್ಥ ಹೇಳುವ ಅವರ ಶೈಲಿ ಅಪಾರ […]
ಮುರಳಿ ಕಡೆಕಾರ್‌ಗೆ ತಿಂಗಳೆ ಪ್ರಶಸ್ತಿ

ಉಡುಪಿ: ತಿಂಗಳೆ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ಕೊಡಮಾಡುವ ತಿಂಗಳೆ ಪ್ರಶಸ್ತಿಗೆ ಈ ಬಾರಿ ಶಿಕ್ಷಕ, ಶಾಲಾ ಯಕ್ಷಶಿಕ್ಷಣ ಸಂಘಟಕ, ಸಮಾಜ ಸೇವಕ, ಕಲಾರಂಗದ ಪ್ರ.ಕಾರ್ಯದರ್ಶಿ ಮುರಳಿ ಕಡೆಕಾರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಮಾ.8 ರಂದು ನಡೆಯುವ ತಿಂಗಳೆ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಡುಬಿದಿರೆ:ರಾಜ್ಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ನಲ್ಲಿ ಆಳ್ವಾಸ್ ತಂಡಗಳು ವಿನ್ನರ್ಸ್ ಹಾಗೂ ರನ್ನರ್ಸ್

ಮೂಡುಬಿದಿರೆ: ಕರ್ನಾಟಕ ರಾಜ್ಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಚಾಮರಾಜನಗರ ಜಿಲ್ಲೆಯ ಡಾ ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜನವರಿ 19 ಮತ್ತು 20 ರಂದು ನಡೆಯಿತು. ಬಾಲಕರ ವಿಭಾಗದಲ್ಲಿ 24 ಮತ್ತು ಬಾಲಕಿಯರ ವಿಭಾಗದಲ್ಲಿ 16 ತಂಡಗಳು ಭಾಗವಹಿಸಿದ್ದವು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಎರಡು ಬಾಲಕರ ಹಾಗೂ ಎರಡು ಬಾಲಕಿಯರ ತಂಡಗಳು ಸೇರಿದಂತೆ ಒಟ್ಟು 4 ತಂಡಗಳು ಪಾಲ್ಗೊಂಡಿದ್ದವು. ಲೀಗ್ ಹಾಗು ನಾಕೌಟ್ ಮಾದರಿ ಪಂದ್ಯಾಟದಲ್ಲಿ ಆಳ್ವಾಸ್ ಬಾಲಕ ಹಾಗೂ ಬಾಲಕಿಯರ ‘ಎ’ ತಂಡವು ಚಾಂಪಿಯನ್ಸ್ […]
ಉಡುಪಿ:ಜನನಿ ಶೋರೂಮ್‌ನಲ್ಲಿ 10ನೇ ವಾರ್ಷಿಕೋತ್ಸವ ಪ್ರಯುಕ್ತ ಭರ್ಜರಿ ಆಫರ್

ಉಡುಪಿ:ಜನನಿ ಶೋರೂಮ್ ತನ್ನ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗಾಗಿ ಭರ್ಜರಿ ವಿಶೇಷ ಆಫರ್‌ಗಳನ್ನು ಘೋಷಿಸಿದೆ. ಈ ಆಫರ್‌ಗಳು ಮೇ 3, 2026ರವರೆಗೆ ಲಭ್ಯವಿದ್ದು, ಗ್ರಾಹಕರಿಗೆ ಒಟ್ಟು ₹20 ಲಕ್ಷಕ್ಕೂ ಅಧಿಕ ಮೊತ್ತದ ಬಹುಮಾನಗಳು ಹಾಗೂ ಮೌಲ್ಯ ದ 555 ಸ್ಪೆಷಲ್ ಬಹುಮಾನಗಳನ್ನು ಗೆಲ್ಲುವ ಅವಕಾಶ ನೀಡಲಾಗಿದೆ. ಈ ವಿಶೇಷ ಆಫರ್ ಅಡಿಯಲ್ಲಿ ಗ್ರಾಹಕರು ₹2,50,000 ಮೌಲ್ಯದ ಡೈಮಂಡ್ ವೋಚರ್, ₹1,00,000, ₹75,000 ಮತ್ತು ₹50,000 ಮೌಲ್ಯದ ಗೋಲ್ಡ್ ವೋಚರ್‌ಗಳು ಸೇರಿದಂತೆ ವಿವಿಧ ಮೌಲ್ಯದ ಗಿಫ್ಟ್ ವೌಚರ್‌ಗಳನ್ನು ಪಡೆಯುವ […]
ಕಾರ್ಕಳ ಕ್ರೈಸ್ಟ್ಕಿಂಗ್: ಪ್ರೌಢ ಶಾಲಾ ವಾರ್ಷಿಕೋತ್ಸವ

ಕಾರ್ಕಳ: ಇಲ್ಲಿನ ಕ್ರೈಸ್ಟ್ಕಿಂಗ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಜ. 22ರಂದು ಸಂಸ್ಥೆಯ ಹೊಸ ಸಭಾಂಗಣದಲ್ಲಿ ನಡೆಯಿತು. ಕಾರ್ಕಳದ ಪ್ರಸಿದ್ಧ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಕೆ. ಕಮಾಲಾಕ್ಷ ಕಾಮತ್, ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ವಿದ್ಯಾರ್ಥಿಗಳು ದೇವರಿಗೆ, ಹೆತ್ತವರಿಗೆ, ಗುರುಗಳಿಗೆ ಗೌರವ ನೀಡುವುದನ್ನು ಎಳವೆಯಲ್ಲಿಯೇ ನಿಮ್ಮಲ್ಲಿ ರೂಢಿಸಿಕೊಳ್ಳಿ ಹಾಗೂ ಉತ್ತಮ ಸಂಸ್ಕಾರದಿಂದ ಕೂಡಿದ ವಿದ್ಯೆಯನ್ನು ಕಲಿತು ಬದುಕಿನಲ್ಲಿ ಯಶಸ್ವಿಯಾಗಿ” ಎಂದು ಹಾರೈಸಿದರು. ಅತಿಥಿಗಳಾಗಿ ಆಗಮಿಸಿದ್ದ ಬೈಲೂರು ಆಂಗ್ಲ ಮಾಧ್ಯಮ […]