ಬ್ರಹ್ಮಾವರ: ಟ್ರಕ್ ನ ಚಕ್ರದಡಿ ಸಿಲುಕಿ ಬೈಕ್ ಸವಾರ ಮೃತ್ಯು

ಉಡುಪಿ: ಟ್ರಕ್ ನ ಚಕ್ರದಡಿ ಸಿಲುಕಿ ಬೈಕ್ ನ ಸವಾರನೋರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಪ್ಪೂರು ಕೆ.‌ಜಿ ರೋಡ್ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಮೃತ ಸವಾರ‌ನನ್ನು ಬ್ರಹ್ಮವಾರ ಮಟಪಾಡಿಯ ನಿವಾಸಿ ಅಭಿಷೇಕ್ (25) ಎಂದು ಗುರುತಿಸಲಾಗಿದೆ. ಇವರು‌ ವಿದ್ಯೋದಯ ಪಬ್ಲಿಕ್ ಸ್ಕೂಲ್ ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಚಕ್ರದಡಿಗೆ ಸಿಲುಕಿದ ಪರಿಣಾಮ ಬೈಕ್ ಸವಾರನ ದೇಹವು ಛಿದ್ರಗೊಂಡಿದೆ. ಘಟನಾ ಸ್ಥಳದಲ್ಲಿದ್ದು ಬ್ರಹ್ಮಾವರ ಆರಕ್ಷಕ ಠಾಣೆಯ‌ ಮುಖ್ಯ ಆರಕ್ಷಕ ಮಹಾಲಿಂಗ ಮಹಜರು ಪ್ರಕ್ರಿಯೆ ನಡೆಸಿದರು. […]

ಮಂಗಳೂರು: ರೀಲ್ಸ್ ಸ್ಟಾರ್ ಆಶಾ ಪಂಡಿತ್ ನಿಧನ

ಮಂಗಳೂರು: ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕವೇ ಹವಾ ಸೃಷ್ಟಿಸಿದ್ದ ನಾಗುರಿ ನಿವಾಸಿ ಆಶಾ ಪಂಡಿತ್ ಗುರುವಾರ (ಜ.23) ರಾತ್ರಿ ನಿಧನ ಹೊಂದಿದ್ದಾರೆ. ಆಶಾ ಪಂಡಿತ್ ತಮ್ಮ ಚಿತ್ರ ವಿಚಿತ್ರ ರೀಲ್ಸ್ಗಳಿಂದಲೇ ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯತೆ ಗಳಿಸಿದ್ದರು. ಪಡೀಲ್ ಬಳಿ ಸಣ್ಣ ಗೂಡಂಗಡಿ ಹೊಂದಿದ್ದರು. ನಿನ್ನೆ ರಾತ್ರಿ ವಾಂತಿ ಸಮಸ್ಯೆ ಉಂಟಾಗಿದ್ದು, ನಂತರ ಹೃದಯಾಘಾತಕ್ಕೆ ತುತ್ತಾಗಿ ಅಂಗಳದಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಕುರಿತು ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಗೂ ಪೋಸ್ಟ್ ಮಾಡಿದ್ದು […]

ಉಡುಪಿ:ಜೀವ ರಕ್ಷಕ ಸಿಬ್ಬಂದಿಗಳ ತರಬೇತಿ

ಉಡುಪಿ: ಉಡುಪಿ ಜಿಲ್ಲೆಯ ಪಡುವರಿ ಸೋಮೇಶ್ವರ ಬೀಚ್, ತ್ರಾಸಿ-ಮರವಂತೆ ಬೀಚ್, ಆಸರೆ ಬೀಚ್, ಮಲ್ಪೆ ಬೀಚ್, ಸೈಂಟ್ ಮೇರೀಸ್ ದ್ವೀಪ, ಕಾಪು ಬೀಚ್ ಹಾಗೂ ಪಡುಬಿದ್ರಿ ಮುಖ್ಯ ಬೀಚ್ ಗಳಲ್ಲಿ ಜೀವ ರಕ್ಷಕ ಸಿಬ್ಬಂದಿಗಳ ನಿಯೋಜನೆಗಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 20 ಜನರಿಗೆ ಜೀವ ರಕ್ಷಕ ತರಬೇತಿ ನೀಡಲಾಗುತ್ತಿದ್ದು, ಕನಿಷ್ಟ 18 ರಿಂದ 40 ವರ್ಷ ವಯೋಮಿತಿಯೊಳಗಿನ 1 ಕಿ.ಮೀ ಓಟ ಮತ್ತು 400 ಮೀ ಈಜಲು ಸಾಮರ್ಥ್ಯ ಹೊಂದಿರುವ ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ-ವಿವರದೊಂದಿಗೆ ಫೆಬ್ರವರಿ […]

ಉಡುಪಿ:ಅಸಂಘಟಿತ ಕಾರ್ಮಿಕರು ಕೇಂದ್ರ ಪಿಂಚಣಿ ಯೋಜನೆಗಳ ಲಾಭ ಪಡೆಯುವಂತಾಗಲಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಅಸಂಘಟಿತ ವಲಯದ ಕಾರ್ಮಿಕರುಗಳು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಹಾಗೂ ಎನ್.ಪಿ.ಎಸ್ ಟ್ರೇಡರ್ಸ್ ಎಂಬ ಮಹತ್ವಾಕಾಂಕ್ಷಿ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಎಲ್ಲಾ ವರ್ಗದ ಅಸಂಘಟಿತ ಕಾರ್ಮಿಕರುಗಳು ಈ ಯೋಜನೆಗಳಡಿ ನೋಂದಾಯಿಸಿಕೊಳ್ಳುವಂತೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು. ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಸರ್ಕಾರದ ಪ್ರಧಾನಮಂತ್ರಿಶ್ರಮಯೋಗಿ ಮಾನ್ […]