ಜ. 24ರಿಂದ 26ರ ವರೆಗೆ ಬೈಂದೂರು ಉತ್ಸವ: ಉತ್ಸವದಲ್ಲಿ ಕೃಷಿಮೇಳ, ಬೀಚ್ ಉತ್ಸವ, ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು!

ಬೈಂದೂರು: ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆಯಲ್ಲಿ, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾರ್ಗದರ್ಶನದಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ಜ. 24ರಿಂದ 26ರವರೆಗೆ ವಿಜೃಂಭಣೆಯಿಂದ ಎರಡನೇ ವರ್ಷದ ಬೈಂದೂರು ಉತ್ಸವ ನಡೆಯಲಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದರು. ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ‌ ಅವರು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜನೋಪಯೋಗಿ ಕಾರ್ಯಕ್ರಮಗಳ ಕಲ್ಪನೆ ಇಟ್ಟುಕೊಂಡು ನಡೆಸಿದ 43 ಗ್ರಾಮೋತ್ಸವಗಳು ಜಿಲ್ಲಾಡಳಿತದ ಸಹಕಾರದಿಂದ ಯಶಸ್ವಿಯಾಗಿದೆ. ಗ್ರಾಮೋತ್ಸವದಲ್ಲಿ 48 ಸಾವಿರ ಜನ ಭಾಗವಹಿಸಿ ವಿವಿಧ ಆರೋಗ್ಯ ಪರೀಕ್ಷೆ ಮಾಡಿಕೊಂಡು ಪ್ರಯೋಜನ […]

ಮಣಿಪಾಲ ಒರೇನ್ ಇಂಟರ್ ನ್ಯಾಷನಲ್ MSDC ಯಲ್ಲಿ ಬ್ಯೂಟಿ ಮತ್ತು ವೆಲ್‌ನೆಸ್ ಕ್ಷೇತ್ರದಲ್ಲಿ ಯಶಸ್ವಿಯಾಗಲು ನಿಮಗೆ ಕಾದಿದೆ ಅದ್ಬುತ ಅವಕಾಶ

ಮಣಿಪಾಲ: ಒರೇನ್ ಇಂಟರ್‌ನ್ಯಾಷನಲ್ MSDC – ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಕಾಸ್ಮೆಟಾಲಜಿ ವಿಭಾಗದಲ್ಲಿ ಬಿ.ವಾಕ್ (B.Voc) ಒರೇನ್ ಇಂಟರ್‌ನ್ಯಾಷನಲ್ ಜೊತೆ ಕಾಸ್ಮೆಟಾಲಜಿಯಲ್ಲಿ ಬಿ.ವಾಕ್ ಪದವಿ ಪಡೆದು, UGC ಮಾನ್ಯತೆ ಪಡೆದ ಶಿಕ್ಷಣ ಹಾಗೂ ಉದ್ಯಮೋಚಿತ ಕೌಶಲ್ಯಗಳನ್ನು ಸಂಪಾದಿಸಿ, ಬ್ಯೂಟಿ ಮತ್ತು ವೆಲ್‌ನೆಸ್ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿ ನಿರ್ಮಿಸಿಕೊಳ್ಳಲು ಈಗ ಸದವಕಾಶ. ಅರ್ಹತೆ: 10+2 (ಪಿಯುಸಿ)ಆಕರ್ಷಕ ವೃತ್ತಿ ಅವಕಾಶಗಳಿಗೆ ತೆರೆದುಕೊಳ್ಳಿ!ಕಾಸ್ಮೆಟಾಲಜಿಯಲ್ಲಿ ಬಿ.ವಾಕ್ ಎಂಬುದು 3 ವರ್ಷಗಳ ಪದವಿ ಕೋರ್ಸ್ ಆಗಿದ್ದು, ಸೌಂದರ್ಯ ಚಿಕಿತ್ಸೆಗಳು (Beauty Therapy)ಮೇಕಪ್ ಕಲೆ […]

ಜ.25ರಂದು ಕಾಪುವಿನಲ್ಲಿ “ಕೋಸ್ಟಲ್ ಆಟೋ ಕಾರ್ನಿವಲ್ ಕಾರ್ಯಕ್ರಮ”

ಉಡುಪಿ: ಗೋಲ್ಡ್ ಕೋಸ್ಟ್ ಎಂಟರ್‌ಟೈನ್‌ಮೆಂಟ್ ವತಿಯಿಂದ ಕೋಸ್ಟಲ್ ಆಟೋ ಕಾರ್ನಿವಲ್ ಕಾರ್ಯಕ್ರಮವನ್ನು ಇದೇ ಜ.25ರಂದು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕಾಪುವಿನ ಪ್ಯಾಲೇಸ್ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕ ಸುದೀಪ್ ಶೆಟ್ಟಿ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮದಲ್ಲಿ ಕಸ್ಟಮ್ ಕಾರುಗಳು, ಮೋಟಾರ್‌ ಸೈಕಲ್‌ಗಳು ಮತ್ತು ವಿಂಟೇಜ್ ವಾಹನಗಳ ಪ್ರದರ್ಶನ ನಡೆಯಲಿದೆ. ಪರ್ಫಾರ್ಮೆನ್ಸ್ ಮತ್ತು ವಿಶೇಷ ಪ್ರದರ್ಶನಗಳು, ಲೈವ್ ಆಕ್ಷನ್ ವಲಯಗಳು ಮತ್ತು ಸ್ಟಂಟ್ ಪ್ರದರ್ಶನಗಳು, ಆಹಾರ ಮಳಿಗೆಗಳು, […]

ಶೋಧನ್ ಜೈನ್ ಕೊಡಗುತ್ತು ನಿರ್ಮಿಸಿದ ಕಾಂತೇಶ್ವರ ದೇವರ ಭಕ್ತಿ ಗೀತೆಯ ಆಲ್ಬಂ ಸಾಂಗ್ ಲೋಕಾರ್ಪಣೆ.

ಕಾಂತಾವರ: ಕಾಂತಾವರದ ಶ್ರೀ ಕಾಂತೇಶ್ವರ ದೇವರ ಜಾತ್ರಾ ಮಹೋತ್ಸವದ ರಥೋತ್ಸವದಂದು ಶೋಧನ್ ಎಂ.ಜೈನ್ ಕೊಡಗುತ್ತು ನಿರ್ಮಿಸಿದ ಕಾಂತೇಶ್ವರ ದೇವರ ಭಕ್ತಿ ಗೀತೆಯ ಆಲ್ಬಂ ಸಾಂಗ್ ನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಜೀವಂಧರ ಬಲ್ಲಾಳ್ ಅವರು ಲೋಕಾರ್ಪಣೆಗೊಳಿಸಿದರು. ಹಿನ್ನೆಲೆ ಗಾಯಕರಾದ ಅನೀಶ್ ಕಿನ್ನಿಗೋಳಿ, ವಿದ್ಯಾ ಬೇಲಾಡಿ, ಬರಹಗಾರ ಶೈಲೇಶ್ ಆಚಾರ್ಯ ಮೈಲೂಟ್ಟು ಮತ್ತು ಸಲಹೆಗಾರರಾದ ಮನೀಶ್ ಶೆಟ್ಟಿ ಕಾಂತಾವರ, ಅಭಿಮಾನ್ ಎಂ.ಜೈನ್ ಮತ್ತು ಶ್ರೀಮನ್ ಎಂ.ಜೈನ್ ಉಪಸ್ಥಿತರಿದ್ದರು. ಕಾಂತೇಶ್ವರ ದೇವರ ಸುಂದರ ಭಕ್ತಿಗೀತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ […]

ಕಾರ್ಕಳ: ಖಾಸಗಿ ಬಸ್- ತುಫಾನ್ ವಾಹನದ ಮಧ್ಯೆ ಭೀಕರ ಅಪಘಾತ: ಮೂವರು ಮೃತ್ಯು, ಆರು ಮಂದಿಗೆ ಗಾಯ

ಉಡುಪಿ: ಖಾಸಗಿ ಬಸ್ ಮತ್ತು ತುಫಾನ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾರ್ಕಳ ತಾಲೂಕಿನ ಮಿಯಾರು ಕಂಬಳಕ್ರಾಸ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಧರ್ಮಸ್ಥಳದಿಂದ ಕಾರ್ಕಳದ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಮಿಯಾರು ಕಂಬಳಕ್ರಾಸ್ ಬಳಿ ಅತೀ ವೇಗವಾಗಿ ಬಂದು ವಿರುದ್ಧ ದಿಕ್ಕಿನಲ್ಲಿ ನುಗ್ಗಿದೆ. ಈ ವೇಳೆ ಕಾರ್ಕಳದಿಂದ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ತುಫಾನ್ ವಾಹನಕ್ಕೆ ಬಸ್‌ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ […]