ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಅನ್ನಪೂರ್ಣ ಶೆಣೈಯವರಿಗೆ ಐಇಇಇ ಅತ್ಯುತ್ತಮ ವಿದ್ಯಾರ್ಥಿ ಸ್ವಯಂಸೇವಕ ಪ್ರಶಸ್ತಿ

ಉಡುಪಿ:ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಅನ್ನಪೂರ್ಣ ಶೆಣೈ ಇವರಿಗೆ ಐಇಇಇ ಘಟಕ ಬೆಂಗಳೂರು ವಿಭಾಗದಿಂದ ಉತ್ತಮ ವಿದ್ಯಾರ್ಥಿ ಸ್ವಯಂ ಸೇವಕಿಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯನ್ನು ದಿನಾಂಕ 18 ಜನವರಿ 2026 ರಂದು ಬೆಂಗಳೂರಿನಲ್ಲಿ ಆಯೋಜಿಸಲಾದ ಐಇಇಇ ಬೆಂಗಳೂರು ವಿಭಾಗದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೀಡಲಾಯಿತು. ಈ ಪ್ರಶಸ್ತಿಯು ಅನ್ನಪೂರ್ಣ ಶೆಣೈ ಇವರು ಐಇಇಇ ಘಟಕದ ವಿದ್ಯಾರ್ಥಿ ಚಟುವಟಿಕೆಯನ್ನು ಬಲಪಡಿಸುವಲ್ಲಿ ತೋರಿದ ನಾಯಕತ್ವ, ಸಮರ್ಪಣೆ ಹಾಗೂ ನಿರಂತರ ಸೇವೆ ಮತ್ತು ತಾಂತ್ರಿಕ […]

ಉಡುಪಿ:ತ್ರಿಶಾ ಸಂಸ್ಥೆ: ಜನವರಿ 2026ರ ಸಿಎಸ್‌ಇಇಟಿ (CSEET) ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಉಡುಪಿ:ತ್ರಿಶಾ ಸಂಸ್ಥೆಯ (ಉಡುಪಿ ಮತ್ತು ಮಂಗಳೂರು) ವಿದ್ಯಾರ್ಥಿಗಳು ಜನವರಿ 2026ರಲ್ಲಿ ನಡೆದ ಸಿಎಸ್‌ಇಇಟಿ (CSEET) ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳನ್ನು ಗಳಿಸಿದ್ದಾರೆ. ತ್ರಿಶಾ ವಿದ್ಯಾ ಡೇ ಮತ್ತು ಇವಿನಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಶಾಂತ್(176), ಓಂಕಾರ್ ವೆರ್ಣೇಕರ್(173), ಯಲ್ಕೂರ್ ರಾಘವೇಂದ್ರ(172), ಪೂಜಿತ್(164), ದೀಕ್ಷಾ ಜಿ. ಕೆ.(163), ಅದಿತಿ ದೇವಿ ಭಟ್(154), ದೃಶ್ಯ ಜಿ. ದೇವಡಿಗ(153), ದೀಕ್ಷಾ ಬಿ. ಎಚ್.(148), ಆದಿತ್ಯ ಎನ್. ರಾಯ್ಕರ್(148), ಮಾನ್ಸಿ(156), ಸಂಜನಾ (144) ಮತ್ತು ಸಿಂಧು ಭಟ್(138), ವಿಸ್ಮಿತಾ ಪಿ(153), ರಾಘವ ಸಾರಂಗ(128), ಶ್ರೇಯಸ್(123), ನವ್ಯ(100), […]

ಹಾಸನ: HKS ಪಿಯು ಕಾಲೇಜಿನಲ್ಲಿ ಉದ್ಯೋಗಾವಕಾಶ

ಹಾಸನದಲ್ಲಿರುವ HKS ಪ್ರೀ-ಯುನಿವರ್ಸಿಟಿ ಕಾಲೇಜಿನಲ್ಲಿ ಕೆಳಕಂಡ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 🔸ಆಫೀಸ್ ಅಟೆಂಡರ್ (ಕಚೇರಿ ಸಹಾಯಕ)🔸ಸ್ಕೂಲ್ ಬಸ್ ಡ್ರೈವರ್ (ಶಾಲಾ ವಾಹನ ಚಾಲಕ) ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ, ಉಚಿತ ಊಟ ಹಾಗೂ ವಸತಿ ಸೌಲಭ್ಯಗಳೂ ಲಭ್ಯವಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞 +91 9972528825

ವಿದೇಶದಲ್ಲಿ ಉದ್ಯೋಗಾವಕಾಶ

ವಿದೇಶದ ಪ್ರತಿಷ್ಠಿತ ರೆಸ್ಟೋರೆಂಟ್‌ನಲ್ಲಿ ಪದವೀಧರ ಸರ್ವರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದವರಿಗೆ ತಿಂಗಳಿಗೆ ರೂ.50,000 ಪ್ರಾರಂಭಿಕ ವೇತನ ದೊರೆಯಲಿದೆ. ಜೊತೆಗೆ ಆಹಾರ, ವಸತಿ, ವೈದ್ಯಕೀಯ ಸೌಲಭ್ಯ ಹಾಗೂ ವಿಮಾನ ಟಿಕೆಟ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಾರಕ್ಕೆ ಒಂದು ದಿನ ರಜೆ ಇರುತ್ತದೆ.ಆಸಕ್ತರು ತಮ್ಮ ವಿವರಗಳನ್ನು ವಾಟ್ಸಾಪ್ ಮೂಲಕ 9686277001 ಸಂಖ್ಯೆಗೆ ಕಳುಹಿಸಬಹುದು.

ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಬಿಜೆಪಿಯಿಂದ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಮುತ್ತಿಗೆ: ಕುತ್ಯಾರು ನವೀನ್ ಶೆಟ್ಟಿ

ಉಡುಪಿ: ಪರ್ಯಾಯ ಮಹೋತ್ಸವದ ಶೋಭಾಯಾತ್ರೆಗೆ ಉಡುಪಿ ಶ್ರೀ ಕೃಷ್ಣ ಮಠದ ಯತಿಗಳ ಉಪಸ್ಥಿತಿಯಲ್ಲಿ ಭಗವಾಧ್ವಜವನ್ನು ಹಾರಿಸಿ ಚಾಲನೆ ನೀಡಿರುವ ಉಡುಪಿ ಜಿಲ್ಲಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ವಹಿಸುವಂತೆ ಕಾಂಗ್ರೆಸ್ ಮಾಡಿರುವ ಮನವಿಗೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಮುಂದಾದರೆ ಬಿಜೆಪಿಯಿಂದ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ಉಡುಪಿ ಜಿಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. ಸದಾ ಹಿಂದೂ ವಿರೋಧಿ ನೀತಿಗಳ ಮೂಲಕ ಮತೀಯ ಶಕ್ತಿಗಳ ಓಲೈಕೆಗಾಗಿ ಮುಂದಾಗಿರುವ ರಾಜ್ಯ […]