ನಾಸಾಗೆ ಭಾರತೀಯ ಮೂಲದ ಖ್ಯಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ನಿವೃತ್ತಿ!

ಟೆಕ್ಸಾಸ್: ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿಯಾಗಿದ್ದಾರೆ.ಸುನಿತಾ ವಿಲಿಯಮ್ಸ್ ಅವರು ಡಿಸೆಂಬರ್ 27ರಂದು (2025) ನಿವೃತ್ತಿಯಾಗಿದ್ದಾರೆ ಎಂದು ನಾಸಾ ಮಂಗಳವಾರ ಘೋಷಣೆ ಮಾಡಿದೆ. ಅವರು 27 ವರ್ಷಗಳ ಕಾಲ ನಾಸಾದ ಗಗನಯಾನಿಯಾಗಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅವರ ಸೇವೆ ಅಸಾಧಾರಣವಾದುದು, ಅವರ ಯೋಜನೆಗಳು ಚಂದ್ರ ಮತ್ತು ಮಂಗಳ ಗ್ರಹದತ್ತ ತೆರಳುವ ನಮ್ಮ ಪ್ರಯತ್ನಗಳಿಗೆ ಭದ್ರ ಅಡಿಪಾಯ ಹಾಕಿದೆ. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿವೆ. ನಾಸಾ ಮತ್ತು ನಮ್ಮ ರಾಷ್ಟ್ರಕ್ಕೆ ಅವರು ನೀಡಿದ ಸೇವೆಗೆ […]
ಉಡುಪಿ:ತುಳು ಲಿಪಿಯಲ್ಲಿ ‘ಕೋಟಿ ಗೀತಾ ಲೇಖನ ಯಜ್ಞ’ ಬರೆದು ಮುಂಬಯಿಯ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆ ಪಡೆದ ಹೇಮಂತ್ ಶೆಟ್ಟಿ

ಉಡುಪಿ:ಮುಲುಂಡ್ ನ ನಿವಾಸಿ , ಮುಲುಂಡ್ ಬಂಟ್ಸ್ ನ ತಂತ್ರಜ್ಞಾನ ಸಮಿತಿಯ ( ಐಟಿ ) ಕಾರ್ಯಾಧ್ಯಕ್ಷ ಹೇಮಂತ್ ಶೆಟ್ಟಿಯವರು ವಿಶೇಷವಾಗಿ ತುಳು ಲಿಪಿಯಲ್ಲಿ “ಕೋಟಿ ಗೀತಾ ಲೇಖನ ಯಜ್ಞ” ವನ್ನು ಬರೆದು ಉಡುಪಿಯ ಗೀತಾ ಮಂದಿರದಲ್ಲಿ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ಅರ್ಪಿಸಿದರು. ಮತ್ತು ಸ್ವಾಮೀಜಿಯವರಿಂದ ಆಶೀರ್ವಾದವನ್ನು ಪಡಕೊಂಡರು . ಈ ಮೂಲಕ ಹೇಮಂತ್ ಶೆಟ್ಟಿಯವರು ತುಳು ಲಿಪಿಯಲ್ಲಿ ಕೋಟಿ ಗೀತಾ ಲೇಖನ ಯಜ್ಞ ಪವಿತ್ರ ಭಗವದ್ಗೀತೆಯ ಸಾರವನ್ನು ಬರೆದ ಮುಂಬಯಿ ಪ್ರಥಮ […]
ಡ್ರಗ್ಸ್ ಪೆಡ್ಲರ್’ಗಳ ವಿರುದ್ಧ ನಿರ್ದಾಕ್ಷಿಣ ಕ್ರಮ: ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು: ಗಾಂಜಾ ಮತ್ತಿತರ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಕೊನೆಯ ಪೆಡ್ಲರ್ ಬಂಧನವಾಗುವವರೆಗೂ ಕಾರ್ಯಾಚರಣೆ ಮುಂದುವರಿಯಲಿದ್ದು, ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು. ಮಾದಕ ವಸ್ತುಗಳ ವಿರುದ್ಧದ ಜಾಗೃತಿ ಪ್ರಯುಕ್ತ ಮಂಗಳವಾರ ಇಲ್ಲಿ ನಡೆದ ಶಿಕ್ಷಣ ಸಂಸ್ಥೆಗಳ ಪ್ರಮುಖರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು. ಡ್ರಗ್ಸ್ ವಿತರಣಾ ಜಾಲ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಇತ್ತೀಚೆಗೆ ನಡೆಸಿದ ಕಾಲೇಜು ವಿದ್ಯಾರ್ಥಿಗಳ […]
ಮಣಿಪಾಲ:ಶೀಘ್ರದಲ್ಲೇ ವಾರಾಂತ್ಯ ಯೋಗ ತರಗತಿಗಳು ಆರಂಭ

ಉಡುಪಿ:ಮಣಿಪಾಲದ ಪ್ರಿಸಂ ಸ್ಟುಡಿಯೋ (ಕ್ರಿಸ್ಟಲ್ ಬಿಸಿನೆಸ್ ಹಬ್, ಡಿಸಿ ಆಫೀಸ್ ಸಮೀಪ) ನಲ್ಲಿ ವಾರಾಂತ್ಯ ಯೋಗ ಕ್ಲಾಸ್‌ಗಳು ಶೀಘ್ರದಲ್ಲೇ ಆರಂಭಗೊಳ್ಳಲಿವೆ. ದೇಹ–ಉಸಿರಾಟ–ಜಾಗೃತಿಯ ಸಮನ್ವಯದ ಮೂಲಕ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುವ ಈ ತರಗತಿಗಳನ್ನು ಡಾ. ಸ್ವರೂಪಾ ಮೊರೆ ನಡೆಸಲಿದ್ದಾರೆ. ಶನಿವಾರ ಮತ್ತು ಭಾನುವಾರ ಬೆಳಗ್ಗೆ 7 ರಿಂದ 8 ಗಂಟೆಯವರೆಗೆ ತರಗತಿಗಳು ನಡೆಯಲಿದ್ದು, ನೋಂದಣಿಗಾಗಿ ಸಂಪರ್ಕಿಸಿ:📞 7676843931 / 8310159071
ಕೇಸರಿ ಧ್ವಜ ಪ್ರದರ್ಶನ: ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ.

ಉಡುಪಿ: ಜ.18ರ ಮುಂಜಾನೆ ನಗರದ ಜೋಡುಕಟ್ಟೆ ಬಳಿ ನಡೆದ ಶೀರೂರು ಪರ್ಯಾಯದ ಪುರಮೆರವಣಿಗೆ ಸಂದರ್ಭ ಆರೆಸ್ಸೆಸ್ ಧ್ವಜ ಹಿಡಿದು ಹಾರಿಸುತ್ತಾ ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ಸೆಲ್ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಪತ್ರ ಬರೆದಿದೆ. ಮುಂಜಾನೆ 3:00ಗಂಟೆ ಸುಮಾರಿಗೆ ಮೆರವಣಿಗೆಯ ವೇಳೆ ಉಪಸ್ಥಿತರಿದ್ದ ಜಿಲ್ಲಾಧಿಕಾರಿಯವರ ಕೈಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಆರೆಸ್ಸೆಸ್ ಧ್ವಜ (ಭಗವಾನ್‌ಧ್ವಜ) […]