ಕಾರ್ಕಳ: ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್‌ನಲ್ಲಿ ಉದ್ಯೋಗಾವಕಾಶ

ಕಾರ್ಕಳ:ಕಾರ್ಕಳದ ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್ ಸಂಸ್ಥೆಯಲ್ಲಿ ಡಿಸಿಪ್ಲಿನ್ ಆಫೀಸರ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಭೂಸೇನೆ / ರಕ್ಷಣಾ ಇಲಾಖೆ (Ex-Army / Defence) ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಹರಾಗಿರಬೇಕು.ಶಾಲೆ ಅಥವಾ ಶಿಕ್ಷಣ ಸಂಸ್ಥೆಗಳ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ವಸತಿ ಅಭ್ಯರ್ಥಿಗಳಿಗೆ (Residential) ಅವಕಾಶ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಸಂಪರ್ಕಿಸಬಹುದು:📞+91 96069 97391ಇಮೇಲ್: [email protected]
ಸಿದ್ದಾಪುರ ಏತ ನೀರಾವರಿ ಯೋಜನೆಗೆ ಸರ್ಕಾರದಿಂದ ತಡೆ: ರೈತ ಸಂಘ ಮತ್ತು ಎಂಟು ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸಿದ್ದಾಪುರ ಏತ ನೀರಾವರಿ ಯೋಜನೆಗೆ ಸರ್ಕಾರದಿಂದ ತಡೆ ಬಿದ್ದಿದೆ. ಇದರ ವಿರುದ್ಧ ರೈತ ಸಂಘ, ಬಿಜೆಪಿ ಮತ್ತು 8 ಗ್ರಾಮದ ಗ್ರಾಮಸ್ಥರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಸಿದ್ದಾಪುರದಲ್ಲಿ ಜನಾಗ್ರಹ ಸಭೆ ಯುತ್ತಿದ್ದು ಪ್ರತಾಪ್ ಚಂದ್ರ ಶೆಟ್ಟಿ ಸಹಿತ ಬಿಜೆಪಿ ಮುಖಂಡರು ಇದರಲ್ಲಿ ಭಾಗಿಯಾಗಿದ್ದಾರೆ. ಎಂಟು ಗ್ರಾಮಗಳಿಗೆ ನೀರಾವರಿ ಯೋಜನೆಯನ್ನು ಮಾಡಿಕೊಡಿ ಎಂದು ರೈತರು ಹಸಿರು ಶಾಲು ಬೀಸಿ ಒತ್ತಾಯ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವ ಪಕ್ಷದ ನಾಯಕ ಮಾಜಿ […]
ಕೆರ್ವಾಶೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ತಂದ ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು.

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸೆಲಿಂಗ್, ವಿದ್ಯಾರ್ಥಿಗಳ ಕ್ಷೇಮ, ತರಬೇತಿ ಮತ್ತು ಪ್ಲೇಸ್ಮೆಂಟ್ ವಿಭಾಗವಾದ ‘ಅಭ್ಯುದಯ’ದ ಅಡಿಯಲ್ಲಿ ಸಕ್ರಿಯವಾಗಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರಚನಾ ಕ್ಲಬ್ ನ ವಿದ್ಯಾರ್ಥಿಗಳು ಇತ್ತೀಚೆಗೆ ಕಾರ್ಕಳದ ಕೆರ್ವಾಶೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಗೋಡೆಗಳಲ್ಲಿ ಚಿತ್ರಕಲೆ ಮತ್ತು ಸೌಂದರ್ಯೀಕರಣ ಕಾರ್ಯವನ್ನು ಕೈಗೊಂಡರು. ನಾಲ್ಕು ದಿನಗಳಲ್ಲಿ, ಕ್ಲಬ್ ನ 16 ವಿದ್ಯಾರ್ಥಿ ಸ್ವಯಂಸೇವಕರು ಶಾಲೆಯನ್ನು ಬಣ್ಣ, ಸೃಜನಶೀಲತೆ ಮತ್ತು ಕಾಳಜಿಯೊಂದಿಗೆ ಪರಿವರ್ತಿಸಲು ಒಗ್ಗೂಡಿದರು. ಕಲಿಕೆಯ ಸ್ಥಳವನ್ನು ಹೆಚ್ಚು ಸ್ವಾಗತಾರ್ಹ […]
ಪರ್ಯಾಯ ಮೆರವಣಿಗೆಯಲ್ಲಿ ಕಾಂಗ್ರೆಸ್ ಬಾವುಟ ಪ್ರದರ್ಶನ ಮಾಡಬೇಕಿತ್ತೇ; ವಿ.ಸುನಿಲ್ ಕುಮಾರ್

ಕಾರ್ಕಳ: ಉಡುಪಿ ಪರ್ಯಾಯದ ಮೆರವಣಿಗೆಯಲ್ಲಿ ಕೇಸರಿ ಧ್ವಜ ಹಾರಿಸದೇ ಕಾಂಗ್ರೆಸ್ ಬಾವುಟ ಪ್ರದರ್ಶನ ಮಾಡಬೇಕಿತ್ತೇ ಎಂದು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ಕಿಡಿ ಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್ ಕುಮಾರ್ ”ಉಡುಪಿ ಪರ್ಯಾಯದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕರ ಕ್ಷುದ್ರ ಮನಸ್ಥಿತಿಗೆ ಇದು ಕೈಗನ್ನಡಿ” ಎಂದು ಹೇಳಿದ್ದಾರೆ. ”ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಬಿಟ್ಟು […]
ಉನ್ನತ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕೌಶಲ ಗಳಿಕೆಗೆ ಅವಕಾಶ: ಡಾ.ಎಂ.ಸಿ ಸುಧಾಕರ್

ಬೆಂಗಳೂರು: ಬ್ರಿಟಿಷ್ ಕೌನ್ಸಿಲ್, ಮೈಕ್ರೋಸಾಫ್ಟ್ ಸಹಯೋಗದಲ್ಲಿ 31 ಸರ್ಕಾರಿ ಪದವಿ, 29 ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕೌಶಲ ಕಲಿಕೆ ಆರಂಭಿಸಲಾಗುತ್ತಿದ್ದು, 95,000 ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ಈ ಕುರಿತು ಮಂಗಳವಾರ ಒಪ್ಪಂದ ಮಾಡಿಕೊಂಡ ನಂತರ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ‘ಈಗಾಗಲೇ 16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಅಧ್ಯಯನ ಸಂಪನ್ಮೂಲಗಳು, ಡಿಜಿಟಲ್ ಸಾಧನಗಳು ಮತ್ತು ‘ಇಂಗ್ಲಿಷ್ ತರಬೇತಿ ಕ್ಲಬ್‌ಗಳ’ ಮೂಲಕ ಇಂಗ್ಲಿಷ್ ಅಭ್ಯಾಸದ ಅವಕಾಶಗಳು ಲಭ್ಯವಾಗಲಿವೆ. […]