ಕಾರ್ಕಳ: ಸೊಸೈಟಿಯಲ್ಲಿ ಕಳ್ಳತನ ಯತ್ನ; ಆರೋಪಿಯ ಬಂಧನ

ಕಾರ್ಕಳ: ತಾಲೂಕಿನ ಬಜಗೋಳಿ ಬಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ಜ. 16 ರಂದು ಕಳ್ಳತನಕ್ಕೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನಿಟ್ಟೆ ಗ್ರಾಮದ ಸುರೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ಈತನ ಮೇಲೆ ಈಗಾಗಲೇ ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ, ಪಡುಬಿದ್ರೆ, ಬೆಳ್ತಂಗಡಿ, ಉಡುಪಿ ನಗರ, ಗೋವಾ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಜ.16ರಂದು ಈತ ಸೊಸೈಟಿ ಬೀಗ ಮುರಿದು ಒಳಗೆ ನುಗ್ಗಿ ಕಳ್ಳತನಕ್ಕೆ ಪ್ರಯತ್ನಿಸಿದ್ದ. ಈ ಬಗ್ಗೆ […]
ಮಣಿಪಾಲ MSDC ಯಿಂದ ಆನ್ಲೈನ್ ನಲ್ಲಿಯೇ ಪದವಿ-ಸ್ನಾತಕೋತ್ತರ ಪದವಿ ಪಡೆಯಲು ಅದ್ಭುತ ಅವಕಾಶ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (MSDC)ಯಲ್ಲಿ ಆನ್‌ಲೈನ್ ಕೌಶಲ್ಯ ಸಂಯೋಜಿತ UG / PG ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಮನೆಯಲ್ಲಿಯೇ ಕೂತು ಆನ್ ಲೈನ್ ನಲ್ಲಿ ಡಿಗ್ರಿ ಪಡೆಯುವ ಒಂದೊಳ್ಳೆಯ ಅವಕಾಶವಿದು. ಯಾವೆಲ್ಲಾ ಕೋರ್ಸ್ ಗಳು?UGC ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿNSDC / ವಿಶ್ವವಿದ್ಯಾಲಯ ಮಾನ್ಯತೆ ಪಡೆದ ಕೌಶಲ್ಯಾಧಾರಿತ ಕೋರ್ಸ್ ಗಳು ಇಲ್ಲಿ ಲಭ್ಯವಿದೆ.MBA, MCA, M.Com, BBA, BCAB.Com ಕೋರ್ಸ್ ಗಳನ್ನು ಓದಬಹುದು. ಕೆಲಸ ನಿರತ ವೃತ್ತಿಪರರು, ಗೃಹಿಣಿಯರು, […]
ಉಡುಪಿ ಭಗವನ್ ನಿತ್ಯಾನಂದ ಸ್ವಾಮಿ ಮಂದಿರ: ತೃತೀಯ ವರ್ಧಂತಿ ಮಹೋತ್ಸವ ಸಂಪನ್ನ.

ಉಡುಪಿ: ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ ತೃತೀಯ ಪುನರ್ ಪ್ರತಿಷ್ಠಾ ವರ್ಧಂತಿ ಮೊಹೋತ್ಸವ ವಿಜೃಂಭಣೆಯಿಂದ ಜ.16 ಶುಕ್ರವಾರ ಜರಗಿತು. ಶ್ರೀದೇವರ ಸನ್ನಿಧಿಯಲ್ಲಿ ಮೋಹೋತ್ಸವ ಅಂಗವಾಗಿ ಕಾಕಡ ಆರತಿ, ಗಣಹೋಮ, ಭಕ್ತಾದಿಗಳಿಂದ ಸೀಯಾಳ ಅಭಿಷೇಕ, ಮುಂಜಾನೆಯಿಂದ ರಾತ್ರಿಯವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಪಲ್ಲಪೂಜೆ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭೋಜನ ಸ್ವೀಕರಿಸಿದರು. ಸಂಜೆ ವಿವಿಧ ಕುಣಿತ ಭಜನಾ ತಂಡಗಳು, ಪೂರ್ಣ ಕುಂಭ, ಮಂಗಳವಾದ್ಯ, ಮಹಿಳಾ ಚಂಡೆವಾದನದೊಂದಿಗೆ ಭಗವಾನ್ ನಿತ್ಯಾನಂದ ಸ್ವಾಮಿಯ ಮೂರ್ತಿಯೊಂದಿಗೆ […]
BBK12: ‘ಬಿಗ್ ಬಾಸ್ʼ 12’ರ ಕಿರೀಟ ಮುಡಿಗೇರಿಸಿಕೊಂಡ ಗಿಲ್ಲಿ ನಟ – ಕೋಟಿ ಕೋಟಿ ಕನ್ನಡಿಗರ ಕನಸು ನನಸು

ಬೆಂಗಳೂರು: ಬಿಗ್ ಬಾಸ್ ಸೀಸನ್ -12 (Bigg Boss Kannada 12) ಆರಂಭವಾದ ದಿನದಿಂದ ಪ್ರತಿ ದಿನವೂ ತನ್ನ ವ್ಯಕ್ತಿತ್ವದಿಂದ ಕೋಟ್ಯಂತರ ವೀಕ್ಷಕರ ಮನಗೆದ್ದು, ಫಿನಾಲೆವರೆಗೂ ಗೆದ್ದೇ ಗೆಲ್ಲುತ್ತಾರೆ ಎನ್ನುವ ಅಪಾರವಾದ ಬೆಂಬಲವನ್ನು ಪಡೆದುಕೊಂಡು ಬಂದಿದ್ದ ಗಿಲ್ಲಿನಟ (Gilli Nata) ವೀಕ್ಷಕರ ಊಹೆಯಂತೆಯೇ ʼಬಿಗ್ ಬಾಸ್ ಟ್ರೋಫಿʼ ಗೆದ್ದುಕೊಂಡಿದ್ದಾರೆ. ಗಿಲ್ಲಿ ಅವರ ಗೆಲುವನ್ನು ಇಡೀ ಕರುನಾಡಿನ ಜನರೇ ಹಬ್ಬದಂತೆ ಸಂಭ್ರಮಿಸಿದ್ದಾರೆ. ಗಿಲ್ಲಿಯೇ ಗೆಲ್ಲುತ್ತಾರೆ ಎನ್ನುವ ಕೋಟ್ಯಂತರ ಜನರ ಮಾತು, ಕನಸು ಈಗ ನನಸಾಗಿದೆ. ಗಿಲ್ಲಿ ಅವರು 37 […]
ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ. ಶೆಟ್ಟಿ ಅಭಿನಯದ “ಲ್ಯಾಂಡ್ ಲಾರ್ಡ್” ಟ್ರೈಲರ್ ರಿಲೀಸ್; ಜ.23 ರಂದು ಸಿನಿಮಾ ಬಿಡುಗಡೆ!

ನಟ ದುನಿಯಾ ವಿಜಯ್, ನಟಿ ರಚಿತಾ ರಾಮ್, ರಾಜ್ ಬಿ ಶೆಟ್ಟಿ ಅವರ ಅಭಿನಯದಲ್ಲಿ ಮೂಡಿಬರುತ್ತಿರುವ ‘ಲ್ಯಾಂಡ್‌ಲಾರ್ಡ್’ ಸಿನಿಮಾದ ಟ್ರೇಲರ್ ಇಂದು (ಜ.18) ಬಿಡುಗಡೆಯಾಗಿದೆ. ಜಡೇಶ್ ಹಂಪಿ ನಿರ್ದೇಶನದ ಲ್ಯಾಂಡ್‌ಲಾರ್ಡ್ ಸಿನಿಮಾ ವಿಶ್ವದಾದ್ಯಂತ ಜನವರಿ 23ರಂದು ಬಿಡುಗಡೆಯಾಗುತ್ತಿದೆ.ಇದೀಗ ಲ್ಯಾಂಡ್‌ಲಾರ್ಡ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದ ಹೆಸರೇ ಸೂಚಿಸುತ್ತಿರುವಂತೆ ಭೂಮಾಲಿಕರ ದರ್ಪ, ಜೀತದಾಳುಗಳ ನೋವಿನ ಕತೆ ಇದಾಗಿದೆ. ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.ಇನ್ನು, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ […]