ಶೀರೂರು ವೇದವರ್ಧನತೀರ್ಥರಿಂದ ಮೊದಲ ಪೂಜೆ

ಉಡುಪಿ: ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮೊದಲ ಮಹಾಪೂಜೆ ನಡೆಸಿದರು.ಶ್ರೀಕೃಷ್ಣನನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಮೊದಲ ದಿನವಾದ ಭಾನುವಾರ ಸುಮಾರು 80 ಸಾವಿರ ಮಂದಿ ಅನ್ನಪ್ರಸಾದ ಭೋಜನ ಸ್ವೀಕರಿಸಿದರು. ಮಹಾಪೂಜೆ ಬಳಿಕ ಪಲ್ಲಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ರಾಜಾಂಗಣ, ಭೋಜನಶಾಲೆ, ಹೊರೆಕಾಣಿಕೆ ಪೆಂಡಾಲ್‌ ಸಹಿತ ವಿವಿಧೆಡೆಗಳಲ್ಲಿ ಭೋಜನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬಾಂಗ್ಲಾದೇಶ: ‘ಬಾಳೆಹಣ್ಣು’ ವಿಚಾರದಲ್ಲಿ ಜಗಳ; ಮತ್ತೋರ್ವ ಹಿಂದೂ ಉದ್ಯಮಿಯ ಕೊಲೆ!

ಗಾಜಿಪುರ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂವಿನ ಹತ್ಯೆಯಾಗಿದೆ. ಬಾಳೆಹಣ್ಣಿನ ಬಗ್ಗೆ ಜಗಳ ನಡೆದು ಹಿಂದೂ ಉದ್ಯಮಿಯೊಬ್ಬರನ್ನು ಹೊಡೆದು ಕೊಲೆ ಮಾಡಲಾಗಿದೆ. ಒಂದೇ ಕುಟುಂಬದ ಮೂವರು ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಾಜಿಪುರದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ‘ಬೈಶಾಖಿ ಸ್ವೀಟ್‌ಮೀಟ್ ಮತ್ತು ಹೋಟೆಲ್’ ಮಾಲೀಕ ಲಿಟನ್ ಚಂದ್ರ ಘೋಷ್ (55) ಎಂದು ಗುರುತಿಸಲಾಗಿದೆ. ಈ ಸಂಬಂಧ ಸ್ವಪನ್ ಮಿಯಾ (55) ಅವರ ಪತ್ನಿ ಮಜೇದಾ ಖಾತುನ್ (45), ಮತ್ತು ಅವರ ಮಗ ಮಾಸುಮ್ ಮಿಯಾ […]

ಮಣಿಪಾಲ MSDC- ಬೋಷ್ ಸಹಯೋಗದಲ್ಲಿ ಉದ್ಯೋಗಾಧಾರಿತ ತರಬೇತಿ: ಸಂಪೂರ್ಣ ಉಚಿತವಾಗಿರುವ ಈ ತರಬೇತಿಯಲ್ಲಿ ಭಾಗವಹಿಸುವ ಆಸಕ್ತಿಯಿದ್ದರೆ ಮರೆಯದೇ ಅರ್ಜಿ ಸಲ್ಲಿಸಿ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿ.ಎಂ.ಎ. ಪೈ ಫೌಂಡೇಶನ್‌ನ ಘಟಕ)MSDC ಯು BOSCH ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ 2 ತಿಂಗಳ ಉದ್ಯೋಗಾಧಾರಿತ ಕೋರ್ಸ್ ಬೋಷ್ LEAP ನ್ನು ಆರಂಭಿಸಿದೆ. ಕಲಿ, ಸಂಪಾದಿಸು, ಮುಂದುವರಿ, ಪ್ರಗತಿ ಸಾಧಿಸು, ಎನ್ನುವ ಘೋಷವಾಕ್ಯದೊಂದಿಗೆ ಈ ಕೋರ್ಸ್ ಗಳು ಕೌಶಲ್ಯಗಳನ್ನು ಕಲಿಸಲಿದೆ. 100% ಉಚಿತ ತರಬೇತಿ ಇದಾಗಿದ್ದು ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (MSDC)ದಲ್ಲಿ ನಡೆಯಲಿದೆ. ತರಬೇತಿಯ ಅವಧಿ 2 ತಿಂಗಳು (8 ವಾರಗಳು). ಇದು ಆಟೋಮೊಬೈಲ್ ತರಬೇತಿಯಾಗಿದೆ. ಯಾರು […]

ಉಡುಪಿ: ನಿರ್ದಿಗಂತ ಮಕ್ಕಳ ನಾಟಕೋತ್ಸವಕ್ಕೆ ಚಾಲನೆ

ಉಡುಪಿ: ನಿರ್ದಿಗಂತ ವತಿಯಿಂದ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಮಕ್ಕಳ ನಾಟಕೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಬಿಂದು ರಕ್ಷಿದಿ ಅವರ ನಿರ್ದೇಶನದ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ‘ಮೃಗ ಮತ್ತು ಸುಂದರಿ’ ನಾಟಕ ಪ್ರದರ್ಶನಗೊಂಡಿತು. ಮಧ್ಯಾಹ್ನ ವರದರಾಜ್ ಬಿರ್ತಿ ರಚಿಸಿ, ರೋಹಿತ್ ಎಸ್.ಬೈಕಾಡಿ ನಿರ್ದೇಶಿಸಿದ ಕೊಕ್ಕರ್ಣೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮಕ್ಕಳಿಂದ ವಿಜ್ಞಾನ ನಾಟಕ ‘ಕ್ಯೂರಿಯಸ್’ ನಾಟಕ ಪ್ರದರ್ಶನ ಗೊಂಡಿತು. ನಿರ್ದಿಗಂತದ ಸ್ಥಾಪಕರಲ್ಲೊಬ್ಬರಾದ ರಂಗಕರ್ಮಿ ಹಾಗೂ ಖ್ಯಾತ ಚಿತ್ರನಟ ಪ್ರಕಾಶ್ […]

ಸ್ಪೇನ್: ಹೈ ಸ್ಪೀಡ್ ರೈಲು ಮತ್ತೊಂದು ರೈಲಿಗೆ ಡಿಕ್ಕಿ: 21 ಮಂದಿ ಮೃತ್ಯು; 100ಕ್ಕೂ ಹೆಚ್ಚು ಮಂದಿ ಗಾಯ!

ಮ್ಯಾಡ್ರಿಡ್‌(ಸ್ಪೇನ್‌): ಹಳಿ ತಪ್ಪಿದ ಹೈಸ್ಪೀಡ್‌ ರೈಲೊಂದು ಪಕ್ಕದ ಹಳಿಯಲ್ಲಿ ಸಂಚರಿಸುತ್ತಿದ್ದ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 21 ಜನರು ಮೃತಪಟ್ಟು, 100ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಕಾರ್ಡೋಬಾದ ಆಡಮುಜ್ ಬಳಿ ಭಾನುವಾರ ನಡೆದಿದೆ. ಇಲ್ಲಿಯವರೆಗೆ 21 ಜನರು ಮೃತಟ್ಟಿದ್ದಾರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮ್ಯಾಡ್ರಿಡ್‌ನಿಂದ ಹುಯೆಲ್ವಾಗೆ ಸಂಚರಿಸುತ್ತಿದ್ದ ರೈಲಿನ ಲೋಕೋ ಪೈಲಟ್‌ ಕೂಡ ಮೃತರಲ್ಲಿ ಒಬ್ಬರು ಎಂದು ವರದಿಯಾಗಿದೆ. ‘ಮಲಗಾದಿಂದ ಮ್ಯಾಡ್ರಿಡ್‌ಗೆ ಸಂಚರಿಸುತ್ತಿದ್ದ ಇರಿಯೊ ರೈಲು ಆಡಮುಜ್‌ ಬಳಿ ಹಳಿ ತಪ್ಪಿದ್ದು, ಪಕ್ಕದ ಹಳಿಯಲ್ಲಿ […]