ಉಡುಪಿ ಪರಿವಾರ್ ಗ್ರೂಪ್ಸ್ ನ ಸ್ಥಾಪಕ ಕೆ.ಗೋಪಾಲ ನಿಧನ

ಕೋಟ, ಜ.19: ಉಡುಪಿಯ ಪ್ರತಿಷ್ಠಿತ ಪರಿವಾರ್‌ ಬೇಕರಿ ಗ್ರೂಫ್ಸ್‌ನ ಸ್ಥಾಪಕರು, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಮಾಜಿ ಅಧ್ಯಕ್ಷ, ಕಿನ್ನಿಮುಲ್ಕಿ ನಿವಾಸಿ ಕೆ.ಗೋಪಾಲ (86) ಅನಾರೋಗ್ಯದಿಂದ ಜ.19ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಪುತ್ರರಾದ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಪ್ರಸ್ತುತ ಅಧ್ಯಕ್ಷ ಉದಯ ಕೆ.ಹಾಗೂ ಬಾರ್ಕೂರು ವೇಣುಗೋಪಾಲ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿಜಯ ಕೆ. ಮತ್ತು ಪುತ್ರಿಯನ್ನು ಅಗಲಿದ್ದಾರೆ. ಇವರು ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷರಾಗಿ 24ವರ್ಷ […]

ಉಡುಪಿ ಶ್ರೀಕೃಷ್ಣಮಠದಲ್ಲಿ ಇನ್ನು ಮುಂದೆ ವಸ್ತ್ರ ಸಂಹಿತೆ ಕಡ್ಡಾಯ

ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರವೇಶಿಸುವ ಪುರುಷ ಭಕ್ತಾದಿಗಳು ಇನ್ನು ಮುಂದೆ ಅಂಗಿ ತೆಗೆದು ಪ್ರವೇಶಿಸಬೇಕಾಗಿದೆ. ಇಂದಿನಿಂದ ಈ ನಿಯಮವನ್ನು ಪರ್ಯಾಯ ಶೀರೂರು ಮಠ ಕಡ್ಡಾಯಗೊಳಿಸಿದೆ. ಕೃಷ್ಣಮಠಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆ ಚಾಲ್ತಿಯಲ್ಲಿರಲಿದ್ದು, ಮಹಿಳೆಯರು ಸಭ್ಯ ಉಡುಪುಗಳನ್ನು ಧರಿಸಬೇಕು. ಜೀನ್ಸ್ ಪ್ಯಾಂಟ್, ಟಿ ಶರ್ಟ್ ಸ್ಟೀವ್ ಲೆಸ್ ಉಡುಪುಗಳನ್ನು ಧರಿಸಿ ಬರುವ ಮಹಿಳೆಯರು ಹಾಗು ಪುರುಷರಿಗೆ ಪ್ರವೇಶವಿಲ್ಲ. ಹಾಗೆಯೇ ಪುರುಷ ಭಕ್ತರು ದೇವಳದ ಒಳಗಡೆ ಪ್ರವೇಶಿಸುವ ಮೊದಲು ಅಂಗಿ ತೆಗೆಯಬೇಕು ಎಂಬ ನಿಯಮ ಮಾಡಲಾಗಿದೆ. ಈ […]

ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ (ರಿ.) ಮಣಿಪಾಲ ಇದರ ಅಧ್ಯಕ್ಷರಾಗಿ ಉಪೇಂದ್ರ ನಾಯಕ್ ಆಯ್ಕೆ.

ಉಡುಪಿ: ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ( ರಿ.), ಮಣಿಪಾಲ ಇದರ ನೂತನ ಅಧ್ಯಕ್ಷರಾಗಿ ಉಪೇಂದ್ರ ನಾಯಕ್, ಅರ್ಬಿ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಸುಚಿಂದ್ರ ನಾಯಕ್ ಎರ್ಲಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಸುಮಿತ್ರಾ ಎಚ್ ನಾಯಕ್ ದೇವಿನಗರ, ಜೊತೆ ಕಾರ್ಯದರ್ಶಿಯಾಗಿ ರಾಮದಾಸ್ ಪ್ರಭು, ಕುಕ್ಕುದಕಟ್ಟೆ ಮತ್ತು ಕೋಶಾಧಿಕಾರಿಯಾಗಿ ವಿಠಲ ನಾಯಕ್, ಸಗ್ರಿ ಇವರು ಆಯ್ಕೆಯಾಗಿರುತ್ತಾರೆ. ಇತ್ತೀಚಿಗೆ ಜರಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆ ಜರಗಿದ್ದು ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ […]

ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಣಿಪಾಲ:’ನಾರಿ ಶೃಂಗ’ ಕಾರ್ಯಗಾರ

ಉಡುಪಿ:ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲ ಈ ಸಂಸ್ಥೆಯ ವತಿಯಿಂದ 2 ದಿನದ ಕಾರ್ಯಗಾರ ಇಲ್ಲಿನ ಮೊಂಟಸ್ಸರಿ/ನರ್ಸರಿ ವಿದ್ಯಾರ್ಥಿ ಶಿಕ್ಷಕಿಯರಿಗೆ ದಿನಾಂಕ 15 ಮತ್ತು 16, ಜನವರಿ 2026 ರಂದು ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಕ್ರಿಸ್ಟಲ್ ಬಿಜ್‌ಹಬ್, ಒಂದನೇ ಮಹಡಿ, ಡಿಸಿ ಕಛೇರಿ ಬಳಿ, ಮಣಿಪಾಲ, ಇಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ “ನಾರಿ ಶೃಂಗ” ಎಂಬ ಶೀರ್ಷಿಕೆಯ ಆಡಿಯಲ್ಲಿ ಕಾರ್ಯಗಾರ ನಡೆಯಿತು. ಕಾರ್ಯಗಾರವನ್ನು ಮಾಹೆಯ ಎಂ.ಸಿ.ಹೆ.ಪಿ. ಕ್ಲಿನಿಕಲ್ ಸೈಕಾಲಜಿ ವಿಭಾಗ ಮುಖ್ಯಸ್ಥೆ […]

ಸಂಸದ ಕೋಟರಿಂದ ಕಟಪಾಡಿ ಓವರ್ ಪಾಸ್ ಕಾಮಗಾರಿ ವೀಕ್ಷಣೆ

ಉಡುಪಿ: ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಅಂಡರ್ ಪಾಸ್ ಆಗಬೇಕೆಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆ. ಸದ್ಯ ಕಾಮಗಾರಿ ಆರಂಭಗೊಂಡಿದ್ದು ಕಾಮಗಾರಿ ವೇಗ ಪಡೆದುಕೊಳ್ಳುತ್ತಿದೆ. ಮಳೆಗಾಲ ಆರಂಭವಾಗುವ ಮೊದಲು ಬಹುತೇಕ ಕಾಮಗಾರಿ ಮುಗಿಸಬೇಕೆಂಬುದು ಇಂಜಿನಿಯರ್ ತಯಾರಿ ನಡೆಸಿದ್ದಾರೆ. ಕಾಮಗಾರಿ ಸ್ಥಳಕ್ಕೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ವೀಕ್ಷಣೆ ಮಾಡಿದರು. ಸದ್ಯ ಕಾಮಗಾರಿ ಆಗುತ್ತಿರುವುದರಿಂದ ಕೆಲವೊಂದು ಮಾರ್ಗಸೂಚಿಗಳನ್ನು ನೀಡಲಾಗಿದೆ. ಆದರೆ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡದೆ ವಾಹನ ಚಲಾವಣೆ ಮಾಡುತ್ತಾರೆ ಮತ್ತು ಜನರು ಅಡ್ಡಾದಿಡ್ಡಿ […]