ಅಂಬಾಗಿಲು: ಪರಶುರಾಮ‌ ಸ್ವಾಗತ ಗೋಪುರಕ್ಕೆ ಭೂಮಿ ಪೂಜೆ

ಉಡುಪಿ: ಅಂಬಾಗಿಲು ಜಂಕ್ಷನ್ ಬಳಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಪರಶುರಾಮ‌ ಸ್ವಾಗತ ಗೋಪುರದ ಭೂಮಿ ಪೂಜೆಯನ್ನು ಭಾವಿ ಪರ್ಯಾಯ ಪೀಠಾಧಿಪತಿ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶುಕ್ರವಾರ ನೆರವೇರಿಸಿದರು.ತಮ್ಮ ಪ್ರಥಮ‌ ಪರ್ಯಾಯದ ಸಂದರ್ಭದಲ್ಲಿ ಪರಶುರಾಮ ದ್ವಾರ ನಿರ್ಮಿಸಲು ಶ್ರೀಗಳು ಸಂಕಲ್ಪಿಸಿದ್ದು, ಅನೇಕ ಗಣ್ಯರ ಸಮ್ಮುಖದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಸುಮಾರು ಒಂದು ಕೋಟಿ ರೂ.ವೆಚ್ಚದ ಈ ಭವ್ಯ ಸ್ವಾಗತ ಗೋಪುರವನ್ನು ಪರ್ಯಾಯ ಸ್ವಾಗತ ಸಮಿತಿ ನಿರ್ಮಿಸಲಿದೆ. ಈ ಸಂದರ್ಭದಲ್ಲಿ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ […]

ಕುಷ್ಮಾ ಉಡುಪಿ ಜಿಲ್ಲಾ ಸಮಿತಿ ಉದ್ಘಾಟನೆ-ಪದಾಧಿಕಾರಿಗಳ ಪದಗ್ರಹಣ: ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳಿಂದ ಬಲಿಷ್ಠ ಶಿಕ್ಷಣ ವ್ಯವಸ್ಥೆ ಕಟ್ಟಲು ಸಾಧ್ಯ; ಡಾ.ಮೋಹನ್ ಆಳ್ವ

ಉಡುಪಿ: ರಾಜ್ಯದಲ್ಲಿ 6189 ಪದವಿ ಪೂರ್ವ ಕಾಲೇಜುಗಳಿದ್ದು, ಅದರಲ್ಲಿ 3637 ಖಾಸಗಿ ಕಾಲೇಜುಗಳಿವೆ. ಸರಕಾರಿ ಕಾಲೇಜುಗಳಿಗಿಂತ ಖಾಸಗಿ ಕಾಲೇಜುಗಳಲ್ಲಿಯೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಆದುದರಿಂದ ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳು ಸೇರಿದರೆ ಶಿಕ್ಷಣ ವ್ಯವಸ್ಥೆಯನ್ನು ಬಲಿಷ್ಠ ವಾಗಿ ಕಟ್ಟಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ(ಕುಷ್ಮಾ)ದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದ್ದಾರೆ. ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ(ಕುಷ್ಮಾ) ಇದರ ಉಡುಪಿ ಜಿಲ್ಲಾ […]

ಉಡುಪಿ ರೈಲು ನಿಲ್ದಾಣದ ಅಮೃತ ಭಾರತ ರೈಲು ನಿಲ್ದಾಣ ಯೋಜನೆಗಳ ಉದ್ಘಾಟನೆ

ಉಡುಪಿ: ಉಡುಪಿ ರೈಲು ನಿಲ್ದಾಣದ ಪ್ರಯಾಣಿಕರ ಬಹು ದಿನಗಳ ಬೇಡಿಕೆ ಈಡೇರಿದೆ. ಸುಮಾರು 2.40 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಪ್ರಯಾಣಿಕರ ಸೌಲಭ್ಯಗಳು ಜಿಲ್ಲಾಡಳಿತದ ಸಹಕಾರದೊಂದಿಗೆ ಲೋಕಾರ್ಪಣೆಗೊಂಡಿದೆ. ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ಉಡುಪಿ ರೈಲ್ವೆ ನಿಲ್ದಾಣಕ್ಕೆ ಹೊಸ ಕಾಯಕಲ್ಪ ನೀಡಿ ಹೊಸ ಮೆರುಗಿನೊಂದಿಗೆ ಕರಾವಳಿ ಭಾಗದ ಜನರಿಗೆ ಲಭ್ಯವಾಗಲಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಉಡುಪಿ ರೈಲು ನಿಲ್ದಾಣ ಪರಿಸರದಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿ. ನಿರ್ಮಿಸಿದ […]

ಶೀರೂರು ಪರ್ಯಾಯ: ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ

ಉಡುಪಿ: ಶೀರೂರು ಪರ್ಯಾಯದ ಪ್ರಯುಕ್ತ ನಗರಸಭೆಯ ವತಿಯಿಂದ 50ಲಕ್ಷ ವೆಚ್ಚದಲ್ಲಿ‌ ನಗರದಾದ್ಯಂತ ಮಾಡಿರುವ ವಿದ್ಯುತ್ ದೀಪಾಲಂಕಾರವನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ‌ ಅವರು ಗುರುವಾರ ಸಂಜೆ ಉದ್ಘಾಟಿಸಿದರು. ಬಳಿಕ‌ ಮಾತನಾಡಿದ ಅವರು, ಮೊದಲ‌ ಬಾರಿಗೆ ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಸಿಂಗಾರಗೊಂಡ‌ ನಗರಗಳು, ಪರ್ಯಾಯದ ಸಿದ್ಧತೆಗಳು ಅತ್ಯಂತ ವ್ಯವಸ್ಥಿತವಾಗಿ‌ ನಡೆಯುತ್ತಿರುವುದು ಸಂತೋಷವಾಗಿದೆ ಎಂದರು. ನಗರದ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ನ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿದ ಪರ್ಯಾಯ ಕಾರ್ಯಕ್ರಮಕ್ಕೆ‌ […]

ಜೈ ತುಳುನಾಡ್ ಉಡುಪಿ ಘಟಕ: ನೂತನ‌ ಅಧ್ಯಕ್ಷರಾಗಿ ಸಂತೋಷ್ ಎನ್.ಎಸ್. ಕಟಪಾಡಿ, ಕಾರ್ಯದರ್ಶಿಯಾಗಿ ಪ್ರಜ್ಞಾಶ್ರೀ ಎಂ. ಕೊಡವೂರು ಆಯ್ಕೆ

ಉಡುಪಿ: ಜೈ ತುಳುನಾಡ್ (ರಿ.) ಉಡುಪಿ ಘಟಕದ 2026-2027ನೇ ಸಾಲಿನ ನೂತನ‌ ಸಮಿತಿಯ ಅಧ್ಯಕ್ಷರಾಗಿ ಸಂತೋಷ್ ಎನ್.ಎಸ್. ಕಟಪಾಡಿ ಹಾಗೂ ಕಾರ್ಯದರ್ಶಿಯಾಗಿ ಪ್ರಜ್ಞಾಶ್ರೀ ಎಂ. ಕೊಡವೂರು ಆಯ್ಕೆಯಾಗಿದ್ದಾರೆ. ಉಡುಪಿಯ ಹಿಂದಿ ಪ್ರಚಾರ ಭವನದಲ್ಲಿ ನಡೆದ ಸಂಘಟನೆಯ ವಾರ್ಷಿಕ ಮಹಾಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.ಇತರೆ ಪದಾಧಿಕಾರಿಗಳ ವಿವರ:ಉಪಾಧ್ಯಕ್ಷರಾಗಿ ವಿರೇಂದ್ರ ಶೆಟ್ಟಿ ಕೊಡಂಕೂರು, ಜೊತೆ ಕಾರ್ಯದರ್ಶಿಯಾಗಿ ಐಶ್ವರ್ಯ ಶೆಟ್ಟಿ ಇನ್ನಂಜೆ, ಕೋಶಾಧಿಕಾರಿಯಾಗಿ ಅಂಬಿಕಾ ರಾವ್ ಕನ್ನರ್ಪಾಡಿ, ಜೊತೆ ಕೋಶಾಧಿಕಾರಿಯಾಗಿ ಡಾ. ನಿತೇಶ್ ಎಸ್.ಎ ಕೊರಂಗ್ರಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಸುಪ್ರಿಯ ಅಖಿಲೇಶ್ […]