“ನಾರಿ ಶೃಂಗ” ಪೂರ್ವ ಪ್ರಾಥಮಿಕ ಬೋಧನಾ ಸಾಧನಗಳ ಪ್ರದರ್ಶನ

ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲ ಈ ಸಂಸ್ಥೆಯ ವತಿಯಿಂದ ಪೂರ್ವಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ ದಿನಾಂಕ 17 ಶನಿವಾರ 2026 ಶನಿವಾರ ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಕ್ರಿಸ್ಟಲ್ ಬಿಜ್‌ಹಬ್, ಒಂದನೇ ಮಹಡಿ, ಡಿಸಿಕಛೇರಿ ಬಳಿ, ಮಣಿಪಾಲ, ಇಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ರವರೆಗೆ “ನಾರಿ ಶೃಂಗ” ಎಂಬ ಶೀರ್ಷಿಕೆಯ ಆಡಿಯಲ್ಲಿ ಬೋಧನಾ ಸಾಧನಗಳ ಪ್ರದರ್ಶನವನ್ನು ಕೆ.ಎಂ.ಸಿಯ ಟ್ರಾನ್ಸ್ಪ್ಯೂಶನ್ ಮೆಡಿಸಿನ್ ವಿಭಾಗದ ಎಡಿಷನಲ್ ಪ್ರೊಫೆಸರ್ ಡಾ. ದೀಪಿಕಾ ಚೆನ್ನಯವರು ಉದ್ಘಾಟಿಸಲಿದ್ದಾರೆ. ಈ […]
ಅಶಕ್ತರು, ಕ್ಷಯ ರೋಗಸ್ತರಿಗೆ ಆಹಾರ ಕಿಟ್ ವಿತರಣೆ: ವಿಜಯ ಕೊಡವೂರು

ಉಡುಪಿ: ಕೊಡವೂರು ವಾರ್ಡ್ ನಲ್ಲಿ ಅಶಕ್ತರು, ಕ್ಯಾನ್ಸರ್ ಪೀಡಿತರಿಗೆ ಮತ್ತು ಕ್ಷಯ ರೋಗಸ್ತರಿಗೆ ಪೌಷ್ಟಿಕ ಆಹಾರ ಕಿಟ್ ಕಾರ್ಯಕ್ರಮ ದಿವ್ಯಾಂಗ ರಕ್ಷಣಾ ಸಮಿತಿಯ ವತಿಯಿಂದ ನಡೆಯುತ್ತಿದೆ. ದಿವ್ಯಾಂಗ ರಕ್ಷಣಾ ಸಮಿತಿಯು ಈ ಭಾಗದ ಎಲ್ಲಾ ನೋವುಗಳಿಗೆ ಧ್ವನಿಯಾಗುತ್ತಿದೆ. ಅದರ ಜೊತೆಯಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳು ಇದಕ್ಕೆ ಸಹಕಾರ ಮಾಡುವುದರ ಮುಖಾಂತರ ಕೊಡವೂರಿನಲ್ಲಿ ಇಂತಹ ಕಾರ್ಯಕ್ರಮಗಳು ಸದಾ ನಡೆಯುತ್ತಿದೆ ಎಂದು ಕೆ. ವಿಜಯ ಕೊಡವೂರು ತಿಳಿಸಿದರು. ಎಮ್ ಸಿ ಕೆ ಎಸ್ ಫುಡ್ ಫಾರ್ ದ ಹಂಗ್ರಿ […]
ಉಡುಪಿಯಲ್ಲಿ “ಲೊಯ್ಡ್” (LLOYD) ಎಕ್ಸ್ ಕ್ಲೂಸಿವ್ ಶೋರೂಮ್ ಉದ್ಘಾಟನೆ

ಉಡುಪಿ: ಉಡುಪಿ ನಗರದ ಕಲ್ಸಂಕ ವೃತ್ತದ ಬಳಿ, ಇದೇ ಮೊದಲ ಬಾರಿ ಹೊಸದಾಗಿ ಶಿವಗಿರಿ ಎಲೆಕ್ಟ್ರಾನಿಕ್ಸ್ ‘ಲೊಯ್ಡ್’ (ಎಕ್ಸ್ ಕ್ಲೂಸಿವ್) ಅಧಿಕೃತ ಶೋರೂಮ್ ಜ.9 ರಂದು ಉದ್ಘಾಟನೆಗೊಂಡಿತು. ಲೊಯ್ಡ್’ (ಎಕ್ಸ್ ಕ್ಲೂಸಿವ್) ಅಧಿಕೃತ ಶೋರೂಮ್’ನ ಉದ್ಘಾಟನೆಯನ್ನು ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಅವರು ನೆರೆವೇರಿಸಿ, ಸಂಸ್ಥೆಗೆ ಶುಭ ಹಾರೈಸಿದರು. ಉಡುಪಿ ಚಿಕ್ಕಮಂಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಹೆವೇಲ್ಸ್ ರಾಜ್ಯ ಮುಖ್ಯಸ್ಥ ಅಮಿತಾಬ್ ಶರ್ಮಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದರು. ಇತರ ಗಣ್ಯ ವ್ಯಕ್ತಿಗಳು ಹಾಗೂ ಸಂಸ್ಥೆಯ […]
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಯತಿಕುಲ ಚಕ್ರವರ್ತಿ ಬಿರುದು ಪ್ರದಾನ

ಉಡುಪಿ: ತಮ್ಮ ಕ್ರಾಂತಿಕಾರಕ ಚತುರ್ಥ ಪರ್ಯಾಯವನ್ನು ವೈಭವಯುತವಾಗಿ, ಯಶಸ್ವಿಯಾಗಿ ಸಮಾಪನಗೊಳಿಸುತ್ತಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಪರ್ಯಾಯ ಸ್ವಾಗತ ಸಮಿತಿ ಮತ್ತು ಭಕ್ತಾಭಿಮಾನಿಗಳು ರಾಜಾಂಗಣದಲ್ಲಿ ‘ಯತಿಕುಲ ಚಕ್ರವರ್ತಿ ಬಿರುದು ನೀಡಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳು ತಮ್ಮ ಪರ್ಯಾಯಕ್ಕೆ ಸಂಪೂರ್ಣ ಸಹಕಾರ ನೀಡಿದ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಗೆ “ಶ್ರೀ ಕೃಷ್ಣಪ್ರಿಯಕೃತಂ ” ಪ್ರಶಸ್ತಿಯನ್ನು ಅಭಿನಂದನಾಪೂರ್ವಕವಾಗಿ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪುತ್ತಿಗೆ ಶ್ರೀಗಳು ಕೃಷ್ಣನ ಉತ್ಸವಮೂರ್ತಿಗೆ ಭಗವದ್ಗೀತೆ ಗ್ರಂಥಗಳಿಂದ ತುಲಾಭಾರ […]
ಶೀರೂರು ಪರ್ಯಾಯ: ಒಲಿಪೆ ಸಮರ್ಪಣೆ

ಉಡುಪಿ: ಪ್ರತಿ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಮಠದಿಂದ ಇತರ ಏಳು ಮಠಗಳಿಗೆ ಒಲಿಪೆ ನೀಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಒಲಿಪೆ ಅಂದರೆ ಪರ್ಯಾಯ ಸಂದರ್ಭದಲ್ಲಿ ಆಗಮಿಸುವ ಭಕ್ತರ ಆತಿಥ್ಯಕ್ಕೆ ಪರ್ಯಾಯ ಮಠದಿಂದ ನೀಡುವ ವಸ್ತು ರೂಪದ ಕಾಣಿಕೆ, ನಾಡಿನ ಬೇರೆ ಬೇರೆ ಭಾಗದಿಂದ ಬರುವ ಭಕ್ತರು ಬೇರೆ ಬೇರೆ ಮಠಗಳಲ್ಲಿ ತಂಗುತ್ತಾರೆ. ಆಗಮಿಸಿದ ಭಕ್ತರಿಗೆ ಊಟೋಪಚಾರ ಔಷಧೋಪಚಾರ ಹೀಗೆ ಅತ್ಯಗತ್ಯ ದಿನಬಳಕೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಒಲಿಪೆಯಲ್ಲಿ ನೀಡಲಾಗುತ್ತದೆ. ಸಂಪ್ರದಾಯದಂತೆ ಒಂದು ಬುಟ್ಟಿಯಲ್ಲಿ ಮಠದ ದೇವರ […]