ಸನಾತನ ಧರ್ಮ ಸಂಸ್ಕೃತಿ ಅಳಿಸಿಹಾಕುವುದು ಸುಲಭವಲ್ಲ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಅಹಮದಾಬಾದ್‌: ಶತಮಾನಗಳಿಂದ ಸೋಮನಾಥ ದೇಗುಲದ ಮೇಲೆ ಪದೇ ಪದೇ ದಾಳಿಗಳು ನಡೆದರೂ ಅದು ಪುನರ್‌ ನಿರ್ಮಾಣಗೊಂಡಿರುವುದನ್ನು ಉಲ್ಲೇಖಿಸಿ ಮಂಗಳವಾರ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು, ‘ಸನಾತನ ಧರ್ಮ, ಸಂಸ್ಕೃತಿ ಮತ್ತು ಜನರ ನಂಬಿಕೆಯನ್ನು ಅಳಿಸಿಹಾಕುವುದು ಸುಲಭವಲ್ಲ’ ಎಂದು ಹೇಳಿದರು. ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿ ₹267 ಕೋಟಿ ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ದೇಗುಲವನ್ನು ನಾಶಮಾಡುವ ಸಲುವಾಗಿ ಹಲವಾರು ಮಂದಿ ದಾಳಿಗಳನ್ನು ಮಾಡಿದ್ದಾರೆ. ಆದರೆ ದೇಗುಲವು ಇಂದಿಗೂ ಅದೇ […]

ಉಡುಪಿ ಶೀರೂರು ಪೀಠಾಧೀಶರ ಪ್ರಥಮ ಪರ್ಯಾಯ ಮಹೋತ್ಸವದ ಮುಂಬಯಿ ಸ್ವಾಗತ ಸಮಿತಿ ಸಭೆ

ಮುಂಬಯಿ: ಉಡುಪಿ ಪರ್ಯಾಯ ವಿಶ್ವಕ್ಕೆ ಪ್ರಸಿದ್ಧವಾಗಿದೆ. ಈ ಬಾರಿಯ ಈ ಆಚರಣೆ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದ್ದು ಇದು ಉಡುಪಿ ಭಕ್ತರ ಪರ್ಯಾಯವಾಗಲಿದೆ. ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಮ್ ಶ್ರೀ ವಾಮನ ತೀರ್ಥ ಪರಂಪರೆಯ ಉಡುಪಿ ಶೀರೂರು ಪೀರಾಧೀಶ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಸರ್ವಜ್ಞ ಪೀರಾರೋಹಣವನ್ನು (ಪರ್ಯಾಯ) ಭಕ್ತರೆಲ್ಲರೂ ಸ್ಪಂದಿಸಿ ಸಫಲರಾಗಿಸೋಣ ಎಂದು ಉಡುಪಿ ಶಾಸಕ, ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಯಶಪಾಲ್ ಎ.ಸುವರ್ಣ ತಿಳಿಸಿದರು. ಇಂದು ಸಂಜೆ ಮಲಾಡ್ ಪಶ್ಚಿಮದ ಎವರ್‌ಶೈನ್ ನಗರದಲ್ಲಿನ ಹೋಟೆಲ್ […]

ಉಡುಪಿ: ಶೀರೂರು ಪರ್ಯಾಯಕ್ಕೆ ಶ್ರೀ‌ಕ್ಷೇತ್ರ ಧರ್ಮಸ್ಥಳದಿಂದ ಹೊರೆಕಾಣಿಕೆ.

ಉಡುಪಿ: ಶಿರೂರು ಪರ್ಯಾಯದ ಗೌರವಾಧ್ಯಕ್ಷರು ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ 50 ಕ್ವಿಂಟಲ್ ಸೋನಾ ಮಸೂರಿ ಅಕ್ಕಿ ಮತ್ತು 15 ಕ್ವಿಂಟಲ್ ತರಕಾರಿಯನ್ನು ಶ್ರೀ ಕೃಷ್ಣನ ಸನ್ನಿಧಾನಕ್ಕೆ ಸಲ್ಲಿಸಲಾಯಿತು. ಶೀರೂರು ಪರ್ಯಾಯದ ಮೊದಲ‌ದಿನದ ಹೊರೆಕಾಣಿಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ‌ಸಲ್ಲಿಕೆಯಾಗಿತ್ತು. ಇದೀಗ ಶ್ರೀ ಕ್ಷೇತ್ರದ ವತಿಯಿಂದ ಎರಡನೇ ಹೊರೆಕಾಣಿಕೆ ಸಲ್ಲಿಕೆಯಾಯಿತು. ಪರ್ಯಾಯ ಶಿರೂರು ಶ್ರೀ ವೇದವರ್ದನ ಶ್ರೀಪಾದಂಗಳವರು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಧರ್ಮಸ್ಥಳ ಅನ್ನಪೂರ್ಣ ಛತ್ರದ ಪ್ರಬಂಧಕ ಸುಬ್ರಮಣ್ಯ […]

ಉಡುಪಿ:ಶೋಷಿತ ಸಮಾಜದ ಪ್ರತಿಭೆಗಳಿಗೆ ಸರಕಾರ, ಸಮಾಜದ ಪ್ರೋತ್ಸಾಹ ಅಗತ್ಯ : ಡಾ.ವಿಜಯ ಬಲ್ಲಾಳ್

ಉಡುಪಿ: ಪ್ರತಿಭೆಗೆ ಯಾವುದೇ ತಾರತಮ್ಯವಿಲ್ಲ. ಕಡು ಬಡವನಲ್ಲೂ ಪ್ರತಿಭೆ ಇರುತ್ತದೆ. ಸಮಾಜದ ಶೋಷಿತ ವರ್ಗಗಳ ಪ್ರತಿಭೆಗಳಿಗೆ ಸರಕಾರ, ಇಲಾಖೆ ಹಾಗೂ ಸಮಾಜದ ಪ್ರೋತ್ಸಾಹ ಅತೀ ಅಗತ್ಯ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ಎನ್. ಬಿ.ವಿಜಯ ಬಲ್ಲಾಳ್ ಹೇಳಿದರು. ಅವರು ಶನಿವಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ […]

ಉಡುಪಿ:ಪರ್ಯಾಯ ಮಹೋತ್ಸವ ಅಂಗವಾಗಿ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆ, ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಒದಗಿಸುವ ದೃಷ್ಠಿಯಿಂದ ಮೋಟಾರು ವಾಹನ ಕಾಯ್ದೆ 1988 ರ ನಿಯಮ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221 (ಎ) (2) & (5) ರನ್ವಯ ಜನವರಿ 17 ರಂದು ಮಧ್ಯಾಹ್ನ 2 ಗಂಟೆಯಿಂದ ಜ. 18 ರ ಬೆಳಗ್ಗೆ 7 ಗಂಟೆಯವರೆಗೆ ಉಡುಪಿ ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧ, ಬದಲಿ ಮಾರ್ಗ […]