ಕಾರ್ಕಳ:ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್‌ನಲ್ಲಿ ಉದ್ಯೋಗಾವಕಾಶ

ಕಾರ್ಕಳದ ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್‌ನಲ್ಲಿ ಆಫೀಸ್ ಅಸಿಸ್ಟೆಂಟ್ ಮತ್ತು ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಶಿವಮೊಗ್ಗ ಮತ್ತು ಕಾರ್ಕಳ ಕೇಂದ್ರಗಳಲ್ಲಿ ಹುದ್ದೆಗಳು ಲಭ್ಯವಿದ್ದು, ವಾಸ್ತವ್ಯ ವ್ಯವಸ್ಥೆಯೊಂದಿಗೆ ಪುರುಷ ಅಭ್ಯರ್ಥಿಗಳಿಗೆ ಅವಕಾಶವಿದೆ. ಅಕೌಂಟೆಂಟ್ ಹುದ್ದೆಗೆ ಟ್ಯಾಲಿ ಮತ್ತು ಜಿಎಸ್ಟಿ ಜ್ಞಾನ ಕಡ್ಡಾಯವಾಗಿರಬೇಕು.ಅರ್ಜಿ ಕಳುಹಿಸಿ: 📩 [email protected]ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 📞 9606997391

ದಯಾನಂದ ಬಳೆಗಾರ ನಾಗೂರು ಅವರಿಗೆ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ

ಉಡುಪಿ: ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ ವತಿಯಿಂದ ಯಕ್ಷಗಾನ ರಂಗದಲ್ಲಿ ಸಾಧನೆಗೈದ ಹಿರಿಯ ಕಲಾವಿದರಿಗೆ ಕಳೆದ 28 ವರ್ಷಗಳಿಂದ ನೀಡುತ್ತಿರುವ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿಗೆ ಈ ಬಾರಿ ಹಿರಿಯ ಯಕ್ಷಗಾನ ಕಲಾವಿದ ದಯಾನಂದ ಬಳೆಗಾರ ನಾಗೂರು ಆಯ್ಕೆಯಾಗಿದ್ದಾರೆ. ಇವರು ಐದು ದಶಕಗಳ ಕಾಲ ಇಡಗುಂಜಿ, ಗುಂಡಬಾಳ, ಸಾಲಿಗ್ರಾಮ, ಮಂದಾರ್ತಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಕಲಾಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಮುಂದಿನ ತಿಂಗಳ ಫೆ.8ರಂದು ಯಕ್ಷಗಾನ ಕಲಾಕ್ಷೇತ್ರದ 75ನೇ ವಾರ್ಷಿಕೋತ್ಸವ ಸಮಾರಂಭ ದಲ್ಲಿ […]

ಉಡುಪಿ: ಹಳೇಬೀಡು ಮೂಲದ ಅಪ್ರಾಪ್ತ ಬಾಲಕಿಯ ರಕ್ಷಣೆ.

ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ರಕ್ಷಿಸಿರುವ ಬಗ್ಗೆ ವರದಿಯಾಗಿದೆ. ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಾರ್ಥಿಯಾಗಿ ತೆರಳಿದ್ದ, ಆದಿಉಡುಪಿಯ ಪ್ರೇಮ ರಾಮಚಂದ್ರ ಎಂಬವರಿಗೆ ಬಾಲಕಿ ಕಂಡು ಬಂದಿದ್ದು, ಆಕೆಯ ಚಲನ ವಲನದಲ್ಲಿ ಸಂಶಯಗೊಂಡು ವಿಚಾರಿಸಿದಾಗ, ಬಾಲಕಿ ಮನನೊಂದು ಮನೆ ಬಿಟ್ಟು ಬಂದಿರುವುದಾಗಿ ತಿಳಿದುಬಂದಿದೆ. ತಕ್ಷಣ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿದ್ದು, ಒಳಕಾಡು ನಗರ ಪೋಲಿಸ್ ಠಾಣೆಗೆ ಮಾಹಿತಿ ನೀಡಿ, ಬಾಲಕಿಯನ್ನು ರಕ್ಷಿಸಿ, ದೊಡ್ಡಣಗುಡ್ಡೆಯ ಬಾಲಕಿಯರ ಬಾಲ ಮಂದಿರದಲ್ಲಿ ಪುರ್ನವಸತಿ […]

ಬ್ಯಾಂಕ್ ಗಳು ಲಕ್ಷ್ಮೀ ಆರಾಧಕರು: ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರು

ಉಡುಪಿ: ‘ಬ್ಯಾಂಕ್ ಗಳು ಲಕ್ಷ್ಮೀ ಆರಾಧಕರು, ಲಕ್ಷ್ಮೀ ಅನುಗ್ರಹವಾಗಬೇಕಾದರೆ, ನಾರಾಯಣ ಅನುಗ್ರಹಿಸಬೇಕು. ಬ್ಯಾಂಕಿನ ಕೃಷ್ಣ ಸೇವೆಯಿಂದ ಖಂಡಿತ ಮುಂದಿನ ದಿನಗಳಲ್ಲಿ ಬ್ಯಾಂಕು, ಸಾಧನೆಯ ಉತ್ತುಂಗಕ್ಕೇರಲಿದೆ. ಲಕ್ಷ್ಮಿ( L) GOD ಜತೆಗೆ ಸೇರಿದಾಗ ಮಾತ್ರ GOLD ಆಗುತ್ತದೆ. ಬದುಕು ದೇವರ ಆರಾಧನೆಯಿಂದ ಬಂಗಾರವಾಗುತ್ತದೆ ” ಎಂದು ಕರ್ಣಾಟಕ ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯಲ್ಲಿ ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರನ್ನು ಭಕ್ತ್ಯಾದರಗಳಿಂದ ಆಹ್ವಾನಿಸಿ, ಸ್ವಾಗತಿಸಿ ಪಾದ ಪೂಜೆಯನ್ನು ನೆರವೇರಿಸದ ಸಂದರ್ಭ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ […]

ಉಡುಪಿ:ನಾಳೆ ಪ್ಲಾಟ್‌ಫಾರ್ಮ್ ಸರ್ಫೇಸಿಂಗ್, ಪ್ಲಾಟ್‌ಫಾರ್ಮ್ ಶೆಲ್ಟರ್ ಮತ್ತು ಫುಟ್ ಓವರ್ ಬ್ರಿಡ್ಜ್ ರೂಫ್ ನ ಉದ್ಘಾಟನಾ ಸಮಾರಂಭ

ಉಡುಪಿ: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಪ್ಲಾಟ್‌ಫಾರ್ಮ್ ಸರ್ಫೇಸಿಂಗ್, ಪ್ಲಾಟ್‌ಫಾರ್ಮ್ ಶೆಲ್ಟರ್ ಮತ್ತು ಫುಟ್ ಓವರ್ ಬ್ರಿಡ್ಜ್ ರೂಫ್ ಉದ್ಘಾಟನಾ ಸಮಾರಂಭವು ಜನವರಿ 14 ರಂದು ಬೆಳಗ್ಗೆ 10.30 ಕ್ಕೆ ಉಡುಪಿ ರೈಲ್ವೆ ಸ್ಟೇಷನ್‌ನಲ್ಲಿ ನಡೆಯಲಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಕೊಂಕಣ ರೈಲ್ವೆ ಕಾರ್ಪೊರೇಷನ್ಲಿಮಿಟೆಡ್ ಮ್ಯಾನೆಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಝಾ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಯಶ್‌ಪಾಲ್ ಎಸುವರ್ಣ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.