ಮೂಡುಬಿದಿರೆಯಲ್ಲಿ 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೇಟಿಕ್ಸ್ ಕ್ರೀಡಾಕೂಟ 2025-26 ವಿದ್ಯುಕ್ತ ಚಾಲನೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಹಮ್ಮಿಕೊಂಡ ಐದು ದಿನಗಳ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಫ್ 2025-26’ ಸೋಮವಾರ ಅಚ್ಚುಕಟ್ಟಾದ ಮೂಲಸೌಕರ್ಯ, ತಾಂತ್ರಿಕ ನಿಖರತೆ, ಸಮಯ ನಿರ್ವಹಣೆ, ಆತಿಥ್ಯ ವ್ಯವಸ್ಥೆಗಳ, ಶಿಸ್ತುಬದ್ಧತೆ, ಅದ್ಧೂರಿ ಮೆರವಣಿಗೆಗಳ ಜೊತೆ ಆರಂಭಗೊಂಡಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆತಿಥ್ಯದಲ್ಲಿ 6ನೇ ಬಾರಿಗೆ (72, 75, 80, 79 ಹಾಗೂ 81) ನಡೆಯುತ್ತಿರುವ 85ನೇ ಕ್ರೀಡಾಕೂಟವನ್ನು ಉದ್ಘಾಟಿಸಿದ ವಿಧಾನಸಭೆಯ […]

ಹೆಗ್ಗುಂಜೆಯಲ್ಲಿ ಅಕ್ರಮ ಮನೆ, ಶೆಡ್ ಗಳ ನೆಲಸಮ- ಸಂಸದ, ಶಾಸಕರಿಂದ ಪ್ರತಿಭಟನೆ

ಉಡುಪಿ: ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಸ್ಥಳದಲ್ಲಿ ನಿರ್ಮಿಸಲಾದ ಮನೆ ಮತ್ತು ಶೆಡ್ ಗಳನ್ನು ತೆರವುಗೊಳಿಸಿದನ್ನು ಖಂಡಿಸಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ಕುಂದಾಪುರ ಶಾಸಕ ಕಿರಣ್ ಕುಮಾ‌ರ್ ಕೊಡ್ಡಿ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಹೆಗ್ಗುಂಜೆ ಗ್ರಾಮದಲ್ಲಿ ಏಕಾಏಕಿ ಸೋಮವಾರ ಬೆಳ್ಳಂಬೆಳಿಗ್ಗೆ ಜೆಸಿಬಿ ತಂದು ಅಲ್ಲಿದ್ದ ಎಲ್ಲಾ ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಸರಕಾರಿ ಜಾಗದಲ್ಲಿ ಕೋಟಿಗಟ್ಟಲೇ ಮನೆ ಕಟ್ಟಿಕೊಂಡವರಿದ್ದಾರೆ, ಆದರೆ 20 ವರ್ಷಗಳಿಗೂ ಮಿಕ್ಕಿ ವಾಸ್ತವ್ಯ ಇದ್ದ ಬಡವರ ಮನೆಗಳನ್ನು ಕೆಡವಿದ್ದು […]

ಕಾರ್ಕಳ ಜ್ಞಾನಸುಧಾ : ಮೌಲ್ಯಸುಧಾ-44ರಲ್ಲಿ ‘ಯುವಮನಸ್ಸುಗಳಿಗೆ ಒಂದಿಷ್ಟು ಮಾತು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ

ಗಣಿತನಗರ: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-44, ಜನವರಿ 13ರ ಮಂಗಳವಾರದಂದು ಸಂಜೆ 06.15ಕ್ಕೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ 92.7 ಬಿಗ್ ಎಫ್‌ಎಂನ ರೆಡಿಯೋ ಜಾಕಿ ಆರ್.ಜೆ. ನಯನರವರು ‘ಯುವಮನಸ್ಸುಗಳಿಗೆ ಒಂದಿಷ್ಟು ಮಾತು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಭಾಗವಹಿಸಬಹುದೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಉಡುಪಿ:ಪೆರಂಪಳ್ಳಿ ಸುಬ್ರಮಣ್ಯ ಹೆಬ್ಬಾರ್ ಇವರಿಗೆ “ವಿಶ್ವೇಶ ಸೇವಾ ಪ್ರಶಸ್ತಿ”

ಉಡುಪಿ:ಶ್ರೀ ವಿಶ್ವಶತೀರ್ಥ ಸೇವಾ ಸಂಘ  ಹುಬ್ಬಳ್ಳಿ, ಭವಾನಿ ನಗರ ರಾಯರ ಮಠ ಹಾಗೂ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಯತಿಕುಲ ಚಕ್ರವರ್ತಿ ಪದ್ಮವಿಭೂಷಣ ಡಾ. ಶ್ರೀ ವಿಶ್ವಶತೀರ್ಥರ ಆರನೇ ಪಾದುಕಾ ಸಮಾರಾಧನೆ ಅಂಗವಾಗಿ ಉಡುಪಿ ಪೆರಂಪಳ್ಳಿ ಸುಬ್ರಮಣ್ಯ ಹೆಬ್ಬಾರ್ ಇವರಿಗೆ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು “ವಿಶ್ವೇಶ ಸೇವಾ ಪ್ರಶಸ್ತಿ” ನೀಡಿ ಗೌರವಿಸಿದರು.

ಮರ್ಣೆ: ಪಾಳುಬಿದ್ದ ಬಸ್ ನಿಲ್ದಾಣಕ್ಕೆ ರಂಗು ತುಂಬಿದ ಕಲಾವಿದ ಮಹೇಶ್ ಮರ್ಣೆ

ಉಡುಪಿ: ಉಡುಪಿಯ ಮರ್ಣೆ ಕಲಾವಿದರ ಊರು ಅಂತಲೇ ಪ್ರಸಿದ್ಧಿ. ಇಲ್ಲಿನ ಪ್ರಸಿದ್ಧ ಕಲಾವಿದ ಮಹೇಶ್ ಮರ್ಣೆ ತನ್ನ ಮಗಳ ಆರನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಊರಿನಲ್ಲಿದ್ದ ಪಾಳು ಬಿದ್ದ ಬಸ್ ನಿಲ್ದಾಣಕ್ಕೆ ಹೊಸ ಮೆರುಗು ನೀಡಿದರು. ತನ್ನ ಅಪೂರ್ವ ಪ್ರತಿಭೆಯಿಂದ ಬಸ್ ನಿಲ್ದಾಣವನ್ನು ಅಲಂಕರಿಸಿದರು. ಬಣ್ಣ ಬಣ್ಣದ ಚಿತ್ತಾರ ಬಿಡಿಸಿ ಆಕರ್ಷಕವಾಗಿಸಿದರು. ಈಗ ಬಸ್ ನಿಲ್ದಾಣದಲ್ಲಿ ನಿಂತರೆ ವಿಶಿಷ್ಟ ಅನುಭವ ಆಗುತ್ತೆ. ಈ ಕಲರ್ ಫುಲ್ ಬಸ್ ನಿಲ್ದಾಣ ಈಗ ಎಲ್ಲರನ್ನೂ ಆಕರ್ಷಿಸುತ್ತಿದೆ.