ಉಡುಪಿ ಫುಲ್ ಮ್ಯಾರಥಾನ್: ಜಿಲ್ಲಾಧಿಕಾರಿ ಸ್ವರೂಪ ಅವರಿಂದ ಉದ್ಘಾಟನೆ

ಉಡುಪಿ:ಉಡುಪಿ ಜಿಲ್ಲಾಡಳಿತ, ಎನ್‌ಇಬಿ ಸ್ಪೋರ್ಟ್ಸ್ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಫುಲ್ ಮ್ಯಾರಥಾನ್ ಗೆ ಭಾನುವಾರ (ನಿನ್ನೆ) ಬೆಳಿಗ್ಗೆ 4ಗಂಟೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸ್ವರೂಪ ಉದ್ಘಾಟಿಸಿದರು. ಮ್ಯಾರಥಾನ್ ಸ್ಪರ್ಧೆಯು ಬೆಳಿಗ್ಗೆ 4 ಗಂಟೆಗೆ, ಹಾಫ್ ಮ್ಯಾರಥಾನ್ ಬೆಳಿಗ್ಗೆ 5.30ಕ್ಕೆ, 10 ಕಿ.ಮೀ. ಓಟ ಬೆಳಗ್ಗೆ 6.30ಕ್ಕೆ ಹಾಗೂ 5 ಕಿ.ಮೀ. ಫನ್ ರನ್ ಬೆಳಗ್ಗೆ 7.30ಕ್ಕೆ ಆರಂಭಗೊಂಡಿತು. ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ […]

ಮಣಿಪಾಲ:ಶೀಘ್ರದಲ್ಲೇ ವಾರಾಂತ್ಯ ಯೋಗ ತರಗತಿಗಳು ಆರಂಭ

ಉಡುಪಿ:ಮಣಿಪಾಲದ ಪ್ರಿಸಂ ಸ್ಟುಡಿಯೋ (ಕ್ರಿಸ್ಟಲ್ ಬಿಸಿನೆಸ್ ಹಬ್, ಡಿಸಿ ಆಫೀಸ್ ಸಮೀಪ) ನಲ್ಲಿ ವಾರಾಂತ್ಯ ಯೋಗ ಕ್ಲಾಸ್‌ಗಳು ಶೀಘ್ರದಲ್ಲೇ ಆರಂಭಗೊಳ್ಳಲಿವೆ. ದೇಹ–ಉಸಿರಾಟ–ಜಾಗೃತಿಯ ಸಮನ್ವಯದ ಮೂಲಕ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುವ ಈ ತರಗತಿಗಳನ್ನು ಡಾ. ಸ್ವರೂಪಾ ಮೊರೆ ನಡೆಸಲಿದ್ದಾರೆ. ಶನಿವಾರ ಮತ್ತು ಭಾನುವಾರ ಬೆಳಗ್ಗೆ 7 ರಿಂದ 8 ಗಂಟೆಯವರೆಗೆ ತರಗತಿಗಳು ನಡೆಯಲಿದ್ದು, ನೋಂದಣಿಗಾಗಿ ಸಂಪರ್ಕಿಸಿ:📞 7676843931 / 8310159071

ಭಾರತದ ಮೇಲೆ ದಾಳಿಗೆ ಸಾವಿರಕ್ಕೂ ಹೆಚ್ಚು ಆತ್ಮಹತ್ಯಾ ಬಾಂಬರ್ ಗಳು ಸಿದ್ದ: ಉಗ್ರ ಮಸೂದ್ ಆಡಿಯೋ ವೈರಲ್!

ನಿಷೇಧಿತ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಹೊಸ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಆತ ಭಾರತದ ಮೇಲೆ ದಾಳಿ ಮಾಡಲು ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಿದ್ದಾರೆ ಎಂದು ಹೇಳಿದ್ದಾನೆ. ಮಸೂದ್ ಅಜರ್ ಯಾವುದೇ ಕ್ಷಣದಲ್ಲಿ ದಾಳಿ ಮಾಡಲು ಹೆಚ್ಚಿನ ಸಂಖ್ಯೆಯ ಆತ್ಮಹತ್ಯಾ ದಾಳಿಕೋರರು ಸಿದ್ಧರಾಗಿದ್ದಾರೆ ಮತ್ತು ಅವರು ಭಾರತಕ್ಕೆ ನುಸುಳಲು ಅವಕಾಶ ನೀಡುವಂತೆ ಅಜರ್ ಒತ್ತಾಯಿಸುತ್ತಿರುವುದು ಕೇಳಿಸುತ್ತದೆ. ತನ್ನ ಗುಂಪಿನ ಹೋರಾಟಗಾರರ ಸಂಖ್ಯೆಯನ್ನು ಬಹಿರಂಗಪಡಿಸಿದರೆ ಜಗತ್ತೇ ಬೆಚ್ಚಿಬೀಳುತ್ತದೆ ಎಂದು ಹೇಳಿದ್ದಾನೆ. ಈ ಆತ್ಮಹತ್ಯೆ ಬಾಂಬ್ […]

ಭಾರತದ ಗಡಿಯಲ್ಲಿ ಭದ್ರತೆ ಹೆಚ್ಚಿಸಬೇಕು: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊವಾಲ್

ನವದೆಹಲಿ: ಭಾರತ ಗಡಿಯಲ್ಲಿ ಭದ್ರತೆಯನ್ನು ಬಲಪಡಿಸಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಭದ್ರತೆ ಹೆಚ್ಚಿಸಬೇಕು. ಇತಿಹಾಸದಲ್ಲಿ ನಡೆದ ದಾಳಿಗಳ ವಿರುದ್ಧ ‘ಪ್ರತೀಕಾರ’ಕ್ಕಾಗಿ ಮತ್ತು ಮುಂದೆ ಅಂಥ ದಾಳಿಗಳನ್ನು ತಡೆಯಲು ಭದ್ರತೆಯನ್ನು ಬಲಗೊಳಿಸಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊವಾಲ್‌ ಹೇಳಿದರು. ವಿಕಸಿತ ಭಾರತ ಯುವ ಪ್ರತಿನಿಧಿಗಳ ಸಂವಾದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ‘ನೀವೆಲ್ಲಾ ಅದೃಷ್ಟವಂತರು, ಸ್ವತಂತ್ರ ಭಾರತದಲ್ಲಿ ಜನಿಸಿದ್ದೀರಿ. ನಾನು ವಸಹಾತುಶಾಹಿ ಭಾರತದಲ್ಲಿ ಜನಿಸಿದೆ. ನನ್ನ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅನೇಕ ವಿಚಾರಣೆಗಳನ್ನು ಎದುರಿಸಿದರು’ ಎಂದು ಹೇಳಿದರು. […]

ಆರ್ ಎಸ್ ಎಸ್ ಶತಮಾನೋತ್ಸವ: ಜ.15 ರಿಂದ ದೇಶಾದ್ಯಂತ ‘ಹಿಂದೂ ಸಮಾಜೋತ್ಸವ’

ಮಥುರಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಶತಮಾನೋತ್ಸವದ ಅಂಗವಾಗಿ ಜನವರಿ 15ರಿಂದ ದೇಶಾದ್ಯಂತ ‘ಹಿಂದೂ ಸಮಾಜೋತ್ಸವ’ಗಳನ್ನು ಆಯೋಜಿಸಲಾಗುವುದು ಎಂದು ಬ್ರಜ್ ಪ್ರಾಂತ್ಯದ ಪ್ರಚಾರ ಪ್ರಮುಖ್ ಕೀರ್ತಿ ಕುಮಾರ್ ಭಾನುವಾರ ತಿಳಿಸಿದ್ದಾರೆ. ‘ದೇಶದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಸಮ್ಮೇಳನಗಳನ್ನು ನಡೆಸುವ ಗುರಿಯನ್ನು ಆರ್‌ಎಸ್‌ಎಸ್‌ ಹೊಂದಿದ್ದು, ಅದರಲ್ಲಿ ಸುಮಾರು 2000 ಸಮ್ಮೇಳನಗಳನ್ನು ಬ್ರಜ್ ಪ್ರದೇಶದಲ್ಲಿ ಆಯೋಜಿಸಲಾಗುವುದು. ಈ ಪ್ರದೇಶವು ಸುಮಾರು 3000 ನಗರ ಮತ್ತು ಗ್ರಾಮಗಳನ್ನು ಒಳಗೊಂಡಿದೆ’ ಎಂದು ಅವರು ಹೇಳಿದ್ದಾರೆ. ಶತಮಾನೋತ್ಸವವನ್ನು ‘ಸಮಾಜೋತ್ಸವ’ವಾಗಿ ಆಚರಿಸಲು ಮತ್ತು ಇಡೀ ಹಿಂದೂ […]