ಉಡುಪಿ:ಸಾಲಿಗ್ರಾಮ ಜಾತ್ರೆ : ತಾತ್ಕಾಲಿಕ ವ್ಯಾಪಾರಕ್ಕೆ ಅವಕಾಶ

ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 2026 ನೇ ಸಾಲಿನ ಶ್ರೀ ಗುರು ನರಸಿಂಹ ದೇವರ ಜಾತ್ರಾ ಮಹೋತ್ಸವವು ಜನವರಿ 16 ರಿಂದ ನಡೆಯಲಿದ್ದು, ಸಾಲಿಗ್ರಾಮ ರಥಬೀದಿ ಹೊರತುಪಡಿಸಿ ಉಳಿದ ಖಾಸಗಿ, ಎನ್.ಹೆಚ್, ಒಳಪೇಟೆ, ಸರ್ವೀಸ್ ರಸ್ತೆ, ರಥಬೀದಿ ಸೇರಿದಂತೆ ಇತರೇ ಸರ್ಕಾರಿ ಸ್ಥಳಗಳಲ್ಲಿ ಜಾತ್ರಾ ಪ್ರಯುಕ್ತ ತಾತ್ಕಾಲಿಕವಾಗಿ ವ್ಯಾಪಾರ ನಡೆಸುವವರು ಜಾತ್ರೆ ಪ್ರಾರಂಭವಾಗುವ ಮೂರು ದಿನದ ಮುಂಚಿತವಾಗಿ ಪಟ್ಟಣ ಪಂಚಾಯತ್ ಕಚೇರಿಗೆ ಭೇಟಿ ನೀಡಿ, ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಕಡ್ಡಾಯವಾಗಿ ಉದ್ಯಮದಾರರ ಭಾವಚಿತ್ರ, […]
ಉಡುಪಿ:ಜ.17 ರಂದು ವಡ್ಡರ್ಸೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

ಉಡುಪಿ: 7 ನೇ ವಡ್ಡರ್ಸೆ ಗ್ರಾಮ ಪಂಚಾಯತ್‌ನ ಪ್ರಸಕ್ತ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜನವರಿ 17 ರಂದು ಬೆಳಗ್ಗೆ 10.30 ಕ್ಕೆ ವಡ್ಡರ್ಸೆ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ:ರಸ್ತೆ ಸುರಕ್ಷತಾ ಸಭೆಯ ನಿರ್ದೇಶನ ಪಾಲಿಸಲು ಸೂಚನೆ

ಉಡುಪಿ: ರಸ್ತೆ ಸುರಕ್ಷತಾ ಸಭೆಯಲ್ಲಿ ಜಿಲ್ಲಾಧಿಕಾರಿಗಳು ನೀಡಿದ ನಿರ್ದೇಶನದಂತೆ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಜನವರಿ 20 ರ ಒಳಗಾಗಿ ಕಡ್ಡಾಯವಾಗಿ ಬಾಗಿಲನ್ನು (ಡೋರ್) ಅಳವಡಿಸಿಕೊಂಡು ಸಂಚರಿಸಬೇಕು. ಮರಳು, ಮಣ್ಣು, ಕೆಂಪುಕಲ್ಲು, ಶಿಲೆಕಲ್ಲು ಸಹಿತ ಖನಿಜ ವಸ್ತುಗಳನ್ನು ಸಾಗಿಸುವ 6 ಚಕ್ರ ಮತ್ತು ಅದಕ್ಕಿಂತ ಮೇಲ್ಪಟ್ಟ ಲಾರಿ, ಟಿಪ್ಪರ್ ವಾಹನಗಳಿಗೆ ವೇಗ ನಿಯಂತ್ರಕ (ಸ್ಪೀಡ್ ಗವರ್ನರ್) ಗಳನ್ನು 10 ದಿನಗಳ ಒಳಗಾಗಿ ಕಡ್ಡಾಯವಾಗಿ ಅಳವಡಿಸುವಂತೆ ವಾಹನ ಮಾಲೀಕರು ಕ್ರಮ ವಹಿಸಬೇಕು. […]