ಉಡುಪಿ:ಜ.15 ರಂದು “ಮಹಿಳೆಯರಲ್ಲಿ ಕ್ಯಾನ್ಸರ್” ಕುರಿತು ಜಾಗೃತಿ ಕಾರ್ಯಗಾರ

ಉಡುಪಿ:ಉಡುಪಿ ರೋಟರಿ, ಇಂಚರಾ ಸರ್ಜಿಕಲ್ ಕ್ಲಿನಿಕ್ ಮತ್ತು ಶ್ರೀ ವೈ.ಎಲ್.ಎನ್. ಜ್ಯೋತಿಸ್ಕ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ಉಡುಪಿ ಅವರ ಸಂಯುಕ್ತ ಆಶ್ರಯದಲ್ಲಿ “ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳು” ಎಂಬ ವಿಷಯದ ಮೇಲೆ ಜಾಗೃತಿ ಮಾತುಕತೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಸ್ತ್ರಚಿಕಿತ್ಸಕ ಡಾ. ವೈ. ಸುದರ್ಶನ್ ರಾವ್ ಅವರು ಮಹಿಳಾ ಕ್ಯಾನ್ಸರ್‌ಗಳ ಲಕ್ಷಣಗಳು, ತಡೆಗಟ್ಟುವ ಕ್ರಮಗಳು ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮವು 15-01-2026, ಗುರುವಾರ ಸಂಜೆ 6.45ಕ್ಕೆ, ಕಡಿಯಾಳಿ ಶ್ರೀ ಮಹಿಷಮರ್ಧಿನಿ ಹೈಸ್ಕೂಲ್‌ನ ರೋಟರಿ ಹಾಲ್‌ನಲ್ಲಿ ಜರುಗಲಿದೆ. […]
ಶೀರೂರು ಶ್ರೀಗಳ ವೈಭವದ ಪುರಪ್ರವೇಶ-ಪೌರ ಸನ್ಮಾನ

ಉಡುಪಿ: ಶೀರೂರು ಮಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಂಗವಾಗಿ ಪುರಪ್ರವೇಶ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ಸಂಪ್ರದಾಯದಂತೆ ತೀರ್ಥ ಕ್ಷೇತ್ರಗಳ ದರ್ಶನ ಮುಗಿಸಿ ಉಡುಪಿಯ ಕಡಿಯಾಳಿಗೆ ತಲುಪಿದ ಶ್ರೀಗಳಿಗೆ ಆದ್ಧೂರಿ ಸ್ವಾಗತ ಕೋರಲಾಯಿತು. ಅಲ್ಲಿ ಶ್ರೀಮಹಿಷ ಮರ್ದಿನಿ ದೇವರ ದರ್ಶನ ಪಡೆದರು. ಕಡಿಯಾಳಿ ನಿರ್ಮಿಸಲಾದ ವೇದಿಕೆಯಲ್ಲಿ ಸ್ವಾಮೀಜಿ, ಗಣ್ಯರ ಸಮ್ಮುಖದಲ್ಲಿ ಭವ್ಯ ಶೋಭಾಯಾತ್ರೆಯನ್ನು ವೀಕ್ಷಿಸಿದರು. ಕಡಿಯಾಳಿಯಿಂದ ಹೊರಟ ಪುರಪ್ರವೇಶ ಮೆರವಣಿಗೆ, ಕಲ್ಸಂಕ, ಸಿಟಿಬಸ್ ನಿಲ್ದಾಣ, ಹನುಮಾನ್ ವೃತ್ತ, ಕನಕದಾಸ ರಸ್ತೆ ಮೂಲಕ ಕೃಷ್ಣ ಮಠದ ರಥಬೀದಿ […]
ಉಡುಪಿ:ನಿರುಪಯುಕ್ತ ವಸ್ತು ಬಹಿರಂಗ ಹರಾಜು

ಉಡುಪಿ:ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲಿರುವ ವಾಹನಗಳ ಹಳೆ ಬಿಡಿಭಾಗಗಳು ಮತ್ತು ನಿರುಪಯುಕ್ತ ಇತರೆ ವಸ್ತುಗಳನ್ನು ಜನವರಿ 12 ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ಕರ್ನಾಟಕ ಲೋಕಾಯುಕ್ತ ಕಛೇರಿಯ ನೆಲಮಹಡಿಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ಸದರಿ ಹರಾಜಿನಲ್ಲಿ ಭಾಗವಹಿಸಬಹುದಾಗಿದ್ದು, ಯಶಸ್ವೀ ಖರೀದಿದಾರರು ಹಣವನ್ನು ನಗದಾಗಿಯೇ ಪಾವತಿಸಿ, ಅವರ ಸ್ವಂತ ಖರ್ಚಿನಲ್ಲಿ ತೆಗೆದುಕೊಂಡು ಹೋಗಬೇಕು. ಹರಾಜಿನ ಕುರಿತ ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0820-2958881 ಅನ್ನು ಸಂಪರ್ಕಿಸುವಂತೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
ಉಡುಪಿ:ಬಾಲ್ಯ ವಿವಾಹ ಶೂನ್ಯ ಸಹಿಷ್ಣುತೆ ಹೊಂದಿರುವ ಗ್ರಾಮ ಪಂಚಾಯತ್‌ಗಳಿಗೆ ಪ್ರಶಸ್ತಿ : ಪ್ರಸ್ತಾವನೆ ಆಹ್ವಾನ

ಉಡುಪಿ: ಬಾಲ್ಯವಿವಾಹ ನಿಷೇಧಕ್ಕೆ ಸಂಬಂಧಿಸಿದಂತೆ ಶೂನ್ಯ ಸಹಿಷ್ಣುತೆ ಹೊಂದಿರುವ ಬಾಲ್ಯ ವಿವಾಹ ಮುಕ್ತ ಗ್ರಾಮ ಪಂಚಾಯತ್‌ಗಳನ್ನು ಗುರುತಿಸಿ, ಉಡುಪಿ ಜಿಲ್ಲೆಯಲ್ಲಿ ಒಂದು ಗ್ರಾಮ ಪಂಚಾಯತಿಗೆ ಪ್ರಶಸ್ತಿ ರೂ. 25,000 ಗಳನ್ನು ನೀಡಲು ಆದೇಶಿಸಿದ್ದು, ಅದರಂತೆ 2024-25 ನೇ ಸಾಲಿನಲ್ಲಿ ಬಾಲ್ಯವಿವಾಹ ಶೂನ್ಯ ಸಹಿಷ್ಣುತೆ ಹೊಂದಿರುವ ಗ್ರಾಮ ಪಂಚಾಯತ್‌ಗಳಿಗೆ ಪ್ರಶಸ್ತಿ ನೀಡುವ ಸಲುವಾಗಿ ನಿಗಧಿತ ನಮೂನೆಯಲ್ಲಿ ದಾಖಲಾತಿಗಳೊಂದಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತಾವನೆಗಳನ್ನು ಸಲ್ಲಿಸಲು ಜನವರಿ 23 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ […]
ಉಡುಪಿ:ಉಚಿತ ಕೌಶಲ್ಯ ತರಬೇತಿ : ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆ.ಜಿ.ಟಿ.ಟಿ.ಐ) ಯು ಕಾರ್ಕಳದ ಸರಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿಯಲ್ಲಿ ಸಿ.ಎನ್.ಸಿ ಟರ್ನಿಂಗ್ ಆಪರೇಷನ್, ಸಿ.ಎನ್.ಸಿ ಮಿಲ್ಲಿಂಗ್ ಆಪರೇಷನ್ ಹಾಗೂ ಫೀಲ್ಡ್ ಟೆಕ್ನೀಷನ್ ನೆಟ್ವರ್ಕ್ ಸ್ಟೋರೇಜ್ ಒಳಗೊಂಡಂತೆ ಅಲ್ಪಾವಧಿ ಕೋರ್ಸುಗಳಲ್ಲಿ ಉಚಿತ ಕೌಶಲ್ಯ ತರಬೇತಿ ನೀಡುತ್ತಿದ್ದು, ಐ.ಟಿ.ಐ., ಡಿಪ್ಲೋಮಾ ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವ ಅರ್ಹ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂಖ್ಯೆ: 08258-200451, 8277741731 ಅನ್ನು ಸಂಪರ್ಕಿಸಬಹುದಾಗಿದೆ […]