ಅಯೋಧ್ಯೆ ರಾಮ ಮಂದಿರದ ಸುತ್ತಮುತ್ತ ಮಾಂಸಾಹಾರ-ಮದ್ಯ ಸಂಪೂರ್ಣ ನಿಷೇಧ; ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ!

ಅಯೋಧ್ಯೆ: ಧಾರ್ಮಿಕ ನಗರ ಅಯೋಧ್ಯೆಯಲ್ಲಿ ಪವಿತ್ರತೆಯನ್ನು ಕಾಪಾಡುವ ಉದ್ದೇಶದಿಂದ ಆಡಳಿತ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಮ ಮಂದಿರದ ಸುತ್ತಮುತ್ತ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಮತ್ತು ಮದ್ಯ ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಷೇಧವು ನೇರ ಮಾರಾಟಕ್ಕೆ ಮಾತ್ರವಲ್ಲ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆಯುತ್ತಿದ್ದ ವಿತರಣೆಯಿಗೂ ಅನ್ವಯಿಸುತ್ತದೆ. ‘ಪಂಚಕೋಶ ಪರಿಕ್ರಮೆ’ ಮಾರ್ಗದ ವ್ಯಾಪ್ತಿಯಲ್ಲಿ ಆನ್‌ಲೈನ್ ಆರ್ಡರ್‌ಗಳ ಮೂಲಕ ಮಾಂಸಾಹಾರ ಪೂರೈಕೆ ನಡೆಯುತ್ತಿದೆ ಎಂಬ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮ […]
ಉಡುಪಿ ಫುಡ್ ಕಾರ್ನಿವಲ್ :ಉಡುಪಿಯ ಪ್ರಸಿದ್ಧ ಫುಡ್ ಬ್ಲಾಗರ್‌ಗಳಿಂದ ಉದ್ಘಾಟನೆ

ಉಡುಪಿಯಲ್ಲಿ ನಡೆದ ಫುಡ್ ಕಾರ್ನಿವಲ್ ಕಾರ್ಯಕ್ರಮವನ್ನು ನಗರದ ಪ್ರಮುಖ ಫುಡ್ ಬ್ಲಾಗರ್‌ಗಳು ಹಾಗೂ ಡಿಜಿಟಲ್ ಕ್ರಿಯೇಟರ್‌ಗಳು ಸಂಯುಕ್ತವಾಗಿ ಉದ್ಘಾಟಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಬ್ಲಾಗರ್‌ಗಳು ಕಾರ್ನಿವಲ್‌ನ ವೈಶಿಷ್ಟ್ಯ, ವಿವಿಧ ರುಚಿಗಳ ಆಹಾರ ಸ್ಟಾಲ್‌ಗಳು ಹಾಗೂ ಯುವಜನರಿಗೆ ದೊರೆಯುವ ಸೃಜನಾತ್ಮಕ ವೇದಿಕೆ ಕುರಿತು ಮಾತನಾಡಿದರು. ಇಂದು ಮತ್ತು ನಾಳೆ ನಡೆಯಲಿರುವ ಈ ಫುಡ್ ಕಾರ್ನಿವಲ್‌ನಲ್ಲಿ 60ಕ್ಕೂ ಹೆಚ್ಚು ಆಹಾರ ಸ್ಟಾಲ್‌ಗಳು, ಮನರಂಜನಾ ಕಾರ್ಯಕ್ರಮಗಳು ಮತ್ತು ಕುಟುಂಬಗಳಿಗೆ ವಿವಿಧ ಆಕರ್ಷಣೆಗಳನ್ನು ಹೊಂದಿದ್ದು, ನಗರದ ಆಹಾರಾಸಕ್ತರಿಗೆ ಹೊಸ ಅನುಭವವನ್ನು ನೀಡಲಿದೆ.
ಶ್ರವಣ ದೋಷಗಳು ಏನೇ ಇರಲಿ ಡೋಂಟ್ ವರಿ: ಉಡುಪಿಯ ಸ್ಪೀಚ್& ಹೇರಿಂಗ್ ಕೇರ್ ಸೆಂಟರ್ ನಲ್ಲಿದೆ ಎಲ್ಲಾ ಶ್ರವಣ ಸಮಸ್ಯೆಗಳಿಗೂ ಅದ್ಬುತ ಪರಿಹಾರ!

ಶ್ರವಣ ಸಮಸ್ಯೆಗಳು ಈ ಆಧುನಿಕ ಕಾಲದಲ್ಲಿ ಜಾಸ್ತಿಯಾಗುತ್ತಿದೆ. ಮಂದವಾಗಿ ಕಿವಿ ಕೇಳುವುದು, ಯಾರೋ ಮಾತಾಡುವಾಗ ಸರಿಯಾಗಿ ಕೇಳದೇ ಇರುವುದು ಇಂತಹ ಸಣ್ಣಪುಟ್ಟ ಸಮಸ್ಯೆಗಳೇ ಕೊನೆಗೆ ದೊಡ್ಡದ್ದಾಗಿ ಬೆಳೆದು ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ. ಅದಕ್ಕೋಸ್ಕರವೇ ಉಡುಪಿಯ ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್ ಇಂತಹ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುತ್ತದೆ. ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ? ಪದಗಳನ್ನು ಪುನರಾವರ್ತಿಸಲು ನೀವು ಆಗಾಗ್ಗೆ ಕೇಳುವುದುನಿಮ್ಮ ಕಿವಿಯಲ್ಲಿ ಯಾವಾಗಲೂ ಶಬ್ದವು ಧ್ವನಿಸುತ್ತಿರುವುದುನಿಮ್ಮ ಶ್ರವಣ ಸಮಸ್ಯೆಯೂ ಹೊಸ ಜನರನ್ನು ಭೇಟಿಯಾದಾಗ ನೀವು ಮುಜುಗರ ಕೊಳ್ಳಗಾಗುವಂತೆ […]
ಮಣಿಪಾಲ: ರಸ್ತೆ ಅಪಘಾತ- ನವವಿವಾಹಿತ ಮೃತ್ಯು

ಉಡುಪಿ: ಬೈಕ್ ಸ್ಕಿಡ್ ಆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಮಣಿಪಾಲದ ಲಕ್ಷ್ಮೀನಗರ ಸುಧಾ ಫರ್ನಿಚರ್ ಬಳಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಇಂದಿರಾನಗರದ ಬುಡ್ನಾರ್ ನಿವಾಸಿ ಪ್ರವೀಣ್ ಶೆಟ್ಟಿ (36) ಮೃತ ದುರ್ದೈವಿ. ಇವರು ತನ್ನ ಬೈಕ್ ನಲ್ಲಿ ಉಡುಪಿಯಿಂದ ಮಣಿಪಾಲ ಕಡೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ರಿಯಲ್ ಎಸ್ಟೇಟ್ ಸಹಿತ ಹಲವು ಉದ್ಯಮದಲ್ಲಿ ತೊಡಗಿಕೊಂಡಿದ್ದ ಪ್ರವೀಣ್ ಕಳೆದ ಒಂದವರೇ ವರ್ಷದ ಹಿಂದೆಯಷ್ಟೇ ಯುವತಿಯೊರ್ವಳನ್ನು ಪ್ರೀತಿಸಿ ಮದುವೆ ಆಗಿದ್ದರು.
ಕುಂದಾಪುರ: ನಾಪತ್ತೆಯಾಗಿದ್ದ ಬಾಲಕನನ್ನು ಪತ್ತೆ ಹಚ್ಚಿದ ಪೊಲೀಸರು; ಮಧ್ಯರಾತ್ರಿವರೆಗೆ ಬಂಡೆಯ ಕೆಳಗೆ ಕುಳಿತ ಬಾಲಕ!

ಕುಂದಾಪುರ: ಮನೆಯ ಬಳಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕ ಸಂಜೆ ಬಳಿಕ ನಾಪತ್ತೆಯಾದ ಕಾರಣ ಕೆಲಕಾಲ ಸೃಷ್ಟಿಯಾಗಿದ್ದ ಆತಂಕವನ್ನು ಗಂಗೊಳ್ಳಿ ಪೊಲೀಸರು ಹಾಗೂ ಸಾರ್ವಜನಿಕರು ಸತತ ಕಾರ್ಯಾಚರಣೆಯ ಮೂಲಕ ದೂರ ಮಾಡಿದರು. ಗುಜ್ಜಾಡಿ ಬೆಣ್ಣೆರೆಯಲ್ಲಿನ 4ನೇ ತರಗತಿ ವಿದ್ಯಾರ್ಥಿ ಬುಧವಾರ ಶಾಲೆಬಿಟ್ಟು ಮನೆಗೆ ಬಂದು ಆಟವಾಡಿಕೊಂಡಿದ್ದ. ಕತ್ತಲೆ ಕವಿದರೂ ಮನೆಗೆ ಬಾರದೇ ಇದ್ದುದರಿಂದ ಹುಡುಕಾಟ ನಡೆದಿತ್ತು. ರಾತ್ರಿಯಾದರೂ ಸಿಗದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆ ಪಕ್ಕದ ಎತ್ತರದ ಬಂಡೆಯ ಕೆಳಭಾಗದಲ್ಲಿ ಕುಳಿತುಕೊಂಡಿದ್ದ ಬಾಲಕ ರಾತ್ರಿ 12.40ರ […]