ಕಾರ್ಕಳ: ಪರಶುರಾಮ್ ಥೀಮ್ ಪಾರ್ಕ್ ನಲ್ಲಿ ತಾಮ್ರದ ಹೊದಿಕೆ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಉಡುಪಿ: ಬೈಲೂರು ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ್ ಥೀಮ್ ಪಾರ್ಕ್ ನ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.ಮಂಗಳೂರು ಕಳವಾರು ಚಚ್೯ ಗುಡ್ಡೆಯ ಆರೀಫ್ ಯಾನೆ ಮುನ್ನ (37) ಹಾಗೂ ಮಂಗಳೂರು ಕಾವೂರಿನ ಅಬ್ದುಲ್ ಹಮೀದ್ (32) ಬಂಧಿತ ಆರೋಪಿಗಳು.ಪ್ರಕರಣದ ಗಂಭೀರತೆ ಹಾಗೂ ಸೂಕ್ಷ್ಮತೆಯನ್ನು ಅರಿತ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರೀರಾಂ ಶಂಕರ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದು ವಿಶೇಷ ಪೊಲೀಸ್ ತಂಡವು […]

ಜ್ಞಾನಸುಧಾ ಸಂಸ್ಥೆಗೆ ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡುವ ಶಕ್ತಿಯಿದೆ- ಸಂಸದ ಕೋಟ

ಉಡುಪಿ: ಜಾತಿ, ಧರ್ಮಕ್ಕಿಂತ ದೇಶ ಮೊದಲು ಎಂಬ ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡಬೇಕೆಂಬ ಹಿರಿಯರ ಕನಸನ್ನು ನನಸು ಮಾಡುವ ಶಕ್ತಿ ಜ್ಞಾನಸುಧಾ ಸಂಸ್ಥೆಗಿದೆ. ಈ ನಿಟ್ಟಿನಲ್ಲಿ ಸುಧಾಕರ ಶೆಟ್ಟಿ ಮತ್ತು ತಂಡದವರ ಪರಿಶ್ರಮ ಸಾರ್ಥಕತೆಯ ಕಡೆಗೆ ಸಾಗುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮಣಿಪಾಲ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು […]

ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಮಂಗಳೂರು: ಹೊರ ರಾಜ್ಯ, ‌ಹೊಸ ದೇಶಗಳಲ್ಲೂ ಉದ್ಯಮ ಸ್ಥಾಪಿಸಿರುವ ಕರಾವಳಿ ಭಾಗದ ಉದ್ಯಮಿಗಳು ತವರಿನತ್ತ ಮುಖ ಮಾಡುತ್ತಿದ್ದು, ಅವರಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ‌ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು. ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತಗಳ ಸಹಯೋಗದಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಮಾತನಾಡಿದ […]

ಉಡುಪಿ:ಮಲ್ಹಾರ್ ಫ್ಯಾಷನ್ ಮೇಳ 2026 ಉದ್ಘಾಟನಾ ಕಾರ್ಯಕ್ರಮ

ಉಡುಪಿ: ಇಂದು ಮತ್ತು ನಾಳೆ ಮಲ್ಹಾರ್ ಫ್ಯಾಷನ್ ಮೇಳ 2026 ಹಾಗೂ ಬೃಹತ್ ಮಾರಾಟವು ಬೆಳಿಗ್ಗೆ 11:00 ರಿಂದ ರಾತ್ರಿ 8:30 ರವರೆಗೆ ಡಯಾನಾ ಹೋಟೆಲ್ ಜೋಡುಕಟ್ಟೆ ರಸ್ತೆ ಉಡುಪಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ನಂತರ ಮಲ್ಹಾರ್ ಮೇಳ 2026 ನ ಭರ್ಜರಿ ಸೇಲ್ ಹಾಗೂ ಅಲ್ಲಿ ಸಿಗುವ ಬ್ರಾಂಡೆಡ್ ವಸ್ತುಗಳ ಅನಾವರಣ ಮಾಡಲಾಯಿತು. ಇಲ್ಲಿ ಬ್ರಾಂಡೆಡ್ ಸೀರೆಗಳು, ಸಲ್ವಾರ್‌ಗಳು,ಕುರ್ಥಿಗಳು, ಪರ್ಫ್ಯೂಮ್ ಗಳು, ಮಫಿನ್ ಕೇಕ್‌ಗಳು,ಬ್ಯಾಗ್‌ಗಳು,ಬೆಡ್‌ ಶೀಟ್‌ಗಳು ಹೀಗೆ ಹಲವಾರು ಬ್ರ್ಯಾಂಡೆಡ್ ವಸ್ತುಗಳು ಸಿಗಲಿವೆ. ಮೊದಲ […]

ದೇಶೀಯ ರಸಗೊಬ್ಬರ ಉತ್ಪಾದನೆಯಲ್ಲಿ ಭಾರತ ಹೊಸ ದಾಖಲೆ!

ನವದೆಹಲಿ: ಭಾರತವು ರಸಗೊಬ್ಬರ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 2025ನೇ ಸಾಲಿನಲ್ಲಿ ದೇಶದ ಒಟ್ಟು ರಸಗೊಬ್ಬರ ಅಗತ್ಯತೆಯ 73 ಪ್ರತಿಶತವನ್ನು ದೇಶೀಯ ಉತ್ಪಾದನೆಯ ಮೂಲಕ ಪೂರೈಸಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಹೇಳಿದೆ. 2025 ರಲ್ಲಿ ದೇಶೀಯ ರಸಗೊಬ್ಬರ ಉತ್ಪಾದನೆ ದಾಖಲೆಯ 524.62 ಲಕ್ಷ ಟನ್ (ಸುಮಾರು 52.462 ಮಿಲಿಯನ್ ಟನ್) ತಲುಪಿದ್ದು, ಇದು ಇಲ್ಲಿಯವರೆಗಿನ ಗರಿಷ್ಠ ಮಟ್ಟವಾಗಿದೆ. ಕಳೆದ 5 ವರ್ಷಗಳಲ್ಲಿ ಉತ್ಪಾದನೆಯಲ್ಲಿ ನಿರಂತರ ಏರಿಕೆ ಕಂಡುಬಂದಿದೆ. 2021 ರಲ್ಲಿ 433.29 ಲಕ್ಷ ಟನ್, […]