ಉಡುಪಿ: ಮರಳು, ಕಲ್ಲು ಸಾಗಾಟದ ಟಿಪ್ಪರ್‌ಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ: ಎಸ್ಪಿ ಹರಿರಾಂ ಶಂಕರ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗಣಿಗಾರಿಕೆ ಸಂಬಂಧಿತ ಸಲಕರಣೆಗಳನ್ನು ಸಾಗಾಟ ಮಾಡುವ ವಾಹನಗಳು ಅತೀ ವೇಗದಿಂದ ಚಲಾಯಿಸಿಕೊಂಡು ಅಪಘಾತಕ್ಕೆ ಕಾರಣವಾಗುತ್ತಿವೆ. ಹೀಗಾಗಿ ಟಿಪ್ಪರ್ ಗಳ‌ ಆರ್ಭಟಕ್ಕೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆ ವಾಹನಗಳಿಗೆ 60 ಕಿ.ಮೀ. ವೇಗ ಮಿತಿಯ ಸ್ಪೀಡ್ ಗವರ್ನರ್(ವೇಗ ನಿಯಂತ್ರಕ) ಕಡ್ಡಾಯವಾಗಿ ಅಳವಡಿಸುವ ಕುರಿತು ಉಡುಪಿ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರ ನಿರ್ಧಾರ ಕೈಗೊಂಡಿದೆ.ಜಿಲ್ಲೆಯಲ್ಲಿ ಗಣಿಗಾರಿಕೆ ಸಂಬಂಧಿಸಿ ಮರಳು, ಮಣ್ಣು, ಕಲ್ಲು ಸೇರಿದಂತೆ ಖನಿಜಗಳನ್ನು ಸಾಗಿಸುವ ಎಲ್ಲಾ 6 ಚಕ್ರ […]

‘ನಾನ್ ವೆಜ್’ ತುಳು ಸಿನಿಮಾ ಫೆಬ್ರವರಿ 6ರಂದು ಬಿಡುಗಡೆ!

ಮಂಗಳೂರು: ಜಯಕಿರಣ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದ, ಕೆ ಸೂರಜ್ ಶೆಟ್ಟಿ ನಿರ್ದೇಶನದ ‘ನಾನ್‌ವೆಜ್’ ತುಳು ಸಿನಿಮಾ ಫೆಬ್ರುವರಿ 6ರಂದು ತೆರೆ ಕಾಣಲಿದೆ.‘ಸು ಫ್ರಂ ಸೋ’ ಸಿನಿಮಾದಲ್ಲಿ ನಟಿಸಿರುವ ಹೆಚ್ಚಿನ ಕಲಾವಿದರು ‘ನಾನ್‌ವೆಜ್‌’ ಸಿನಿಮಾದಲ್ಲಿ ಇದ್ದಾರೆ. ಪ್ರಕಾಶ್ ತೂಮಿನಾಡು, ‘ಬಂದರೊ ಬಂದರು ಭಾವ ಬಂದರು’ ಖ್ಯಾತಿಯ ಪುಷ್ಪರಾಜ್ ಬೊಳ್ಳೂರು, ದೀಪಕ್‌ ರೈ ಪಾಣಾಜೆ, ಮೈಮ್‌ ರಾಮದಾಸ್‌, ವಿಸ್ಮಯ ವಿನಾಯಕ್, ರೂಪಾ ವರ್ಕಾಡಿ, ನಾಯಕಿಯಾಗಿ ಸಂಜನಾ ಬುರ್ಲಿ, ನಾಯಕನಾಗಿ ಅಥರ್ವ ಪ್ರಕಾಶ್ ನಟಿಸಿದ್ದಾರೆ. ನವೀನ್‌ ಡಿ. […]

10 ತಿಂಗಳ ಮಗುವಿನ ಶ್ವಾಸನಾಳದಲ್ಲಿ ಸಿಲುಕಿದ ಕಡಲೇಬೀಜದ ತುಣುಕು; ವೈದ್ಯರಿಂದ ಚಿಕಿತ್ಸೆ ಯಶಸ್ವಿ

ಮಂಗಳೂರು: ಶ್ವಾಸನಾಳದಲ್ಲಿ ಕಡಲೆಬೀಜದ ತುಣುಕು ಸಿಲುಕಿ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದ 10 ತಿಂಗಳ ಮಗುವನ್ನು ರಕ್ಷಿಸುವಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ. ಮನೆಯಲ್ಲಿ ಆಟವಾಡುವಾಗ 10 ತಿಂಗಳ ಮಗು ಕಡಲೆಬೀಜ ಸೇವಿಸಿ, ಕೆಮ್ಮಲು ಆರಂಭಿಸಿ, ಕೆಲ ಸಮಯದಲ್ಲಿ ಸಹಜ ಸ್ಥಿತಿಗೆ ಮರಳಿತ್ತು. ಆದರೆ, ದಿನ ಕಳೆಯುತ್ತಿದ್ದಂತೆ ಮಗು ನಿತ್ರಾಣಗೊಂಡು, ಉಸಿರಾಟದ ಸಮಸ್ಯೆ ಎದುರಿಸಲು ಶುರುಮಾಡಿತು. ಪಾಲಕರು ಪುತ್ತೂರಿನ ವೈದ್ಯರೊಬ್ಬರಿಗೆ ತೋರಿಸಿದಾಗ, ಅವರು ಶ್ವಾಸನಾಳದಲ್ಲಿ ಯಾವುದೋ ವಸ್ತು ಸಿಲುಕಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಮಗುವನ್ನು ಮಂಗಳೂರು […]

ಶಿವಪುರ ಶಂಕರದೇವ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಭೇಟಿ.

ಹೆಬ್ರಿ: ತಾಲ್ಲೂಕಿನ ಶಿವಪುರ ಶಂಕರದೇವ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಈಚೆಗೆ ಭೇಟಿ ನೀಡಿ ಜೀರ್ಣೋದ್ಧಾರದ ಕಾಮಗಾರಿ ವೀಕ್ಷಿಸಿದರು.ಜೀರ್ಣೋದ್ಧಾರ ಸಮಿತಿಯ ಮನವಿ ಸ್ವೀಕರಿಸಿ ಸರ್ಕಾರದಿಂದ ಸಿಗುವ ಅನುದಾನ ಕೊಡಿಸುವ ಮತ್ತು ದೇವಸ್ಥಾನದ ಎಡಭಾಗದಲ್ಲಿ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಕಾಂಗ್ರೆಸ್‌ ಮುಖಂಡ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯಕ್‌, ಪ್ರಮುಖರಾದ ಹುಣ್ಸೆದಡಿ ಸುರೇಶ ಶೆಟ್ಟಿ, […]

ಹಿರಿಯ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ನಿಧನ!

ಪುಣೆ: ಹಿರಿಯ ಪರಿಸರ ವಿಜ್ಞಾನಿ ಮಾಧವ ಧನಂಜಯ ಗಾಡ್ಗೀಳ್ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಪಶ್ಚಿಮ ಘಟ್ಟಗಳ ಸಂರಕ್ಷಣಾ ವರದಿಯನ್ನು ರಚಿಸಿದ್ದ ಪರಿಸರವಾದಿ ಮತ್ತು ಬರಹಗಾರ ಡಾ. ಮಾಧವ ಗಾಡ್ಗೀಳ್ ಅವರು ಅನಾರೋಗ್ಯದಿಂದ ಬುಧವಾರ ರಾತ್ರಿ ಪುಣೆಯ ಪ್ರಯಾಗ್ ಆಸ್ಪತ್ರೆಯಲ್ಲಿ (Pune) ನಿಧನರಾದರು. ಇಂದು ಸಂಜೆ ಪುಣೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 1942 ಮೇ 24 ರಂದು ಪುಣೆಯಲ್ಲಿ ಜನಿಸಿದ ಮಾಧವ ಗಾಡ್ಗೀಳ್ ಅವರು ಪುಣೆಯ ಫರ್ಗುಸನ್ ಕಾಲೇಜಿನಿಂದ ಬಿಎಸ್ಸಿ (ಪ್ರಾಣಿಶಾಸ್ತ್ರ) […]