ಉಡುಪಿ:ಜನನಿ ಎಂಟರ್ಪ್ರೈಸಸ್‌ನಲ್ಲಿ ಅತ್ಯುತ್ತಮ ಬೆಲೆಯಲ್ಲಿ ಮನೆಬಳಕೆಯ ವಸ್ತುಗಳು ಲಭ್ಯ

ಉಡುಪಿ:ಮಧುವನ ಕಾಂಪ್ಲೆಕ್ಸ್ ಬ್ರಹ್ಮಾವರ ಮತ್ತು ಯುವರಾಜ್ ಮಾಲ್, ಹಂಗಾರಕಟ್ಟೆ, ಕುಂದಾಪುರದಲ್ಲಿರುವ ಜನನಿ ಎಂಟರ್ಪ್ರೈಸಸ್ ನಲ್ಲಿ ಅತ್ಯುತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್ಸ್, ಮೊಬೈಲ್ ಫೋನ್‌ಗಳು, ಫರ್ನಿಚರ್, ಮ್ಯಾಟ್ರೆಸ್‌ಗಳು, ಹೋಮ್ ಅಪ್ಲಯನ್ಸಸ್, ಕಿಚನ್ ಉಪಕರಣಗಳು ಹಾಗೂ ಸೊಲಾರ್–ಇನ್‌ವರ್ಟರ್ ಸಿಸ್ಟಂಗಳು ಲಭ್ಯವಿದೆ. ವಿಶೇಷ ರಿಯಾಯಿತಿ, ಉಡುಗೊರೆಗಳು, ಕ್ಯಾಶ್‌ಬ್ಯಾಕ್, ಸುಲಭ EMI, ಎಕ್ಸ್ಚೇಂಜ್ ಆಫರ್, ಕಾಂಬೋ ಆಫರ್, ಲಕ್ಕಿ ಡ್ರಾ ಮತ್ತು ಉಚಿತ ಡೆಲಿವರಿ ಸೌಲಭ್ಯವೂ ಒದಗಿಸಲಾಗಿದೆ. ಉತ್ತಮ ದರ ಭರವಸೆ ಸಹ ನೀಡಲಾಗಿದೆ. 📞 ಸಂಪರ್ಕಿಸಿ: ಬ್ರಹ್ಮಾವರ: 0820–2987075 | 9972013221ಕುಂದಾಪುರ: 7619473221 […]
ಸಿಎಂ ಸಿದ್ದರಾಮಯ್ಯ ಆಡಳಿತದ ಮೇಲೆಯೂ ಸ್ವಲ್ಪ ಹಿಡಿತ ಇಟ್ಟುಕೊಳ್ಳಬೇಕು- ನಟ ಪ್ರಕಾಶ್ ರಾಜ್

ಉಡುಪಿ: ಸಿಎಂ ಸಿದ್ದರಾಮಯ್ಯನವರು ಆಡಳಿತದ ಮೇಲೆಯೂ ಸ್ವಲ್ಪ ಹಿಡಿತ ಇಟ್ಟುಕೊಳ್ಳುವುದು ಒಳ್ಳೆಯದು. ಆಪ್ತ ವಲಯದ ಮೇಲಿನ ಭ್ರಷ್ಟಾಚಾರದ ಆರೋಪಗಳು ಶೋಭೆ ತರುವುದಿಲ್ಲ. ಹೀಗಾಗಿ ಅದೆಲ್ಲವನ್ನು ಸರಿಮಾಡಿಕೊಂಡು ಪಾರದರ್ಶಕವಾದ ಆಡಳಿತ ನೀಡಬೇಕೆನ್ನುವುದು ನನ್ನ ಆಶಯ ಎಂದು ನಟ, ನಿರ್ದೇಶಕ ಪ್ರಕಾಶ್ ರಾಜ್ ತಿಳಿಸಿದರು. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ದೇವರಾಜ ಅರಸು ಕಾಲಘಟ್ಟ ಬೇರೆ, ಸಿದ್ದರಾಮಯ್ಯ ಕಾಲಘಟ್ಟ ಬೇರೆಯಾಗಿದೆ. ಸಿದ್ದರಾಮಯ್ಯ ಒಳ್ಳೆಯ ಅಹಿಂದ ನಾಯಕರು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ನಾನು ಬರೀ ಹೊಗಳುಭಟ್ಟ […]
ಕರಾವಳಿಗೆ ಕಾಲಿಟ್ಟಿರುವ ನಿರ್ದಿಗಂತವನ್ನು ಪ್ರೋತ್ಸಾಹಿಸಿ: ನಟ ಪ್ರಕಾಶ್ ರಾಜ್

ಉಡುಪಿ: ಮೈಸೂರಿನಲ್ಲಿ ಆರಂಭಗೊಂಡ ನಮ್ಮ ನಿರ್ದಿಗಂತ ರಂಗಭೂಮಿ ತಂಡ ಇಂದು ಹೊಸದಾಗಿ ಕರಾವಳಿಗೆ ಕಾಲಿಟ್ಟಿದೆ. ಆ ಮೂಲಕ ಕರಾವಳಿಯ ನಿರ್ದಿಗಂತ ಆಗಿದೆ. ನಮ್ಮ ಮುಂದೆ ತುಂಬಾ ದೊಡ್ಡ ಪ್ರಯಾಣ ಇದೆ. ಈ ಸಂಸ್ಥೆಯು ನಿಮ್ಮೆಲ್ಲರ ಆಶ್ರಯದಲ್ಲಿಯೇ ಬೆಳೆಯಬೇಕು. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು ಎಂದು ನಟ, ನಿರ್ದೇಶಕ ಪ್ರಕಾಶ್ ರಾಜ್ ಹೇಳಿದ್ದಾರೆ. ತುಳುಕೂಟ ಉಡುಪಿ ವತಿಯಿಂದ ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ 24ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳುನಾಟಕ ಸ್ಪರ್ಧೆಯ ಮೂರನೇ […]
ಕಾರ್ಕಳ: 1 ಕೋಟಿ ರೂ. ವೆಚ್ಚದಲ್ಲಿ 8 ಕಾಲುಸಂಕಗಳ ನಿರ್ಮಾಣಕ್ಕೆ ಸರಕಾರ ಅನುಮೋದನೆ: ವಿ.ಸುನಿಲ್ ಕುಮಾರ್

ಕಾರ್ಕಳ: ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾರ್ಕಳ ಮತ್ತು ಹೆಬ್ರಿ ತಾಲೂಕು ವ್ಯಾಫ್ತಿಯಲ್ಲಿ ಕಾಲು ಸಂಕ ನಿರ್ಮಾಣಕ್ಕೆ ರೂ 01.00 ಕೋಟಿ ಅನುದಾನ ಮಂಜೂರಾಗಿದ್ದು ಸದರಿ ಅನುದಾನಕ್ಕೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ದೊರೆತಿರುತ್ತದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾರ್ಕಳ ವಿಧಾನ ಸಭಾ ಕ್ಷೇತ್ರದ ವಿವಿಧ ಕಡೆಗಳಲ್ಲಿ ರೈತರಿಗೆ, ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಹಳ್ಳ ತೋಡುಗಳನ್ನು ದಾಟಿ ಸಂಚರಿಸುವಂತ ಪರಿಸ್ಥಿತಿ ಕೆಲವೆಡೆ ಇರುತ್ತದೆ. ಇಂತಹ ಪ್ರದೇಶಗಳಲ್ಲಿ ರೈತರು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಮತ್ತು […]
ಶೀರೂರು ಶ್ರೀ ವೇದವರ್ಧನ ತೀರ್ಥರ ಪ್ರಥಮ ಪರ್ಯಾಯ: ಜ.9ರಂದು ಪುರಪ್ರವೇಶ, ಪೌರಸಮ್ಮಾನ

ಉಡುಪಿ: ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ದೇಶಾದ್ಯಂತ ಧಾರ್ಮಿಕ ಕ್ಷೇತ್ರಗಳ ಪರ್ಯಟನೆ ನಡೆಸಿ ಜನವರಿ 9 ರಂದು ಶ್ರೀ ಶೀರೂರು ಮೂಲಮಠದಿಂದ ಶ್ರೀರಾಮಚಂದ್ರ ದೇವರ ಮತ್ತು ಶ್ರೀಮುಖ್ಯಪ್ರಾಣರ ದರ್ಶನ ಮಾಡಿಕೊಂಡು ಹೊರಟು, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವರ ದರ್ಶನ ಮಾಡಿ ಅಲ್ಲಿಂದ ಮಧ್ಯಾಹ್ನ 3ಗಂಟೆಗೆ ಮೆರವಣಿಗೆಯೊಂದಿಗೆ ಪುರಪದೇಶ ಮಾಡಲಿದ್ದಾರೆ ಎಂದು ಪರ್ಯಾಯ ಸಮಿತಿಯ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಹೇಳಿದರು. ಉಡುಪಿ ಶೀರೂರು ಮಠದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಶ್ರೀ ಶೀರೂರು […]