ಹಣಕಾಸು ಇಲಾಖೆ ಅನುಮತಿ ನೀಡಿದ ತಕ್ಷಣ ಫೆಬ್ರವರಿ, ಮಾರ್ಚ್‌ ತಿಂಗಳ ಹಣ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು: ಹಣಕಾಸು ಇಲಾಖೆಯವರು ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಎರಡು ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಕೂಡ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ ಎಂದರು. […]

ನೀಲಾವರದಲ್ಲಿ ಭಾರೀ ಅಗ್ನಿ ಅವಘಡ: ಪೈನಾಪಲ್ ತೋಟ, ಗಿಡಮರ ಬೆಂಕಿಗಾಹುತಿ!

ಉಡುಪಿ: ಪೈನಾಪಲ್ ತೋಟ ಹಾಗೂ ಗಿಡ ಮರಗಳು ಬೆಂಕಿಗಾಹುತಿಯಾದ ಘಟನೆ ಬ್ರಹ್ಮಾವರ ತಾಲೂಕಿನ ನೀಲಾವರದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಮಟಪಾಡಿ ಗ್ರಾಮದಿಂದ ನೀಲಾವರ ಕಡೆ ಹೋಗುವ ಮಾರ್ಗದ ಅಕ್ಕ ಪಕ್ಕದ ರಸ್ತೆಗಳಲ್ಲಿ ಬೆಂಕಿ ಅಬ್ಬರ ಜೋರಾಗಿತ್ತು. ಜೆನಿತ್ ಡೈ ಮೇಕರ್ ಇಂಡಸ್ಟ್ರಿ ಸಮೀಪದ ರಸ್ತೆಯ ಅಕ್ಕಪಕ್ಕಗಳಲ್ಲಿ ಬೆಂಕಿ ಕಾಣಿಸಿಕೊಂಡು, ನಂತರ ಹಬ್ಬಲಾರಂಭಿಸಿದೆ. ಪರಿಸರದಲ್ಲಿದ್ದ ಪೈನಾಪಲ್ ತೋಟ ಹಾಗೂ ಒಣಹುಲ್ಲು, ಗಿಡ ಗಂಟಿಗಳು ಸುಟ್ಟು ಕರಕಲಾಗಿವೆ. ಪರಿಸರದ ಅಡಿಕೆ ತೋಟ, ತೆಂಗು, ಹಲಸು ಗಿಡಗಳು ಕೂಡ ಸುಟ್ಟು ಹೋಗಿವೆ […]

ಉಡುಪಿ: ಜ.10-11ರಂದು “ಫುಡ್ ಕಾರ್ನಿವಲ್” ಆಹಾರ ಮೇಳ

ಉಡುಪಿ: ಮಹಿಳಾ ಉದ್ಯಮಿಗಳ ವೇದಿಕೆ ಪವರ್ ಸಂಸ್ಥೆೆ ವತಿಯಿಂದ ಜ.10 ಮತ್ತು 11ರಂದು ಅಜ್ಜರಕಾಡು ಪಾರ್ಕ್‌ನಲ್ಲಿ “ಫುಡ್ ಕಾರ್ನಿವಲ್” ಆಹಾರ ಮೇಳವನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ಪ್ರಿಯಾ ಕಾಮತ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ‌ ಮಾಹಿತಿ ನೀಡಿದ ಅವರು, ಉಡುಪಿ ಪರ್ಯಾಯೋತ್ಸವ ಪರ್ವಕಾಲದಲ್ಲಿ ನಡೆಯುತ್ತಿರುವ ಈ ಫುಡ್ ಕಾರ್ನಿವಲ್‌ನಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರಗಳ ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗುತ್ತದೆ. 60ಕ್ಕಿಿಂತಲೂ ಅಧಿಕ ಮಳಿಗೆಗಳು, 100ಕ್ಕೂ ಅಧಿಕ ವಿಭಿನ್ನ ಆಹಾರ ಪದಾರ್ಥಗಳು, ನಾನಾ ಬಗೆಯ ಖಾದ್ಯಗಳು ಮತ್ತು ವಿವಿಧ […]

ರೋಟರಿ ಕ್ಲಬ್ ಕಾರ್ಕಳ, ಸಂಭ್ರಮ- ಸಮ್ಮಿಲನ: ಪತ್ರಕರ್ತ ಹೆಬ್ರಿ ಉದಯಕುಮಾರ್ ಶೆಟ್ಟಿ ಅವರಿಗೆ ಸನ್ಮಾನ

ಕಾರ್ಕಳ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಹೆಬ್ರಿಯ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಹೆಬ್ರಿ ಉದಯ್ ಕುಮಾರ್ ಶೆಟ್ಟಿ ಅವರನ್ನು ಜ. 7ರಂದು ಕಾರ್ಕಳ ಕಾಬೆಟ್ಟು ಕಟ್ಟೆ ಮಾರು ನೈವೇದ್ಯ ಸಭಾ ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಯ “ಸಂಭ್ರಮ ಸಮ್ಮಿಲನ” ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಖ್ಯಾತ ಶಿಲ್ಪಿ ಕೆ ಸತೀಶ್ ಆಚಾರ್ಯ ದಂಪತಿ ಅವರನ್ನು ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಕಳ ರೋಟರಿ ಕ್ಲಬ್ಬಿನ […]

ಉಡುಪಿ:ಜನನಿ ಎಂಟರ್‌ಪ್ರೈಸಸ್ ನಲ್ಲಿ 10ನೇ ವಾರ್ಷಿಕೋತ್ಸವ – ಗ್ರಾಹಕರಿಗೆ ವಿಶೇಷ ಬಹುಮಾನಗಳ ಸುರಿಮಳೆ

ಉಡುಪಿ:ಜನನಿ ಎಂಟರ್‌ಪ್ರೈಸಸ್ ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ಮೇ 3, 2026ರವರೆಗೆ ಖರೀದಿ ಮಾಡುವ ಗ್ರಾಹಕರಿಗೆ 555 ವಿಶೇಷ ಬಹುಮಾನಗಳು ಹಾಗೂ ರೂ.20,00,000 ಕ್ಕೂ ಅಧಿಕ ಮೊತ್ತದ ಬಹುಮಾನಗಳು ಲಭ್ಯವಿದೆ. ಮೊದಲ ಬಹುಮಾನವಾಗಿ ರೂ. 2,50,000 ಮೌಲ್ಯದ ಡೈಮಂಡ್ ವೋಚರ್, ಎರಡನೇಯಿಂದ ನಾಲ್ಕನೇ ಸ್ಥಾನಗಳಿಗೆ ರೂ. 1,00,000, ₹75,000 ಮತ್ತು ₹50,000 ಮೌಲ್ಯದ ಗೋಲ್ಡ್ ವೋಚರ್‌ಗಳು ಲಭ್ಯ. ಜೊತೆಗೆ ವಿವಿಧ ಸ್ಥಾನಗಳಿಗೆ ₹25,000, ₹10,000, ₹5,000, ₹3,000, ₹2,000 ಮತ್ತು ₹1,000 ಮೌಲ್ಯದ […]