ಉಡುಪಿ: ಖಾಸಗಿ ಜಾಗಕ್ಕೆ ಬೆಂಕಿ ಹಚ್ಚಿದ ಮಾನಸಿಕ ಅಸ್ವಸ್ಥ- ತಪ್ಪಿದ ಭಾರೀ ಅನಾಹುತ

ಉಡುಪಿ: ಮಾನಸಿಕ ಅಸ್ವಸ್ಥನೋರ್ವ ಖಾಸಗಿ ಜಾಗಕ್ಕೆ ಬೆಂಕಿ‌ಹಚ್ಚಿದ್ದು ಇದರಿಂದ ಭಾರಿ ಅನಾಹುತ ತಪ್ಪಿದ ಘಟನೆ ಮಂಗಳವಾರ ನಡೆದಿದೆ.ಶ್ರೀ ಕೃಷ್ಣಮಠದ ಹಿಂಭಾಗದ ಗೋವಿಂದ ಪುಷ್ಕರಣಿ ಮಾರ್ಗದಲ್ಲಿರುವ ಖಾಸಗಿ ಜಾಗಕ್ಕೆ ಮಾನಸಿಕ ಅಸ್ವಸ್ಥನೋರ್ವ ಬೆಂಕಿಹಚ್ಚಿದ್ದು, ಇದರ ಪರಿಣಾಮ ಬೆಂಕಿಯು ಖಾಲಿ ಜಾಗಕ್ಕೆ ವಿಸ್ತರಿಸಿದೆ. ಖಾಸಗಿ ಜಾಗದ ಸಮೀಪದಲ್ಲಿ ಶಾಲೆ, ಮನೆಯಿರುವ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಿಯರು ಕೂಡಲೇ ಅಗ್ನಿ ಶಾಮಕ್ಕೆ ವಿಷಯ ‌ತಿಳಿಸಿದ್ದು, ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಉಡುಪಿ:ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಸುರೇಶ್‌ ಕಲ್ಮಾಡಿ ನಿಧನ

ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಸುರೇಶ್‌ ಕಲ್ಮಾಡಿ ಅವರು ಪುಣೆಯಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುರೇಶ್ ಕಲ್ಮಾಡಿ ಪುಣೆಯ ದೀನನಾಥ್ ಮಂಗೇಷ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಬಗ್ಗೆ ಅವರ ಕುಟುಂಬದ ಮೂಲಗಳು ದೃಢಪಡಿಸಿದೆ. ಪ್ರಭಾವಿ ರಾಜಕಾರಣಿಯಾಗಿದ್ದ ಸುರೇಶ್ ಕಲ್ಮಾಡಿ ಲೋಕಸಭೆಯಲ್ಲಿ ಹಲವು ಬಾರಿ ಪುಣೆ ನಗರವನ್ನು ಪ್ರತಿನಿಧಿಸಿದ್ದರು. ಪಿ.ವಿ.ನರಸಿಂಹರಾವ್ ಸರಕಾರದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಕಲ್ಮಾಡಿ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ (ಐಒಎ) […]