ಮಾಹೆಯಿಂದ ಯಕ್ಷಗಾನ ಕಲಾವಿದರಿಗೆ ಉಚಿತ ಮಣಿಪಾಲ ಆರೋಗ್ಯ ಕಾರ್ಡ್ ಸೌಲಭ್ಯ.

ಮಣಿಪಾಲ: ಮಾಹೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ| ರಾಮದಾಸ್ ಪೈ ಅವರ 90ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಸಹಯೋಗದಲ್ಲಿ ಯಕ್ಷ ಗಾನ ಮೇಳಗಳ ಕಲಾವಿದರಿಗೆ ಉಚಿತ ಮಣಿ ಪಾಲ ಆರೋಗ್ಯ ಕಾರ್ಡ್ ಸೌಲಭ್ಯ ವಿಸ್ತರಿಸಲಾಗಿದೆ. ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿ, ಯಕ್ಷಗಾನ ಪರಂಪರೆಯ ಸಂರಕ್ಷಣೆ ಮತ್ತು ವಿಸ್ತರಣೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿಯವರ ಮನವಿಗೆ ಸ್ಪಂದಿಸಿ ಸಮುದಾಯ ಆರೋಗ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಮೇಲಿನ […]
ಪರಶುರಾಮ ಥೀಮ್ ಪಾರ್ಕ್‌ಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕೊಡಿ: ಸುನಿಲ್ ಕುಮಾರ್ ಆಗ್ರಹ

ಉಡುಪಿ: ಕಾಂಗ್ರೆಸಿಗರು, ಕಾರ್ಕಳ ವಿರೋಧಿಗಳು ಬೈಲೂರಿನಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕ್ ವಿವಾದ ಸೃಷ್ಟಿಸಿದೆ. ಪರಶುರಾಮ ವಿವಾದ ಸೃಷ್ಟಿಸಿದ ಅಭಿವೃದ್ಧಿ ಸಮಿತಿ ವಿಸರ್ಜನೆಯಾಗಿದೆ. ಈಗ ಜಿಲ್ಲಾಡಳಿತ 2023ರಲ್ಲಿ ತೆಗೆದುಕೊಂಡ ನಿರ್ಧಾರವನ್ನು ಅನುಷ್ಠಾನ ಮಾಡಲಿ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ. ಥೀಮ್ ಪಾರ್ಕ್‌ನ ಕಟ್ಟಡದ ಮೇಲ್ಚಾವಣಿಗೆ ಹೊದಿಸಿದ್ದ ತಾಮ್ರದ ಹೊದಿಕೆ ಕಳ್ಳತನವಾದ ಪ್ರದೇಶಕ್ಕೆ ಇಂದು ಭೇಟಿ ನೀಡಿದ ಸುನಿಲ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.ವಿವಾದಗಳಿಂದ ಸಾರ್ವಜನಿಕರ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆಗೆದು ಥೀಮ್ ಪಾರ್ಕ್ ಸಂದರ್ಶನಕ್ಕೆ ಎಲ್ಲರಿಗೂ […]
ಕಾರ್ಕಳ: ಸೋನಿಯಾ ಲೋಬೋ ಅವರಿಗೆ ಪಿಎಚ್‌ಡಿ ಪದವಿ ಗೌರವ

ಕಾರ್ಕಳ : ನಿಟ್ಟೆಯ ಎನ್‌ಎಂಎಎಂ (NMAM) ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹ್ಯುಮಾನಿಟೀಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸೋನಿಯಾ ಲೋಬೋ ಅವರು ಶ್ರೀನಿವಾಸ್ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿಯನ್ನು ಪಡೆದಿದ್ದಾರೆ. ಅವರು “S&P BSE ಹೆಲ್ತ್‌ಕೇರ್ ಸೂಚ್ಯಂಕವನ್ನು ಉಲ್ಲೇಖಿಸಿ ಭಾರತೀಯ ಔಷಧೀಯ ಉದ್ಯಮದ ಷೇರು ಬೆಲೆ ಚಲನೆ” ಎಂಬ ಶೀರ್ಷಿಕೆಯ ಸಂಶೋಧನಾ ಪ್ರಬಂಧವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಸಂಶೋಧನಾ ಕಾರ್ಯದಲ್ಲಿ ಭಾರತೀಯ ಔಷಧೀಯ ಕ್ಷೇತ್ರದ ಷೇರು ಮಾರುಕಟ್ಟೆಯ ಪ್ರವೃತ್ತಿಗಳು, […]
ಉಡುಪಿ:ಶೀರೂರು ಪರ್ಯಾಯ: ಕೃಷ್ಣಮಠಕ್ಕಿದು 253ನೇ ಪರ್ಯಾಯ; ಪರ್ಯಾಯ ವ್ಯವಸ್ಥೆಗೆ 504 ವರ್ಷಗಳ ಇತಿಹಾಸ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಜ. 18ರಂದು ನಡೆಯುವ ಪರ್ಯಾಯೋತ್ಸವದಲ್ಲಿ ಶ್ರೀ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಇದು ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ 253ನೆಯ ದ್ವೈವಾರ್ಷಿಕ ಪರ್ಯಾಯೋತ್ಸವ. ಶ್ರೀಮಧ್ವಾಚಾರ್ಯರು (1238-1317) ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಎರಡೆರಡು ತಿಂಗಳ (ದ್ವೈಮಾಸಿಕ ಪದ್ಧತಿ) ಅವಧಿ ಸರತಿ ಪೂಜೆಯ ವ್ಯವಸ್ಥೆಯನ್ನು ಕಲ್ಪಿಸಿದ್ದರು. ವಾದಿರಾಜ ಗುರುಸಾರ್ವಭೌಮರು (1481-1601) ಎರಡು ವರ್ಷಗಳ (ದ್ವೈವಾರ್ಷಿಕ) ಪೂಜಾ ವ್ಯವಸ್ಥೆಗೆ ಅವಧಿ ವಿಸ್ತರಿಸಿದರು. 1522ರಲ್ಲಿ ಆರಂಭಗೊಂಡ ಎರಡು ವರ್ಷಗಳ ಪರ್ಯಾಯ ಪೂಜಾ ಪದ್ಧತಿ ಐದನೆಯ […]
ಉಡುಪಿ:ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಪುಸ್ತಕಗಳ ಆಹ್ವಾನ

ಉಡುಪಿ: ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಪುಸ್ತಕಗಳ ನೋಂದಣಿ ಕಾಯಿದೆ ಅನ್ವಯ 2025 ನೇ ಸಾಲಿನಲ್ಲಿ ಮುದ್ರಿಸಿ ಪ್ರಕಟಿಸಿದ ಮೊದಲ ಆವೃತ್ತಿಯ ಪುಸ್ತಕಗಳ ಮೂರು ಪ್ರತಿಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಆಯ್ಕೆಗಾಗಿ ಮೊದಲ ಆವೃತ್ತಿ ಪುಸ್ತಕ ಆಹ್ವಾನಿಸಲಾಗಿದೆ. 2025 ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟಗೊಳ್ಳುವ ಯಾವುದೇ ಭಾಷೆಯ ಪುಸ್ತಕಗಳಲ್ಲಿ ಪ್ರತಿ ಶೀರ್ಷಿಕೆಯ ಮೂರು ಪ್ರತಿಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಸಲ್ಲಿಸಿ ಜನವರಿ 31 ರ ಸಂಜೆ 5.30 ರ ಒಳಗಾಗಿ ನೋಂದಣಿ […]