ಯಕೃತ್ತಿನ ಆರೈಕೆಯಲ್ಲಿ ಹೊಸ ಅಧ್ಯಾಯ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸಮಗ್ರ ಯಕೃತ್ತು ಚಿಕಿತ್ಸೆ ಮತ್ತು ಯಕೃತ್ತುಕಸಿ ಚಿಕಿತ್ಸೆ ಪ್ರಾರಂಭ

ಮಣಿಪಾಲ, 06 ಜನವರಿ 2026: ಯಕೃತ್ತಿನ (ಲಿವರ್ ) ಕಾಯಿಲೆಗಳು ಸಾಮಾನ್ಯವಾಗಿ ಲಕ್ಷಣಗಳು ಸ್ಪಷ್ಟವಾಗುವವರೆಗೆ ಸದ್ದಿಲ್ಲದೆ ಮುಂದುವರಿಯುತ್ತವೆ ಮತ್ತು ನಿರ್ಲಕ್ಷಿಸುವುದು ಕಷ್ಟ. ಈ ಹಂತದಲ್ಲಿ, ಚಿಕಿತ್ಸೆಯ ಆಯ್ಕೆಗಳು ಅಗಾಧವೆಂದು ತೋರುತ್ತದೆ. ಆರಂಭಿಕ ರೋಗನಿರ್ಣಯ ಮತ್ತು ಸಮಗ್ರ ಆರೈಕೆಯೊಂದಿಗೆ ಈ ಹೊರೆಯನ್ನು ಬಹಳವಾಗಿ ಕಡಿಮೆ ಮಾಡಬಹುದು. ಬೆಳೆಯುತ್ತಿರುವ ಸವಾಲು ಮತ್ತು ಮನೆ ಬಾಗಿಲಲ್ಲೇ ವಿಶೇಷ ಆರೈಕೆಯ ತುರ್ತು ಅಗತ್ಯಕ್ಕೆ ಪ್ರತಿಕ್ರಿಯೆಯಾಗಿ, ಮಣಿಪಾಲದ ಕೆಎಂಸಿ ಬೋಧನಾ ಆಸ್ಪತ್ರೆ ಮತ್ತು ಮಾಹೆಯ ಘಟಕವಾದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಮಣಿಪಾಲ್ ಇಂಟಿಗ್ರೇಟೆಡ್ ಲಿವರ್ […]

ಉಡುಪಿ ಪರ್ಯಾಯ: 6 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿರ್ದೇಶನ

ಬೆಳಗಾವಿ: ಉಡುಪಿ ಪರ್ಯಾಯದ ಹಿನ್ನೆಲೆಯಲ್ಲಿ ಸುಮಾರು 6 ಕೋಟಿ ರೂ.ಗಳ ವೆಚ್ಚದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ಸಚಿವರು, ಪರ್ಯಾಯ ಸುಗಮವಾಗಿ ನಡೆಯಲು ರಸ್ತೆ ಅಭಿವೃದ್ಧಿ ಸೇರಿದಂತೆ ನಗರದಲ್ಲಿ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಬೇಕು. ಸಮಯಾವಕಾಶ ಕಡಿಮೆ ಇರುವುದರಿಂದ ಸಮರೋಪಾದಿಯಲ್ಲಿ ಹಗಲು- ರಾತ್ರಿ ಕೆಲಸ […]

ಉಡುಪಿ:ಕರಾವಳಿ ಆಟೋಮೊಬೈಲ್ಸ್‌ ನಲ್ಲಿ ಉದ್ಯೋಗವಕಾಶ

ಉಡುಪಿ:ಕರಾವಳಿ ಆಟೋಮೊಬೈಲ್ಸ್‌ ನಲ್ಲಿ ಬ್ಯುಸಿನೆಸ್ ಡೆವೆಲಪ್ಮೆಂಟ್ ಆಫೀಸರ್ (ಪುರುಷ-4) ಹುದ್ದೆಗೆ ನೇಮಕಾತಿ ನಡೆಯಲಿದೆ. ಸಾಮಾನ್ಯ ಅವಶ್ಯಕತೆಗಳು: ▪ ಯಾವುದೇ ಮಾರ್ಕೆಟಿಂಗ್ ಕ್ಷೇತ್ರದಲ್ಲಿ 1 ವರ್ಷದ ಅನುಭವವಿರಬೇಕು. ▪ ಪಿಯುಸಿ/ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ▪ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ▪ ವೃತ್ತಿಪರ ನೋಟವಿರಬೇಕು. ಸಂಬಳ, ಪ್ರೋತ್ಸಾಹಕ, ಪ್ರಯಾಣ ಭತ್ಯೆ, ಬೋನಸ್ , ವೈದ್ಯಕೀಯ ವಿಮೆ ಈ ಎಲ್ಲಾ ಸೌಲಭ್ಯಗಳು ಇರಲಿವೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ:+918050092644 ನಿಮ್ಮ ರೆಸ್ಯೂಮ್ ಅನ್ನು ಇಲ್ಲಿಗೆ ಸಲ್ಲಿಸಿ: [email protected]

24ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳು ನಾಟಕ ಸ್ಪರ್ಧೆ ಉದ್ಘಾಟನೆ

ಉಡುಪಿ: ತುಳು ನಾಟಕಕ್ಕೆ ಅಪಾರ ಕೊಡುಗೆ ನೀಡಿರುವ ಕೊಮ್ತೂರು ದೊಡ್ಡಣ್ಣ ಶೆಟ್ಟಿ ಅವರ ಜನ್ಮದಿನದ ಶತಮಾನೋತ್ಸವ ಈ ವರ್ಷ ಆಚರಿಸುತ್ತಿದ್ದು, ಅಕಾಡೆಮಿ ವತಿಯಿಂದ ಈ ಕುರಿತು ಕಾರ್ಯಕ್ರಮ ಹಮ್ಮಿಕೊಂಡು, ಅವರ ಪರಿಚಯ ಹಾಗೂ ನಾಟಕಗಳ ಕೃತಿಯನ್ನು ಹೊರ ತರಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ. ತುಳುಕೂಟ ಉಡುಪಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಜಂಟಿ ಆಶ್ರಯದಲ್ಲಿ ಉಡುಪಿ ಎಮ್.ಜಿ.ಎಮ್.ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಂಡಿರುವ 24ನೇ ವರ್ಷದ ಕೆಮ್ತೂರು […]

ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳ್ಳತನ ಆಗಲು ಶಾಸಕ ಸುನಿಲ್ ಕುಮಾರ್ ಕಾರಣ- ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪ

ಉಡುಪಿ: ಅಂದು ಪರಶುರಾಮ‌ನ ಮೂರ್ತಿಯ ಅರ್ಧ ಭಾಗ ತೆಗೆದುಕೊಂಡು ಹೋಗಲು ಶಾಸಕ ಸುನಿಲ್ ಕುಮಾರ್ ಅವರೇ ಕಾರಣರಾಗಿದ್ದರು. ಇದೀಗ ಮೇಲ್ಛಾವಣಿಯ ತ್ರಾಮದ ಹೊದಿಕೆ ಕಳ್ಳತನ ಆಗಲು ಅವರೇ ಕಾರಣರಾಗಿದ್ದಾರೆ. ಅವರು ತನ್ನ ತಪ್ಪನ್ನು ಒಪ್ಪಿಕೊಂಡು ಜನರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ. ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಮೇಲ್ಛಾವಣಿಗೆ ಹಾಕಲಾಗಿದ್ದ ಬೆಲೆಬಾಳುವ ತಾಮ್ರದ ಹೊದಿಕೆಗಳ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಸುನಿಲ್ ಕುಮಾರ್ ಅವರು ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು. […]