ಆತ್ರಾಡಿ ಕಬ್ಯಾಡಿ ಶ್ರೀಮತಿ ಮಾಲತಿ ಸುರೇಶ್ ಅವರಿಗೆ ‘ಕರುನಾಡ ಕಾಯಕ ಯೋಗಿ’ ರಾಜ್ಯ ಪ್ರಶಸ್ತಿ ಪ್ರದಾನ.

ಉಡುಪಿ: ಬೆಂಗಳೂರಿನ ‘ವಂದೇ ಭಾರತ್ ಲಲಿತಾ ಕಲಾ ಅಕಾಡೆಮಿ’ಯವರು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ನಯನಾ ಸಭಾಂಗಣದಲ್ಲಿ ನಡೆಸುತ್ತಿರುವ ಕರ್ನಾಟಕ ರಾಜ್ಯ ಮಟ್ಟದ ಸಂಕ್ರಾಂತಿ ಸಂಭ್ರಮ 2026 ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮ ಟೈಲರಿಂಗ್ ಕ್ಷೇತ್ರದಲ್ಲಿ ರಾಜ್ಯದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಉಡುಪಿ ತಾಲೂಕಿನ 80 ಬಡಗು ಬೆಟ್ಟು ಗ್ರಾಮ ಕಬ್ಯಾಡಿ ನಿವಾಸಿ ಶ್ರೀಮತಿ ಮಾಲತಿ ಸುರೇಶ್ ಅವರಿಗೆ ಗಣ್ಯರ ಉಪಸ್ಥಿಯಲ್ಲಿ ‘ಕರುನಾಡ ಕಾಯಕ ಯೋಗಿ’ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶ್ರೀಮತಿ ಮಾಲತಿ ಸುರೇಶ್ ರವರು ಬಿಜೆಪಿ […]
ಉಡುಪಿ: ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ ಬಗ್ಗೆ ಪ್ರಚೋದನಕಾರಿ ಪೋಸ್ಟ್; ಓರ್ವನ ಬಂಧನ

ಉಡುಪಿ: ಶಿರೂರು ಮಠದ ಪರ್ಯಾಯ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆ ಅರ್ಪಿಸುವ ಸಂಬಂಧ ರಚಿಸಲಾದ ಉಡುಪಿ ಜಿಲ್ಲಾ ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ ಬಗ್ಗೆ ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ರೀತಿ ಆಕ್ಷೇಪಾರ್ಹ ಬರಹಗಳನ್ನು ಬೆರೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ತಾಲೂಕಿನ ನಿಟ್ಟೆ ಅಂಬಡೆಕಲ್ಲು ನಿವಾಸಿ ಸುಧಾಕರ(37) ಬಂಧಿತ ಆರೋಪಿ. ಈತನನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, […]
ಉಡುಪಿ: ಆಟೋ ರಿಕ್ಷಾದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

ಉಡುಪಿ: ಆಟೋ ರಿಕ್ಷಾದಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಪೌಡರ್ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಉಡುಪಿ ದೊಡ್ಡಣಗುಡ್ಡೆ ನಿವಾಸಿ ಅಬ್ದುಲ್ ರೌಫ್(26) ಬಂಧಿತ ಆರೋಪಿ. ಈತನನ್ನು ಉಡುಪಿಯ ಕರಂಬಳ್ಳಿ ರಾಮಬೆಟ್ಟು ಸಮೀಪ ಬಂಧಿಸಿ, ಆತನಿಂದ 15,000ರೂ. ಮೌಲ್ಯದ 7.59 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, ಮತ್ತು ಮಾರಾಟ ಮಾಡಿ ಗಳಿಸಿದ್ದ 3100ರೂ. ನಗದು ಮತ್ತು ಆಟೋರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 3,23,100ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ […]
ನೋಡಿದ ಕ್ಷಣಗಳನ್ನು ನೆನಪಿಟ್ಟುಕೊಳ್ಳುತ್ತೆ ಈ ಅಚ್ಚರಿಯ ಕನ್ನಡಕ :AI ಕನ್ನಡಕದ ಮಹಿಮೆ ಕೇಳಿ!

ಮನುಷ್ಯನು ಕಣ್ಣಾರೆ ಕಂಡದ್ದನ್ನೇ ಕೆಲವೊಮ್ಮೆ ಮರೆತುಬಿಡುತ್ತಾನೆ. ಆದರೆ ಇನ್ನು ಮುಂದೆ ಅಂತಹ ಮರೆವಿನ ಸಮಸ್ಯೆಗೆ ಪರಿಹಾರ ಸಿಗುವ ದಿನಗಳು ದೂರವಿಲ್ಲ. ಅಮೆರಿಕದ ವಿಜ್ಞಾನಿಗಳು ನೋಡಿದ ಪ್ರತಿಯೊಂದು ಕ್ಷಣವನ್ನೂ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ವಿಶಿಷ್ಟ ಸ್ಮಾರ್ಟ್ ಕನ್ನಡಕವನ್ನು ಅಭಿವೃದ್ಧಿಪಡಿಸಿದ್ದಾರೆ. ವಾಷಿಂಗ್ಟನ್‌ನ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಹೊಸ ತಂತ್ರಜ್ಞಾನ ಆಧಾರಿತ ಕನ್ನಡಕಕ್ಕೆ ‘ಪಿಕ್ಸ್’ಎಂಬ ಹೆಸರನ್ನು ನೀಡಿದ್ದಾರೆ. ಈ ಕನ್ನಡಕವನ್ನು ಧರಿಸಿದ ವ್ಯಕ್ತಿ ನೋಡಿದ ಮುಖಗಳು, ಸ್ಥಳಗಳು ಹಾಗೂ ವಸ್ತುಗಳನ್ನು ಕ್ಯಾಮೆರಾ ಮತ್ತು ಕೃತಕ ಬುದ್ಧಿಮತ್ತೆ (ಎಐ) […]
ಕುಂದಾಪುರ: ವಿದ್ಯಾ ಅಕಾಡೆಮಿ ವಾರ್ಷಿಕೋತ್ಸವ ಸಂಭ್ರಮ

ಕುಂದಾಪುರ: ಇತ್ತೀಚೆಗೆ ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆಯಲ್ಲಿ ಶಾಲಾ ವಾರ್ಷಿಕೋತ್ಸವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಪ್ರೇಮಾನಂದ ಕೆ. ತಾಲೂಕು ಹೆಲ್ತ್ ಆಫೀಸರ್ ಕುಂದಾಪುರ ಇವರು ಆಗಮಿಸಿದ್ದರು. ಹಾಗೆಯೇ ವೇದಿಕೆಯಲ್ಲಿ ಡಾ॥ ರಾಮಕೃಷ್ಣ ಹೆಗ್ಡೆ, ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್, ಹಾಗೂ ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್, ಪ್ರಿನ್ಸಿಪಲ್ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ,ಡಾ. ಪ್ರತಿಭಾ ಪಾಟೀಲ್ ಪ್ರಿನ್ಸಿಪಾಲ್ ಆಫ್ ಐ ಎಂ ಜೆ ಇನ್ಸ್ಟಿಟ್ಯೂಷನ್, ಸೆಬಾಸ್ಟಿನ್, ಅಕಾಡೆಮಿಸಿನ್ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು […]