ಕಾಪು ಮಾರಿಯಮ್ಮ ದೇಗುಲಕ್ಕೆ ಖ್ಯಾತ ಗಾಯಕ ವಿಜಯ ಪ್ರಕಾಶ್ ಭೇಟಿ: ವಿಶೇಷ ಅನ್ನದಾನ ಸೇವೆ ಸಮರ್ಪಣೆ

ಉಡುಪಿ: ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರ್ಶನ ಪಡೆದರು.ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ಪೂಜಾ ಸಂದರ್ಭದಲ್ಲಿ ಆಗಮಿಸಿದ್ದ ಗಾಯಕ ವಿಜಯ ಪ್ರಕಾಶ್ ಕರ್ನಾಟಕದ ಬೃಹತ್ ಘಂಟೆಯನ್ನು ಬಾರಿಸಿದರು.ನಂತರ ನಿತ್ಯ ಅನ್ನದಾನ ನಡೆಯುತ್ತಿರುವುದರಿಂದ ಒಂದು ದಿನದ ವಿಶೇಷ ಅನ್ನದಾನ ಸೇವೆಯನ್ನು ನೀಡಿ, ನವದುರ್ಗಾ ಲೇಖನ ಮಂಟಪದ ಲೇಖನ ಯಜ್ಞದ ಪುಣ್ಯ […]

ಸಾಯಿ ಈಶ್ವರ್‌ರಿಂದ ಅಯ್ಯಪ್ಪಸ್ವಾಮಿ ವ್ರತಧಾರಿಗಳಿಗೆ ಅನ್ನದಾನ ಸೇವೆ, ವಿಶ್ರಾಂತಿ ವ್ಯವಸ್ಥೆ

ಕಟಪಾಡಿ:ಭಾರತೀಯ ಸಂತ ಸಮಿತಿ ಕರ್ನಾಟಕ ಹಾಗೂ ಶ್ರೀ ಕ್ಷೇತ್ರ ಶಂಕರಪುರ ಉಡುಪಿ ಜಿಲ್ಲೆ ಸಹಭಾಗಿತ್ವದಲ್ಲಿ ಶ್ರೀ ಸಾಯಿ ಈಶ್ವರ್‌ ಗುರೂಜಿಯವರ ಮಾರ್ಗ ದರ್ಶನದಲ್ಲಿ ಜ.1ರಿಂದ ಜ. 14ರ ವರೆಗೆ ಉಡುಪಿ, ಮಂಗಳೂರು ಹೆದ್ದಾರಿಯಾಗಿ ಶಬರಿಮಲೆ ಯಾತ್ರೆ ಮಾಡುವ ಅಯ್ಯಪ್ಪ ಸ್ವಾಮಿ ವ್ರತದಾರಿಗಳಿಗೆ ಅನ್ನದಾನ ಸೇವೆ ಹಾಗೂ ವಿಶ್ರಾಂತಿಯ ವ್ಯವಸ್ಥೆ ಕಾಪು ಪಾಂಗಾಳ ಸೇತುವೆಯ ಬಳಿ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.

ಉಡುಪಿ: ಹಿರಿಯ ನ್ಯಾಯವಾದಿ ಅಲೆವೂರು ಮಾಧವ ಆಚಾರ್ಯ ನಿಧನ

ಉಡುಪಿ: ಹಿರಿಯ ನ್ಯಾಯವಾದಿ ಅಲೆವೂರು ಮಾಧವ ಆಚಾರ್ಯ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.ಉಡುಪಿ ವಕೀಲರ ಸಂಘದ ಹಿರಿಯ ಸದಸ್ಯರಾಗಿದ್ದ ಅವರು, ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಅಗಲಿದ ಹಿರಿಯ ವಕೀಲರಾದ ಮಾಧವ ಆಚಾರ್ಯ ಅವರ ಸಂತಾಪ ಸೂಚಕ ಸಭೆ ಇಂದು (ಜನವರಿ 5ರಂದು) ಬೆಳಿಗ್ಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ವಕೀಲರ ಸಂಘದ ಅಧ್ಯಕ್ಷರಾದ ರೋನಾಲ್ಡ್ ಪ್ರವೀಣ್ ತಿಳಿಸಿದ್ದಾರೆ.

ಪರ್ಕಳ: ಮುಂಜಾನೆ ಮಂಜಿನ ಪರಿಣಾಮ ಟಿಟಿ ವಾಹನಕ್ಕೆ ಕಾರು ಡಿಕ್ಕಿ: ಕಾರು ಚಾಲಕನಿಗೆ ಗಾಯ

ಉಡುಪಿ: ಕಾರೊಂದು ಅಯ್ಯಪ್ಪ ಮಾಲೆಧಾರಿಗಳು ಪ್ರಯಾಣಿಸುತ್ತಿದ್ದ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಪರ್ಕಳದ ಕೆನರಾ ಬ್ಯಾಂಕ್ ಸಮೀಪ ತಿರುವಿನಲ್ಲಿ ಸಂಭವಿಸಿದೆ. ಹಿರಿಯಡಕ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಪರ್ಕಳ ಕೆನರಾ ಬ್ಯಾಂಕ್ ತಿರುವಿನಲ್ಲಿ‌ ನಿಯಂತ್ರಣ ತಪ್ಪಿ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಟಿಟಿ ವಾಹನದಲ್ಲಿ ತೆಲಂಗಾಣ ಮೂಲದ ಅಯ್ಯಪ್ಪ ಮಾಲೆಧಾರಿಗಳು ಪ್ರಯಾಣಿಸುತ್ತಿದ್ದರು. ಅವರು ಉಡುಪಿಯಿಂದ ಧರ್ಮಸ್ಥಳದ ಕಡೆಗೆ ಸಂಚರಿಸುತ್ತಿದ್ದರು ಎನ್ನಲಾಗಿದೆ. ಪರ್ಕಳ ಪರಿಸರದಲ್ಲಿ ಬೆಳಗ್ಗಿನ ಜಾವ ಮಂಜು ಕವಿದ ವಾತಾವರಣವಿದ್ದು, ತಿರುವು ಗೋಚರಿಸದ ಕಾರಣ […]

ರೇಬಿಸ್ ರೋಗವನ್ನು ಅಧಿಸೂಚಿತ ಎಂದು ಘೋಷಿಸಲಿದೆ ದೆಹಲಿ ಸರ್ಕಾರ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರೇಬಿಸ್‌ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅದನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿಯಲ್ಲಿ ‘ಅಧಿಸೂಚಿತ ರೋಗ’ ಎಂದು ಘೋಷಿಸಲು ದೆಹಲಿ ಸರ್ಕಾರ ಸಿದ್ಧತೆ ನಡೆಸಿದೆ.ಈ ಕಾಯಿಲೆಯಿಂದ ಬಳಲುತ್ತಿರುವವರ ಮೇಲ್ವಿಚಾರಣೆಯನ್ನು ಬಲಪಡಿಸಲು ಹಾಗೂ ಸಕಾಲದಲ್ಲಿ ಚಿಕಿತ್ಸೆ ಒದಗಿಸುವುದನ್ನು ಖಾತ್ರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ‘ದೆಹಲಿಯಲ್ಲಿ ರೇಬಿಸ್‌ನಿಂದ ಒಂದೇ ಒಂದು ಸಾವು ಕೂಡ ಸಂಭವಿಸದಂತೆ ಗುರಿ ಸಾಧಿಸುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆ ಇದಾಗಿದೆ’ ಎಂದು ದೆಹಲಿ ಆರೋಗ್ಯ ಸಚಿವ ಪಂಕಜ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ. […]