ಕುಂದಾಪುರ: ಸರ್ಕಾರಿ ಬಸ್- ಟಿಪ್ಪರ್ ಮಧ್ಯೆ ಭೀಕರ ಅಪಘಾತ; ಮೂವರು ವಿದ್ಯಾರ್ಥಿಗಳು ಸಹಿತ ಹಲವರಿಗೆ ಗಂಭೀರ ಗಾಯ

ಉಡುಪಿ: ಸರ್ಕಾರಿ ಬಸ್ ಹಾಗೂ ಟಿಪ್ಪರ್ ನಡುವಿನ ಭೀಕರ ಅಪಘಾತದಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಲ್ಲೂರು-ನೇರಳಕಟ್ಟೆ ಮಾರ್ಗದ ಶೆಟ್ರಕಟ್ಟೆ ತಿರುವಿನಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಕುಂದಾಪುರದಿಂದ ಆಜಿ-ಸಿದ್ದಾಪುರ ಕಡೆಗೆ ಸಾಗುತ್ತಿದ್ದ ಸರ್ಕಾರಿ ಬಸ್ ಗೆ ನೇರಳಕಟ್ಟೆಯಿಂದ ಮಣ್ಣು ತುಂಬಿಸಿಕೊಂಡು ತಲ್ಲೂರಿನತ್ತ ಸಾಗುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಮೂವರು ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿವೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಕಾಪು: ಖಾಸಗಿ ಬಸ್- ಸ್ಕೂಟರ್ ನಡುವೆ ಭೀಕರ ಅಪಘಾತ- ಸವಾರ ಮೃತ್ಯು

ಉಡುಪಿ: ಖಾಸಗಿ ಬಸ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಕಾಪು ಪಾಂಗಾಳ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಸಂಭವಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಪಡುಕೆರೆ ನಿವಾಸಿ ಕೃಷ್ಣ ಎಂದು ಗುರುತಿಸಲಾಗಿದೆ. ಪಾಂಗಾಳ ಸಮೀಪ ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಸ್ಕೂಟರ್ ನಲ್ಲಿ ಆಗಮಿಸುತ್ತಿದ್ದ ಕೃಷ್ಣ ಅವರ ಸ್ಕೂಟರ್ ಗೆ ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ಸು ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸವಾರನನ್ನು […]
ಎನ್ ಡಿ ಎ ತೆಕ್ಕೆಗೆ ಬರುತ್ತೆ ತಮಿಳುನಾಡು, ಪಶ್ಚಿಮ ಬಂಗಾಳ: ಅಮಿತ್ ಶಾ

ಪುದುಕೊಟ್ಟೈ (ತಮಿಳುನಾಡು): ‘ಪ್ರಸಕ್ತ ವರ್ಷ ನಡೆಯಲಿರುವ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಗೆಲುವು ಸಾಧಿಸಲಿದೆ. ಈ ಎರಡೂ ರಾಜ್ಯಗಳು ಎನ್‌ಡಿಎ ತೆಕ್ಕೆಗೆ ಸೇರಲಿವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಮಾತನಾಡಿದ ಅವರು, 2024ರಿಂದ ಬಿಜೆಪಿ–ಎನ್‌ಡಿಎ ಗೆಲುವುಗಳು, ಹರಿಯಾಣದಲ್ಲಿ ಸತತ 3ನೇ ಬಾರಿಯೂ ವಿಜಯ ಸಾಧಿಸಿದ್ದನ್ನು ಪಟ್ಟಿ ಮಾಡಿದ್ದಾರೆ. ಇದೇ ವೇಳೆ ಎನ್‌ಡಿಎ ತೆಕ್ಕೆಗೆ ಸೇರುವ […]
ಕೊಚ್ಚಿ: ಕಾರಿನಲ್ಲೇ ಹೆರಿಗೆ ಮಾಡಿಸಿದರು ವೈದ್ಯರು!

ಕೊಚ್ಚಿ: ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರ ಆವರಣದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿ ತಾನು ಬಂದಿದ್ದ ಕಾರಿನೊಳಗೆ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಅನಿತಾ ಎಂಬ ಮಹಿಳೆ ತನ್ನ ಪತಿ ವಿಜಯ್ ಮತ್ತು ಪೋಷಕರೊಂದಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಕಣ್ಣೂರಿನಿಂದ ಅರೂರ್‌ಗೆ ಪ್ರಯಾಣಿಸಿದ್ದರು. ಜನವರಿ 22 ಕ್ಕೆ ಡಾಕ್ಟರ್ ಹೆರಿಗೆಗೆ ದಿನ ಕೊಟ್ಟಿದ್ದರು. ಆದರೆ ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಗ ಅವರನ್ನು ಆರಂಭದಲ್ಲಿ ಹತ್ತಿರದ ಅರೂರ್‌ನಲ್ಲಿರುವ […]
ಐಆರ್ಸಿಟಿಸಿಯಿಂದ ₹ 95 ಸಾವಿರದಲ್ಲಿ ದುಬೈ ಪ್ರವಾಸ ಯೋಜನೆ

ಜೈಪುರ: ಭಾರತೀಯ ರೈಲ್ವೆ ಸಚಿವಾಲಯದ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್(ಐಆರ್‌ಸಿಟಿಸಿ) ಇದೇ ತಿಂಗಳಲ್ಲಿ ದುಬೈ ಪ್ರವಾಸದ ವಿಶೇಷ ಪ್ಯಾಕೇಜ್ ಆಯೋಜಿಸುತ್ತಿದೆ.ಈ ಪ್ರವಾಸ ಪ್ಯಾಕೇಜ್‌ಗೆ ಗಣರಾಜ್ಯೋತ್ಸವವೂ ಜೊತೆಯಾಗುತ್ತಿದೆ. ಬುಕ್ಕಿಂಗ್ ಆರಂಭವಾಗಿದ್ದು, ಜನವರಿ 6ರವರೆಗೂ ತೆರೆದಿರುತ್ತದೆ. ನಾಲ್ಕು ರಾತ್ರಿ, ಐದು ದಿನಗಳ ಪ್ರವಾಸದ ಪ್ಯಾಕೇಜ್ ದರ ಪ್ರತಿ ವ್ಯಕ್ತಿಗೆ ₹94,730. ಬೆಂಗಳೂರು, ಜೈಪುರ, ದೆಹಲಿ, ಮುಂಬೈ, ಅಹಮದಾಬಾದ್ ಮತ್ತು ಕೊಚ್ಚಿ ನಗರಗಳ ಪ್ರವಾಸಿಗರು ದುಬೈ ಪ್ರವಾಸಕ್ಕೆ ಹೋಗಬಹುದು. ನಾಲ್ಕಾರು ಪ್ರವಾಸಿಗರು ಒಟ್ಟಾಗಿ, ಗುಂಪು ರಚಿಸಿಕೊಂಡು ಪ್ರವಾಸ ಮಾಡಲು […]