ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆಯ ಅದಿತ್ರಿಯ ಸಿಂಧು ಪ್ರಥಮ.

ಕಾರ್ಕಳ: ಹೆಬ್ರಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಡಿ.27ರಂದು ಶಿಕ್ಷಣ ಇಲಾಖೆ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಯಲ್ಲಿ ಇಂಗ್ಲಿಷ್ ಕಂಠ ಪಾಠ ವಿಭಾಗ ದಲ್ಲಿ ವರ್ಧಮಾನ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅದಿತ್ರಿಯ ಸಿಂಧು ಪ್ರಥಮ ಸ್ಥಾನ ಪಡೆದಿರುತಾರೆ. ಇವರು ಸಾಣೂರಿನ ಶ್ರೀಮತಿ ಸುರೇಖಾ ಮತ್ತು ದಿನೇಶ್ ರವರ ಪುತ್ರಿಯಾಗಿದ್ದಾರೆ.

ಉಡುಪಿ: ಉದ್ಯೋಗಾವಕಾಶ

ಉಡುಪಿ: ಆತ್ರಾಡಿಯಲ್ಲಿರುವ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಶಾಪ್’ಗೆ ಯುವತಿ/ಮಹಿಳೆಯರು ಬೇಕಾಗಿದ್ದಾರೆ. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ಸಂಪರ್ಕಿಸಿ: +91 9019638466

ಕಾರ್ಕಳ ಎಎಸ್ ಪಿ ಹರ್ಷ ಪ್ರಿಯಂವದ ಅವರು ಬೆಂಗಳೂರಿನ ಸಿಐಡಿ ವಿಭಾಗದ ಎಸ್ಪಿಯಾಗಿ ನೇಮಕ.

ಕಾರ್ಕಳ: ಕಾರ್ಕಳ ಉಪವಿಭಾಗದ ಎಎಸ್ಪಿ ಹರ್ಷ ಪ್ರಿಯಂವದ ಅವರಿಗೆ ಪೊಲೀಸ್ ಅಧೀಕ್ಷಕಿಯಾಗಿ (ಎಸ್ಪಿ) ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇವರನ್ನು ಬೆಂಗಳೂರಿನ ಸಿಐಡಿ ವಿಭಾಗದ ಎಸ್ಪಿಯಾಗಿ ನೇಮಿಸಲಾಗಿದೆ. 2020ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಇವರು ಎಂಬಿಬಿಎಸ್ ಪದವೀಧರೆ. 2025ರ ಫೆಬ್ರವರಿಯಲ್ಲಿ ಕಾರ್ಕಳ ಎಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಇವರು ಅಕ್ರಮ‌ ಕಲ್ಲು ಗಣಿಗಾರಿಕೆ, ಅಕ್ರಮ ಮರಳು ಸಾಗಾಟ ದಂದೆಗೆ ಬಿಸಿ ಮುಟ್ಟಿಸಿದ್ದರು‌. ಇದೀಗ ಪದೋನ್ನತಿ ಪಡೆದಿರುವ ಇವರು ರಾಜ್ಯದ ಪ್ರಮುಖ ತನಿಖಾ ಸಂಸ್ಥೆಯಾದ ಸಿಐಡಿಯಲ್ಲಿ ಮಹತ್ವದ ಜವಾಬ್ದಾರಿ […]

ಮೂಡುಬಿದಿರೆ: ಕಾರಿ ಡಿಕ್ಕಿ – 7ನೇ ತರಗತಿ ವಿದ್ಯಾರ್ಥಿ ಮೃತ್ಯು.

ಮೂಡುಬಿದಿರೆ : ಚಾಲಕನ ಅಜಾಗರೂಕತೆಯಿಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಬಾಲಕ ಮೃತಪಟ್ಟಿರುವ ಘಟನೆ ಮಾರೂರು ಹೊಸಂಗಡಿ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ. ಹೊಸಂಗಡಿಯ ನಝೀರ್ ಎಂಬವರ ಪುತ್ರ ಝಾಹಿರ್ (13) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಝಾಹಿರ್ ಸ್ಥಳೀಯ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಇಂದು ಮಧ್ಯಾಹ್ನ ತಾಯಿಯೊಂದಿಗೆ ಅಂಗಡಿಗೆಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ […]

ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಮದರ್ ತೆರೇಸಾ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ ರಾಜ್ಯಮಟ್ಟಕ್ಕೆ ಆಯ್ಕೆ.

ಕುಂದಾಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕಾರ್ಕಳ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ ಇವರ ಆಶ್ರಯದಲ್ಲಿ ಇಂದು ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳ ಆಶುಭಾಷಣ ಹಾಗೂ ಚರ್ಚಾ ಸ್ಪರ್ಧೆಯಲ್ಲಿ, ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಶಂಕರನಾರಾಯಣ ಇಲ್ಲಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿನಿ ಪ್ರತೀಕ್ಷಾ ಇವರು ಆಶುಭಾಷಣ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ […]