ಶಿರ್ವ: ದ್ವಿಚಕ್ರ ವಾಹನ ಕಳವು: ಆರೋಪಿಯ ಬಂಧನ

ಉಡುಪಿ: ಶಿರ್ವ ಸಹಿತ ಕಾಪು, ಬೆಂಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಐದು ದ್ವಿಚಕ್ರ ವಾಹನಗಳನ್ನು ಕದ್ದ ಆರೋಪಿಯನ್ನು ಶಿರ್ವ ಪೋಲಿಸರು ಬಂಧಿಸಿದ್ದಾರೆ. ಡಿ.5ರಂದು ಬಂಟಕಲು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಪಾರ್ಕಿಂಗ್ ಮಾಡಿದ್ದ ವಾಹನ ಕಳವಾದ ಬಗ್ಗೆ ಮಹಿಳೆಯೋರ್ವರು ನೀಡಿದ ದೂರಿನಂತೆ ಶಿರ್ವ ಪೋಲಿಸರು ತನಿಖೆ ಆರಂಭಿಸಿದ್ದರು.ಶಿರ್ವ ಪೊಲೀಸರಿಂದ ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಉಡುಪಿ, ಮಲ್ಪೆ ಕಾರ್ಕಳ, ಧರ್ಮಸ್ಥಳ ಕಡೆಗಳಲ್ಲಿ ಸಂಚರಿಸಿ ಆರೋಪಿ ಓಂ ಕೋಲಾರ ಎಂಬಾತನನ್ನು ಬಂಧಿಸಿದೆ. ಬಂಧಿತ ಆರೋಪಿಯಿಂದ ಶಿರ್ವ […]
ಹೆಜಮಾಡಿ: ಮನೆಗೆ ನುಗ್ಗಿದ ಗೂಡ್ಸ್ ಟೆಂಪೋ; ಮನೆಯಲ್ಲಿದ್ದವರು ಪಾರು

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಟೆಂಪೋವೊಂದು ಮನೆಗೆ ಡಿಕ್ಕಿ ಹೊಡೆದ ಘಟನೆ ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬಳಿ ರಾ.ಹೆ. 66ರಲ್ಲಿ ಸಂಭವಿಸಿದೆ. ಪಡುಬಿದ್ರಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಗೂಡ್ಸ್ ಟೆಂಪೋ, ಹೆಜಮಾಡಿಯಲ್ಲಿ ನಿಯಂತ್ರಣ ತಪ್ಪಿ ಇಸ್ಮಾಯಿಲ್ ಮಂಜತೋಟ ಎಂಬವರ ಮನೆಗೆ ಗುದ್ದಿದೆ. ಈ ಸಂದರ್ಭ ಮನೆಯವರು ಮತ್ತು ಗೂಡ್ಸ್ ಚಾಲಕ, ಸಣ್ಣ ಪುಟ್ಟ ಗಾಯಗೊಂದಿಗೆ ಪಾರಾಗಿದ್ದಾರೆ.ಘಟನಾ ಸ್ಥಳಕ್ಕೆ ಹೆಜಮಾಡಿ ಟೋಲ್ ಸಿಬ್ಬಂದಿ ಮತ್ತು ಪಡುಬಿದ್ರಿ ಪೋಲೀಸರು ಸ್ಥಳೀಯರ ಸಹಕಾರದಲ್ಲಿ ಗೂಡ್ಸ್ ವಾಹನವನ್ನು […]
ಉಡುಪಿ: ಶಾಸಕ ಯಶ್‌ಪಾಲ್ ಸುವರ್ಣರ ವಾಟ್ಸಾಪ್ ಹ್ಯಾಕ್

ಉಡುಪಿ: ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರ ವಾಟ್ಸಾಪ್ ಹ್ಯಾಕ್ ಆಗಿರುವ ಬಗ್ಗೆ ವರದಿಯಾಗಿದೆ. ಹಲವು ವ್ಯಕ್ತಿಗಳಿಗೆ ಈ ಸಂಖ್ಯೆಯಿಂದ ಗೂಗಲ್ ಪೇ ಮೂಲಕ ಹಣ ನೀಡುವಂತೆ ಸಂದೇಶಗಳು ಬರುತ್ತಿದೆ ಎನ್ನಲಾಗಿದೆ. ‘ನನ್ನ ವಾಟ್ಸಾಪ್ ಹ್ಯಾಕ್ ಆಗಿದ್ದು, ಯಾರು ಕೂಡ ಹಣ ನೀಡಬಾರದು ಎಂದು ಶಾಸಕ ಯಶ್‌ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ಉಡುಪಿ:ಕೈಗಾರಿಕಾ ಚಟುವಟಿಕೆ ಆರಂಭಿಸದಿದ್ದಲ್ಲಿ ನಿವೇಶನಗಳನ್ನು ಮರು ಹಂಚಿಕೆ ಮಾಡಲು ಕ್ರಮ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಜಿಲ್ಲೆಯಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗೆ ಹಂಚಿಕೆಯಾಗಿರುವ ನಿವೇಶನದಲ್ಲಿ ಉದ್ದಿಮೆದಾರರು ನಿಯಮಾನುಸಾರ ಆರು ತಿಂಗಳ ಒಳಗಾಗಿ ಕೈಗಾರಿಕಾ ಚಟುವಟಿಕೆ ಆರಂಭಿಸಬೇಕು. ತಪ್ಪಿದ್ದಲ್ಲಿ ನಿವೇಶನಗಳನ್ನು ಮರು ಹಂಚಿಕೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ,ಕೈಗಾರಿಕಾ ಸ್ಪಂದನ, ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿ ಸಭೆ, ಪ್ರಧಾನಮಂತ್ರಿಯವರ ಉದ್ಯೋಗ ಸೃಜನ ಯೋಜನೆಯ ಡಿ.ಎಲ್.ಎಂ.ಸಿ ಸಭೆ ಹಾಗೂ ಪಿ.ಎಂ ವಿಶ್ವಕರ್ಮ […]
ಉಡುಪಿ:ಅಂಚೆ ಮೂಲಕ ಕನ್ನಡ ಶಿಕ್ಷಣ ತರಬೇತಿ: ಅರ್ಜಿ ಆಹ್ವಾನ

ಉಡುಪಿ: ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಮೈಸೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಕನ್ನಡ ಬಾರದ ಸರ್ಕಾರಿ ನೌಕರರಿಗೆ ಹನ್ನೆರಡು ತಿಂಗಳುಗಳ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯನ್ನು ನಡೆಸುತ್ತಿದ್ದು, ರಾಜ್ಯದಲ್ಲಿರುವ ನಗರಸಭೆ,ಕ.ವಿ.ಪ್ರ.ನಿ.ನಿ, ಕೆ.ಎಸ್.ಆರ್.ಟಿ.ಸಿ, ವಿಶ್ವವಿದ್ಯಾಲಯಗಳು, ಶಾಲಾ-ಕಾಲೇಜುಗಳು ಮತ್ತಿತರ ಸರ್ಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು ಮತ್ತು ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ಸಹ ನೋಂದಾಯಿಸಿಕೊಳ್ಳಬಹುದಾಗಿದ್ದು, ಉತ್ತೀರ್ಣರಾದವರಿಗೆ ಕರ್ನಾಟಕಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು. ಈ ಯೋಜನೆಯನ್ನು ಸಾರ್ವಜನಿಕರಿಗೂ ಸಹ ವಿಸ್ತರಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ […]