ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ: ಭಕ್ತರಿಂದ ದಾಖಲೆಯ ಕಾಣಿಕೆ ಹಣ ಸಂಗ್ರಹ.

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಹುಂಡಿಯಲ್ಲಿ ನ. 23ರಿಂದ ಡಿ. 29ರ ವರೆಗೆ ಭಕ್ತರಿಂದ 1,64,45,384 ರೂ. ಕಾಣಿಕೆ ಹಣ ಸಂಗ್ರಹವಾಗಿದೆ. ಇದು ಕೇವಲ 1 ತಿಂಗಳೊಳಗೆ ದಾಖಲೆಯ ಮೊತ್ತ ಸಂಗ್ರಹವಾಗಿದೆ. ಇದರಲ್ಲಿ 695 ಗ್ರಾಂ. ಚಿನ್ನ, 2.985 ಗ್ರಾಂ. ಬೆಳ್ಳಿ ಸೇರಿದೆ. ಕಳೆದ ವರ್ಷ 95,73,836 ರೂ. ಕಾಣಿಕೆ ರೂಪದಲ್ಲಿ ಸಂಗ್ರಹವಾಗಿತ್ತು.
ಉಡುಪಿ: ಜೀವನ್ಮರಣ ಸ್ಥಿತಿಯಲ್ಲಿ ನರಳಾಡುತ್ತಿರುವ ಯುವಕ; ಅಣಕು ಪ್ರದರ್ಶನದ ಮೂಲಕ ಜನಜಾಗೃತಿ

ಉಡುಪಿ: ಇಂದಿನ ಯುವಜನಾಂಗ ಮಾದಕಲೋಕಕ್ಕೆ ಆಕರ್ಷಿತರಾಗಿ ತಮ್ಮ ಭವಿಷ್ಯವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಮಾದಕ ದ್ರವ್ಯ, ಕುಡಿತದ ಚಟಕ್ಕೆ ದಾಸರಾಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಯುವಕರು ಡ್ರಗ್ಸ್, ಮದ್ಯ ಸೇವಿಸಿ ವಾಹನಗಳನ್ನು ಚಲಾಯಿಸುತ್ತಿರುವ ಪರಿಣಾಮ ಅಪಘಾತಗಳ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಉಡುಪಿಯ ಶಿರ್ವ ಸುಭಾಷ್ ನಗರದ ಸ್ಮಾರ್ಟ್ ಆರ್ಟ್ ಕಲಾವಿದರು ಹೊಸವರ್ಷಕ್ಕೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯ ಬೆಡ್ ನಲ್ಲಿ ಜೀವನ್ಮರಣದ ಹೋರಾಟದಲ್ಲಿ ನರಳಾಡುತ್ತಿರುವ ಯುವಕನ ಅಣಕು ಪ್ರದರ್ಶನದ ಮೂಲಕ […]
ಶ್ರೀ ನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಪ್ರೌಢ ಶಾಲೆ ಮಟಪಾಡಿ ವಾರ್ಷಿಕೋತ್ಸವ

ಬ್ರಹ್ಮಾವರ: ಶ್ರೀ ನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಪ್ರೌಢ ಶಾಲೆ ಮಟಪಾಡಿ ಇವುಗಳ ಜಂಟಿ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರುಗಿತು. ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕ್ ಇದರ ನಿವೃತ್ತ ಮ್ಯಾನೇಜರ್ ಗೋಪಾಲ ಗಾಣಿಗ ಮಟಪಾಡಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ಬಿಎಸ್ ಎನ್ ಎಲ್ ಇದರ ನಿವೃತ್ತ ಮಹಾಪ್ರಭಂಧಕರಾದ ಚಂದ್ರಶೇಖರ ಕಲ್ಕೂರ ಮಟಪಾಡಿ ಇವರಿಗೆ ಶಾಲೆಯ ಪರವಾಗಿ ಗೌರವಾರ್ಪಣೆ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾ ಪಿ, ಜನನಿ ಎಂಟರ್ ಪ್ರೈಸಸ್ ಇದರ ಆಳಿತ […]
ಹೊಸ ವರ್ಷಾಚರಣೆ: ಉಡುಪಿ ಜಿಲ್ಲೆಯಾದ್ಯಂತ ಹೆಚ್ಚುವರಿ ಪೊಲೀಸ್, ಪೆಟ್ರೋಲಿಂಗ್, ಡ್ರೋನ್ ನಿಗಾ

ಉಡುಪಿ: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಹೆಚ್ಚುವರಿ ಪೊಲೀಸ್ ಬಲ, ಪೆಟ್ರೋಲಿಂಗ್ ಹಾಗೂ ನಿಗಾ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿದೆ. ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ಹೊಸವರ್ಷವನ್ನು ಆಚರಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಹೊಸ ವರ್ಷ ಆಚರಣೆಯ ಪೊಲೀಸ್ ಬಂದೋಬಸ್ತ್ ಕುರಿತು ಮಾಹಿತಿ ನೀಡಿದ ಅವರು ಹೊಸ ವರ್ಷದ ದಿನದಂದು […]
ನಟ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆ ಡೇಟ್ ಫಿಕ್ಸ್!

ದಕ್ಷಿಣ ಭಾರತದ ಸಿನಿರಂಗದಲ್ಲಿ ಬಹಳ ದಿನಗಳಿಂದ ಕೇಳಿಬರುತ್ತಿದ್ದ ಒಂದು ದೊಡ್ಡ ಗಾಸಿಪ್ ಇದೀಗ ಬ್ರೇಕಿಂಗ್ ನ್ಯೂಸ್ ಆಗಿ ಹೊರಬಿದ್ದಿದೆ. ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವಿಜಯ್–ರಶ್ಮಿಕಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ. ರಾಜಸ್ಥಾನದ ಐತಿಹಾಸಿಕ ಅರಮನೆಯಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಶೈಲಿಯಲ್ಲಿ ಈ ಮದುವೆ ನಡೆಯಲಿದೆ ಎಂಬ ಮಾಹಿತಿ ವೈರಲ್ […]