ಹೊಸ ವರ್ಷ 2026 ಸಂಭ್ರಮಾಚರಣೆ; ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ!

ಚಿಕ್ಕಮಗಳೂರು : ಹೊಸ ವರ್ಷದ ಆಚರಣೆಗೆ ಜಿಲ್ಲಾಡಳಿತ ಹೈ ಅಲರ್ಟ್ ಆಗಿದ್ದು, ಅಹಿತಕರ ಘಟನೆಗಳ ನಿಯಂತ್ರಣದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶಿಸಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರ, ಝರಿ ಫಾಲ್ಸ್ ಹೊನ್ನಮ್ಮನಹಳ್ಳ ಗಾಳಿಕೆರೆ, ಹಿರೇಕೊಳಲೆ, ಕೆಮ್ಮಣ್ಣುಗುಂಡಿ, ಎತ್ತಿನಭುಜ, ದೇವರಮನೆ, ಡೈಮಂಡ್ ಫಾಲ್ಸ್ ರಾಣಿಝರಿ, ಬಲ್ಲಾಳರಾಯನದುರ್ಗ, ಬಂಡಾಜೆ ಫಾಲ್ಸ್, ಕೂಡಿಗೆ ಫಾಲ್ಸ್ ಕ್ಯಾತನಮಕ್ಕಿ, ರುದ್ರಪಾದ ತೂಗುಸೇತುವೆ, ಅಬ್ಬುಗುಡಿಗೆ ಫಾಲ್ಸ್ ಅಯ್ಯನಕೆರೆ, ಮದಗದ ಕೆರೆ, ಕಲ್ಲತ್ತಿಗಿರಿ, ಹೆಬ್ಬೆ ಫಾಲ್ಸ್ ಪ್ರವಾಸಿ ತಾಣಗಳಿಗೆ ಪ್ರವಾಸಿಗರ […]
ಉಡುಪಿ: 15ನೇ ದಿನಕ್ಕೆ ಕಾಲಿಟ್ಟ ಕೊರಗ ಸಮುದಾಯದ ಅಹೋರಾತ್ರಿ ಧರಣಿ

ಉಡುಪಿ: ಕೊರಗ ಸಮುದಾಯದ ಯುವಜನರಿಗೆ ಸರಕಾರಿ ಉದ್ಯೋಗ ನೇರನೇಮಕಾತಿಗೆ ಒತ್ತಾಯಿಸಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಇದರ ವತಿಯಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು 15 ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಕೊರಗ ಸಮುದಾಯದವರು ಸೋಮವಾರ ಕೈಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ಒಕ್ಕೂಟದ ಸಂಯೋಜಕ ಪುತ್ರನ್ ಹೆಬ್ರಿ ಮಾತನಾಡಿ, ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಜಿಲ್ಲಾಧಿಕಾರಿಗಳು ಈವರೆಗೂ ನಮ್ಮ ಸಮಸ್ಯೆ […]
ಕುಂದಾಪುರ: ವಾರಾಹಿ, ಸಿಆರ್‌ಝೆಡ್ ಸಮಸ್ಯೆ ಅರಿಯಲು ಡಿಸಿಎಂಗೆ ಆಹ್ವಾನ – ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ

ಕುಂದಾಪುರ: ಕರಾವಳಿಯ ಪ್ರತ್ಯೇಕ ನೀತಿ ಬಗ್ಗೆ ಬೆಂಗಳೂರಿನಲ್ಲಿ ಕುಳಿತು ತೀರ್ಮಾನಿಸಲಾಗುವುದಿಲ್ಲ. ವಾರಾಹಿ ವಿಚಾರ ವಿಧಾನ ಪರಿಷತ್ ನಲ್ಲಿ ಸ್ಪಷ್ಟವಾಗಿ 3-4 ಬಾರಿ ಉಪಮುಖ್ಯಮಂತ್ರಿಗಳ ಬಳಿ ಧ್ವನಿಯೆತ್ತಿದ್ದು ಕರಾವಳಿ ವಿಚಾರದಲ್ಲಿ ವಾಸ್ತವ ಸ್ಥಿತಿ ತಿಳಿಯಲು ಇಲ್ಲಿಯೇ ಬಂದು ಸಭೆ ನಡೆಸುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ. ವಾರಾಹಿ, ಸಿಆರ್‌ಝಡ್ ಸಹಿತ ಹಲವು ವಾಸ್ತವ ಸಮಸ್ಯೆಗಳನ್ನು ಅರಿಯಲು ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಡಿಸಿಎಂ ಅವರನ್ನು ಕರಾವಳಿಗೆ ಬರಮಾಡಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ. ಬೈಂದೂರು ವಿಧಾನಸಭಾ […]
ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್!

ಕುಮಟಾ-ಶಿರಸಿ, ರಾಷ್ಟ್ರೀಯ ಹೆದ್ದಾರಿ-766 ಇ ರಸ್ತೆಯಲ್ಲಿ ನಿಷೇಧಿಸಲಾದ ಬಸ್ ಸಂಚಾರವನ್ನು, ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ, ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಹಾಗೂ ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾರವಾರ ರವರ ವರದಿ ಆಧಾರದ ಮೇಲೆ ಸದರಿ ರಸ್ತೆಯಲ್ಲಿ 1-1-2026 ರಿಂದ ಬಸ್ ಸಂಚಾರಕ್ಕೆ ಅನುವು ಮಾಡಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ. ಸಂಚಾರ ಸಂದರ್ಭದಲ್ಲಿ ಬಸ್ ಹೊರತುಪಡಿಸಿ ಬೇರೆ ಭಾರಿ ವಾಹನಗಳು ಸದರಿ ರಸ್ತೆಯಲ್ಲಿ ಸಂಚರಿಸತಕ್ಕದ್ದಲ್ಲ. ಮತ್ತು ಕಾಮಗಾರಿ ಪ್ರಗತಿಯಲ್ಲಿರುವ ಪ್ರದೇಶದಲ್ಲಿ ವೇಗದ […]
ರಾಜ್ ಬಿ ಶೆಟ್ಟಿ ಅಭಿನಯದ “ರಕ್ಕಸಪುರದೋಳ್” ಟೀಸರ್ ಬಿಡುಗಡೆ; ಫೆಬ್ರವರಿ 6ಕ್ಕೆ ಸಿನಿಮಾ ರಿಲೀಸ್!

ನಟ ರಾಜ್ ಬಿ. ಶೆಟ್ಟಿ ಅವರು ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ. 2025ರಲ್ಲಿ ಅವರು ‘ಸು ಫ್ರಮ್ ಸೋ’ ಸಿನಿಮಾದಿಂದ ಭರ್ಜರಿ ಗೆಲವು ಕಂಡರು. ಅವರ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ’45’ ಸಿನಿಮಾದಲ್ಲಿ ಕೂಡ ರಾಜ್ ಬಿ. ಶೆಟ್ಟಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಈಗ ಅವರ ಹೊಸ ಸಿನಿಮಾ ‘ರಕ್ಕಸಪುರದೋಳ್ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜ್ ಬಿ. ಶೆಟ್ಟಿ ಅವರ ಪಾತ್ರದ ಝಲಕ್ ನೋಡಿ ಅಭಿಮಾನಿಗಳಿಗೆ ಸಿನಿಮಾ […]