ಈ ವರ್ಷ ಮನೆಯಲ್ಲೇ ಕೂತು ಜನರು ಚಪ್ಪರಿಸಿದ ಖಾದ್ಯಗಳಿವು , 3.25 ಮಿಲಿಯನ್ ಬಿರಿಯಾನಿ ಆರ್ಡರ್, ಬರ್ಗರ್ ಗೂ ಡಿಮ್ಯಾಂಡಪ್ಪೋ ಡಿಮ್ಯಾಂಡ್

2025 ಮುಗಿಯುತ್ತ ಬಂದಿದೆ. ಈ ವರ್ಷದಲ್ಲಿ ತಿಂಡಿ ತಿನಿಸುಗಳಿಗೆ ಬೇಡಿಕೆ ಹೆಚ್ಚಿದೆ. ಈ ವರ್ಷದ ಮನೆಗೆ ಡೆಲಿವರಿ ಮಾಡಿಕೊಂಡು ತರಿಸಿದ ತಿಂಡಿಗಳ ಪೈಕಿ ಬಿರಿಯಾನಿಯೇ ಫಸ್ಟ್ ಪ್ಲೇಸ್ ಪಡೆದುಕೊಂಡಿದೆ. ಹೌದು. ದೇಶದ ಪ್ರಮುಖ ಆಹಾರ ಡೆಲಿವರಿ ಸಂಸ್ಥೆ ಸ್ವಿಗ್ಗಿ ದಶಕದಿಂದಲೂ ತನ್ನ ಪ್ರಾಬಲ್ಯವನ್ನು ಮುಂದುವರೆಸಿದ್ದು, 2025 ರಲ್ಲಿ 93 ಮಿಲಿಯನ್ ಯೂನಿಟ್ ಬಿರಿಯಾನಿ ಆರ್ಡರ್‌ಗಳೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇದರೊಂದಿಗೆ ಸತತ 10ನೇ ವರ್ಷವೂ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಾಗಿ ಬಿರಿಯಾನಿ ಪ್ರಥಮ ಸ್ಥಾನ […]
ನಿಲ್ಲಿಸಿದ್ದ ಕಾರಿನೊಳಗೆ ಟ್ಯಾಕ್ಸಿ ಚಾಲಕ ಉಸಿರುಗಟ್ಟಿ ಮೃತ್ಯು; ಅಷ್ಟಕ್ಕೂ ಆದದ್ದೇನು?

ಉತ್ತರಾಖಂಡ, ಡಿಸೆಂಬರ್ 30: ಉತ್ತರಾಖಂಡದ ನೈನಿತಾಲ್ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಟ್ಯಾಕ್ಸಿ ಚಾಲಕನೊಬ್ಬ ನಿಲ್ಲಿಸಿದ್ದ ಕಾರಿನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ವಾಹನದೊಳಗೆ ಬೆಚ್ಚಗಿರಲು ಆ ವ್ಯಕ್ತಿ ಸಣ್ಣ ಬೆಂಕಿ ಹಾಗೂ ಹೊಗೆ ಬರುವ ಸಾಧನವನ್ನು ಕಾರಿನೊಳಗೆ ಇಟ್ಟು ಮಲಗಿದ್ದರು. ವಿಷಕಾರಿ ಅನಿಲವನ್ನು ಉಸಿರಾಡಿ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಟ್ಯಾಕ್ಸಿ ಚಾಲಕ ಪತ್ತೆಯಾಗಿದ್ದಾರೆ. ಕಾರ್ಬನ್ ಮಾನಾಕ್ಸೈಡ್ ಹೊಗೆಯಿಂದ ಉಂಟಾಗುವ ಮಾರಕ ಅಪಾಯದ ಅರಿವಿಲ್ಲದೆ ಚಾಲಕ ಮುಚ್ಚಿದ ಕಾರಿನೊಳಗೆ ಬ್ರೇಜಿಯರ್ ಉರಿಸಿದ್ದರು ಎನ್ನಲಾಗಿದೆ. […]
ವಿಶ್ವ ಮಟ್ಟದ ಚೆಸ್ ಚಾಂಪಿಯನ್ ಪಂದ್ಯದಲ್ಲಿ ಡಾ.ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಸಾಧನೆ

ಉಡುಪಿ: ಬಿಹಾರದಲ್ಲಿ ಮಾರ್ಚ್ 25ರಿಂದ 29 ಮಾರ್ಚ್ ವರೆಗೆ ನಡೆದ ರಾಷ್ಟ್ರೀಯ ಮಟ್ಟದ ಮಹಿಳಾ ಅಮೆಚೂರ್ ಚದುರಂಗ ಸ್ಪರ್ಧೆಯಲ್ಲಿ ಡಾ.ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಅವರು ದ್ವಿತೀಯ ಸ್ಥಾನ ಪಡೆದು, ವಿಶ್ವ ಮಟ್ಟದ ಮಹಿಳಾ ಅಮೆಚೂರ್ ಚದುರಂಗ ಸ್ಪರ್ಧೆಗೆ ಆಯ್ಕೆಯಾಗಿ, ನವೆಂಬರ್ 4ನೇ ತಾರೀಕು ರಿಂದ 14ನೇ ತಾರೀಖಿನ ವರೆಗೆ ಸರ್ಬಿಯಾದ ವೃನ್ಜಾಕ್ ಬಂಝ ದಲಿ ನಡೆದ ವಿಶ್ವ ಮಹಿಳಾ ಅಮೆಚೂರ್ ಚೆಸ್ ಚಾಂಪಿಯನ್ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ 1700 ರ ಒಳಗಿನ FIDE […]
ಮೂಡ್ಲಕಟ್ಟೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಪೋಷಕರ ಸಭೆ.

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂಬಿಎ ಭಾಗದ ವತಿಯಿಂದ ದಿನಾಂಕ 27 ಡಿಸೆಂಬರ್ 2025 ರಂದು ಅಂತಿಮ ವರ್ಷದ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಈ ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಶಿಸ್ತು ಹಾಜರಾತಿ ಭವಿಷ್ಯದ ವೃತ್ತಿ ಅವಕಾಶಗಳ ಕುರಿತು ಚರ್ಚಿಸಲಾಯಿತು. ಎಂಬಿಎ ಮುಖ್ಯಸ್ಥೆ ಡಾ. ಸುಚಿತ್ರಾ ಪೂಜಾರಿ ಕಾಲೇಜಿನ ಬಗ್ಗೆ ಸಂಕ್ಷಿಪ್ತವಾಗಿ ಪರಿಚಯವನ್ನು ನೀಡಿದರು. ತರಗತಿ ಉಪನ್ಯಾಸಕರಾದ ಶ್ರೀಮತಿ ಶ್ರೀಮತಿ ತಿಲಕಲಕ್ಷ್ಮೀ ಇವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಕುರಿತು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ […]
ಕೃತಕ ಬುದ್ಧಿಮತ್ತೆ(AI)ಯಿಂದ ಉದ್ಯೋಗಗಳು ಅಪಾಯ; ಹೊಸ ವರ್ಷ 2026ಕ್ಕೆ ಮತ್ತಷ್ಟು ಉದ್ಯೋಗ ಕಡಿತ ಸಾಧ್ಯತೆ!

AI ಎಷ್ಟು ಮುಂದುವರಿಯುತ್ತಿದೆ ಎಂದರೆ 2026ರ ವೇಳೆಗೆ ಅನೇಕ ಉದ್ಯೋಗಗಳು ಅಪಾಯದಲ್ಲಿವೆ ಎಂದು AIನ ಗಾಡ್‌ಫಾದರ್ ಎಂದೇ ಪರಿಗಣಿಸಲ್ಪಟ್ಟ ಜೆಫ್ರಿ ಹಿಂಟನ್ ಎಚ್ಚರಿಕೆ ನೀಡಿದ್ದಾರೆ. ಕೃತಕ ಬುದ್ಧಿಮತ್ತೆ (AI) ಯಿಂದ ಉದ್ಯೋಗ ನಷ್ಟವಾಗುವ ಭಯ ಹೊಸದಲ್ಲ. ಆದರೂ, ಎಐನಿಂದ ಕೆಲಸ ಕೆಳೆದುಕೊಳ್ಳುವ ಬೆದರಿಕೆ ಹೊಸ ವರ್ಷಕ್ಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. AIಯಲ್ಲಿನ ಸುಧಾರಣೆಯ ವೇಗ, ವಿಶೇಷವಾಗಿ ತಾರ್ಕಿಕತೆ ಮತ್ತು ಕಾರ್ಯ ಪೂರ್ಣಗೊಳಿಸುವಿಕೆಯ ವಿಷಯದಲ್ಲಿ ನಿರೀಕ್ಷೆಗಳನ್ನೂ ಮೀರಿದೆ. 2025 ರಲ್ಲಿ ಒಂದು ಪ್ರಮುಖ ತಿರುವು ಸಂಭವಿಸಿತು. ಮತ್ತು […]