ಕಾರ್ಕಳ ಕ್ರೈಸ್ಟ್ಕಿಂಗ್: ಪ್ರತಿಭಾ ಕಾರಂಜಿಯ ಭಾವಗೀತೆ ಸ್ಪರ್ಧೆಯಲ್ಲಿ 9ನೇ ತರಗತಿಯ ಅಕ್ಷರ್ ಕುಮಾರ್ ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಉಪನಿರ್ದೇಶಕರ ಕಛೇರಿ ಉಡುಪಿ ಇವರ ಜಂಟಿ ಸಹಯೋಗದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು, ಹೆಬ್ರಿ ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ಕಾರ್ಕಳದ ಕ್ರೈಸ್ಟ್ಕಿಂಗ್ ಆಂಗ್ಲಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಅಕ್ಷರ್ ಕುಮಾರ್ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಮಣಿಪಾಲ: ಮಂಚಿಕೆರೆಯ ನಾಗಸನ್ನಿಧಾನದ ಕೆರೆಗೆ ಬಿದ್ದ ಹೋರಿಯನ್ನು ಮೇಲೆತ್ತಿ ಪ್ರಾಣ ಉಳಿಸಿದ ಸ್ಥಳೀಯ ಯುವಕರು!

ಉಡುಪಿ: ಮಣಿಪಾಲ ಮಂಚಿಕೆರೆಯ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದ ಕೆರೆಗೆ ಆಯತಪ್ಪಿ ಬಿದ್ದ ಹೋರಿವೊಂದನ್ನು ಸ್ಥಳೀಯ ಯುವಕರು ಹಗ್ಗದ ಸಹಾಯದಿಂದ ಮೇಲೆತ್ತಿ ಪ್ರಾಣ ಉಳಿಸುವ ಮೂಲಕ ಮಾನವೀಯತೆಯ ಮೆರೆದಿದ್ದಾರೆ. ಕೆರೆಯ ಬದಿಯಲ್ಲಿ ಮೇಯುತ್ತಿದ್ದ ಹೋರಿ ಆಯತಪ್ಪಿ ಕೆರೆಯ ನೀರಿಗೆ ಬಿದ್ದಿದೆ. ಹೋರಿ ಕೆರೆಯಲ್ಲಿ ಹೂತುಹೋಗಿ ಮೇಲೆ ಬರಲಾಗದೆ ಒದ್ದಾಡುತ್ತಿದ್ದು, ಇದನ್ನು ಗಮನಿಸಿದ ಯುವಕರು ಹಗ್ಗ ಹಾಗೂ ಇತರೆ ಸಲಕರಣೆಗಳನ್ನು ಬಳಸಿಕೊಂಡು ಹೋರಿಯನ್ನು ಮೇಲೆತ್ತಿದ್ದಾರೆ. ದಡಕ್ಕೆ ಬರುತ್ತಿದ್ದಂತೆ ಹೋರಿ ಓಟಕ್ಕಿತ್ತಿದೆ. ಯುವಕರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.
ಡೆಸಿಕ್ರ್ಯು ಪ್ರೈವೇಟ್ ಲಿಮಿಟೆಡ್ ಕಾಪು: ಟೆಕ್ನಿಕಲ್ ಸಪೋರ್ಟ್ ಸ್ಪೆಷಲಿಸ್ಟ್ ಹುದ್ದೆಗೆ ನೇಮಕಾತಿ

ಕಾಪು:ಡೆಸಿಕ್ರ್ಯು ಪ್ರೈವೇಟ್ ಲಿಮಿಟೆಡ್ ಕಾಪು ನಲ್ಲಿ ಟೆಕ್ನಿಕಲ್ ಸಪೋರ್ಟ್ ಸ್ಪೆಷಲಿಸ್ಟ್ ಹುದ್ದೆಗೆ ನೇಮಕಾತಿ ನಡೆಯಲಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಾಗಿದ್ದು,ಕನಿಷ್ಠ ಪದವಿ (ಯಾವುದೇ ವಿಭಾಗ)ವಿದ್ಯಾರ್ಹತೆಯನ್ನು ಹೊಂದಿರಬೇಕು. ಆದ್ಯತೆ: ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ, ಅಥವಾ ಸಂಬಂಧಿತ ಕ್ಷೇತ್ರ. ಸಂವಹನ ಕೌಶಲ್ಯಗಳು: ◾ಇಂಗ್ಲಿಷ್‌ನಲ್ಲಿ ಲಿಖಿತ ಮತ್ತು ಮಾತನಾಡುವ ಪ್ರಾವೀಣ್ಯತೆ ಹೊಂದಿರಬೇಕು. ◾ತಾಂತ್ರಿಕೇತರ ಬಳಕೆದಾರರಿಗೆ ತಾಂತ್ರಿಕ ಸಮಸ್ಯೆಗಳನ್ನು ವಿವರಿಸುವ ಸಾಮರ್ಥ್ಯವಿರಬೇಕು. ◾ತಟಸ್ಥ ಉಚ್ಚಾರಣೆ, ಕನಿಷ್ಠ ಅಥವಾ ಮಾತೃಭಾಷಾ ಪ್ರಭಾವ (MTI)ಇರಬೇಕು. ನಿಮ್ಮ ರೆಸ್ಯೂಮ್ ಅನ್ನು ಇಲ್ಲಿಗೆ ಕಳುಹಿಸಿ: [email protected]
ದೆಹಲಿಯಲ್ಲಿ ದಟ್ಟ ಮಂಜು : 118 ವಿಮಾನಗಳ ಹಾರಾಟ ರದ್ದು, 16 ವಿಮಾನಗಳ ಮಾರ್ಗ ಬದಲಾವಣೆ!

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯವಿಮಾನ ನಿಲ್ದಾಣದಲ್ಲಿ ಮಂಗಳವಾರ ದಟ್ಟ ಮಂಜು ಕವಿದ ವಾತವರಣವಿದ್ದ ಪರಿಣಾಮ ವಿಮಾನಗಳ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ಕನಿಷ್ಠ 118 ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, 16 ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿದಿನ 1,300 ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. ದಟ್ಟ ಮಂಜು ಮತ್ತು ಕಡಿಮೆ ಗೋಚರತೆ ಕಾರಣ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವಿಮಾನಗಳ ಹಾರಾಟದ ಮಾಹಿತಿ ನೀಡುವ ‘ಫೈಟ್‌ರಾಡಾರ್-24’ ವೆಬ್‌ಸೈಟ್ ವರದಿ […]
ಜ.3ರಂದು ದೃಶಾ ಕೊಡಗು ಅವರಿಗೆ ಸಾರ್ವಜನಿಕ ಅಭಿನಂದನೆ

ಉಡುಪಿ: ಜೇಸಿಐ ಉಡುಪಿ ಸಿಟಿ, ವನಸುಮ ಟ್ರಸ್ಟ್ ಮತ್ತು ವನಸುಮ ವೇದಿಕೆ ಸಹಯೋಗದಲ್ಲಿ ಜ. 3ರಂದು ಸಂಜೆ 5.30ಕ್ಕೆ ಉಡುಪಿಯ ಶಾರದಾ ಇಂಟರ್‌ನ್ಯಾಶನಲ್ ಹೋಟೆಲ್ ಸಭಾಂಗಣದಲ್ಲಿ “ರಿವಾರ್ಡ್ ಟು ಅವಾರ್ಡ್” ದೃಶಾ ಕೊಡಗು ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಬಾಸುಮ ಕೊಡಗು ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಹಿಂಸೆ ನಿಲ್ಲಿಸಿ’ ಎಂಬ ಘೋಷವಾಖ್ಯದೊಂದಿಗೆ ಮೂರು ರಾಜ್ಯಗಳಲ್ಲಿ ಮೂರು ಸಾವಿರ ಕಿಲೋಮೀಟರ್ ಜಾಗೃತಿ ಬೈಕ್ ರ‌್ಯಾಲಿ ಮಾಡಿದ ದೃಶಾ ಕೊಡಗು ಅವರ […]