ಹಿಂದೂ ಮಗು ನಾಮಕರಣವಾಗದೆ ಒದ್ದಾಡುತ್ತಿದೆ; ಕೆ.ಪಿ.ನಂಜುಂಡಿ ಆಕ್ರೋಶ!

ಮಂಗಳೂರು: ಹಿಂದುತ್ವ ಹಿಂದುತ್ವ ಎನ್ನುವ ಪುತ್ತೂರು ಕ್ಷೇತ್ರದಲ್ಲಿ ಹಿಂದೂ ಮಗುವೊಂದು ಆರು ತಿಂಗಳಾದರೂ ನಾಮಕರಣ ಮಾಡಲಾಗದೆ ಒದ್ದಾಡುತ್ತಿದೆ ಎಂದರೆ ಹಿಂದುತ್ವವೆನ್ನುವುದು ನಾಚಿಕೆ ಪಡಬೇಕು ಎಂದು ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಆಕ್ರೋಶ ವ್ಯಕ್ತಪಡಿಸಿದರು. ತನ್ನ ಸಹಪಾಠಿಗೆ ಮಗು ಕರುಣಿಸಿ ಮದುವೆಯಾಗದೆ ಸತಾಯಿಸುತ್ತಿರುವ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ. ರಾವ್ ಪ್ರಕರಣದ ಬಗ್ಗೆ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿ, ಯಾರೇ ಆಗಲಿ ಜಾತಿ ಧರ್ಮ ಮೀರಿ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಬೇಕು. ಇದರಲ್ಲಿ ಬಡವರಿಗೆ ನ್ಯಾಯ ಸಿಗಬಾರದೆನ್ನುವುದೇ ಕೆಲ […]
ಮಂಗಳೂರು ಕಂಬಳದಲ್ಲಿ ಹೊಸ ದಾಖಲೆ ಬರೆದ 80 ಬಡಗಬೆಟ್ಟು ಕೋಣಗಳು!

ಮಂಗಳೂರಿನ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯುತ್ತಿರುವ ‘ಮಂಗಳೂರು ಕಂಬಳ’ದಲ್ಲಿ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಮಂಗಳೂರು ಕಂಬಳ ಫೈನಲ್‌ನಲ್ಲಿ ಈ ಹಿಂದಿನ ದಾಖಲೆ ಹಿಂದಿಕ್ಕಿದ 80 ಬಡಗುಬೆಟ್ಟು ಶಿಖಾ ಸಂದೀಪ್ ಶೆಟ್ಟಿ ಅವರ ಗಾಂಧಿ ಮೈದಾನ ಸಂತು ಮತ್ತು ಸುರತ್ಕಲ್ ಪಾಂಚ ಎಂಬ ಎರಡು ಕೋಣಗಳು 10.87 ಸೆಕೆಂಡ್‌ನಲ್ಲಿ ಗುರಿ ತಲುಪಿ ನೂತನ ದಾಖಲೆ ನಿರ್ಮಿಸಿದೆ. ಕೋಣಗಳನ್ನು ಹಿಡಿದು ಓಡಿದ ಮಾಸ್ತಿಕಟ್ಟೆ ಸ್ವರೂಪ್ ಅವರು ನೂತನ ದಾಖಲೆಗೆ ಮುನ್ನುಡಿ ಬರೆದಿದ್ದಾರೆ. ಈ ಕೋಣಗಳು 125 ಮೀಟರ್ ಕರೆಯನ್ನು […]
ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ನೀವು ಅರ್ಜಿ ಸಲ್ಲಿಸಿ!

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (NCERT) ಭರ್ಜರಿ ಸಿಹಿ ಸುದ್ದಿ ನೀಡಿದೆ. ವಿವಿಧ ವಿಭಾಗಗಳ ಅಡಿಯಲ್ಲಿ ಖಾಲಿ ಇರುವ ಬೋಧಕೇತರ (Non-Teaching) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಡಿಸೆಂಬರ್ 27 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 16, 2026ರ ಒಳಗೆ NCERTಯ ಅಧಿಕೃತ ವೆಬ್‌ಸೈಟ್ ಆದ ncert.nic.in ಮೂಲಕ ತಮ್ಮ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ […]
ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ: ಮಕ್ಕಳಲ್ಲಿ ರಂಗ ಪ್ರಜ್ಞೆ ಬೆಳೆಸಿ: ಡಾ.ತಲ್ಲೂರು ಶಿವರಾಮ ಶೆಟ್ಟಿ ಕರೆ.

ಉಡುಪಿ: ಮಕ್ಕಳಲ್ಲಿ ರಂಗ ಪ್ರಜ್ಞೆ ಬೆಳೆಸುವ ಮೂಲಕ ನೈತಿಕ ಮೌಲ್ಯಗಳ ತಳಹದಿಯಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ರಂಗಭೂಮಿ ಉಡುಪಿ ಅಧ್ಯಕ್ಷರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಸೋಮವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಈ ವರ್ಷದ “ರಂಗಭೂಮಿ ರಂಗ ಶಿಕ್ಷಣ” ಅಭಿಯಾನದಲ್ಲಿ ಉಡುಪಿ ನಗರದ ಆಯ್ದ 11 ಪ್ರೌಢಶಾಲೆಗಳ 250 ಕ್ಕೂ ಅಧಿಕ ಮಕ್ಕಳ ಭಾಗವಹಿಸುವಿಕೆಯಲ್ಲಿ 11 […]
ನಿಟ್ಟೆ: ಕಾರಿಗೆ ಢಿಕ್ಕಿ ಹೊಡೆದು ಪಾದಚಾರಿ ಮೇಲೆ ಮಗುಚಿಬಿದ್ದ ಮೊಟ್ಟೆ ಸಾಗಾಟದ ಲಾರಿ

ಉಡುಪಿ: ದಾವಣಗೆರೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಮೊಟ್ಟೆ ಸಾಗಾಟದ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದು ಬಳಿಕ ಪಾದಚಾರಿಯ ಮೇಲೆ ಮಗುಚಿಬಿದ್ದ ಭೀಕರ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಅತಿ ವೇಗವಾಗಿ ಬಂದ ಲಾರಿ ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಈ ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂ ಆಗಿದ್ದು, ಕಾರು ಚಾಲಕ ಗಾಯಗೊಂಡಿದ್ದಾರೆ. ಅದೇ ಸಮಯದಲ್ಲಿ ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಲಾರಿ […]