ಉಡುಪಿ: ಬ್ರಹ್ಮವಾಹಕ ಸುಕುಮಾರ್ ಪುರೋಹಿತರು ನಿಧನ

ಉಡುಪಿ: ಅವಿಭಜಿತ ಜಿಲ್ಲೆಯ ಅನೇಕ ದೇವಸ್ಥಾನಗಳಲ್ಲಿ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಉಡುಪಿಯ ಶಿರ್ವ ಕುತ್ಯಾರು ನಿವಾಸಿ ಸುಕುಮಾರ್ ಪುರೋಹಿತರು (42)) ಇಂದು ಬೆಳಿಗ್ಗೆ ಹೃದಯಘಾತದಿಂದಾಗಿ ನಿಧನ ಹೊಂದಿದರು. ಇವರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸಹೋದರಿ, ಇಬ್ಬರು ಸಹೋದರರು ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮಂಗಳೂರು ಶ್ರೀಕಾಳಿಕಾಂಬಾ ವಿನಾಯಕದೇವಸ್ಥಾನ, ಮೂಡಬಿದ್ರೆ ಶ್ರೀ ಕಾಳಿಕಾಂಬಾ ದೇವಸ್ಥಾನ,ಬಾರ್ಕೂರು ಶ್ರೀಕಾಳಿಕಾಂಬಾ ದೇವಸ್ಥಾನ, ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೆಶ್ವರ ದೇವಸ್ಥಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು. […]

ಕಾರ್ಕಳ ಜ್ಞಾನಸುಧಾ: ರಾಷ್ಟ್ರೀಯ ಗಣಿತ ದಿನಾಚರಣೆ

ಗಣಿತನಗರ: ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಗಣಿತನಗರ ಇಲ್ಲಿ ಗಣಿತ ತಜ್ಞ ಶ್ರೀನಿವಾಸ್ ರಾಮಾನುಜನ್ ಜನ್ಮದಿನವಾದ ರಾಷ್ಟ್ರೀಯ ಗಣಿತ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಇದೇ ಸಂದರ್ಭ ನಿವೃತ್ತ ಯೋಧ ಶ್ರೀ ಪ್ರವೀಣ್ ಶೆಟ್ಟಿ ಮತ್ತು ಭಾರತದ ವಾಲಿಬಾಲ್ ತಂಡದ ನಾಯಕಿ ಕು.ಶಗುನ್ ವರ್ಮ ಹೆಗ್ಡೆಯವರನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಪರವಾಗಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ಗೌರವಿಸಲಾಯಿತು. ನಿವೃತ್ತ ಯೋಧ ಪ್ರವೀಣ್ ಶೆಟ್ಟಿ ಮಾತನಾಡಿ ಯಾರು ತಂದೆ–ತಾಯಿ, ಗುರು-ಹಿರಿಯರನ್ನು ಗೌರವಿಸುವವರು ದೇಶವನ್ನು, ವೀರಯೋಧರನ್ನು ಗೌರವಿಸುತ್ತಾರೆ. […]