ಉಡುಪಿ:ಕ್ರೀಡಾ ಪ್ರೋತ್ಸಾಹಧನ : ಅರ್ಜಿ ಆಹ್ವಾನ

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಅನುದಾನದಿಂದ ನೀಡಲಾಗುವ ಕ್ರೀಡಾ ಪ್ರೋತ್ಸಾಹಧನಕ್ಕೆ 2025 ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಹಾಗೂ ರಾಷ್ಟç ಮಟ್ಟದ ಕ್ರೀಡಾಕೂಟದ ವೈಯಕ್ತಿಕ / ಗುಂಪು ಸ್ಪರ್ಧೆಯಲ್ಲಿ ಭಾಗವಹಿಸಿದ/ ಪದಕ ಪಡೆದ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 2026 ರ ಜನವರಿ 9 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, […]
ಹೆಜಮಾಡಿ ನೇಮೋತ್ಸವದಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳವು: ತಮಿಳುನಾಡಿನ ಮೂವರು ಕಳ್ಳಿಯರ ಬಂಧನ

ಉಡುಪಿ: ಹೆಜಮಾಡಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸವದಲ್ಲಿ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿದ ಮೂರು ಮಂದಿ ಕಳ್ಳಿಯರನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ರಾಜ್ಯದ ಕೃಷ್ಣಗಿರಿ ಮಾರಿಯಮ್ಮ ಬೀದಿಯ ಶೀಥಲ್, ಕಾಳಿಯಮ್ಮ ಹಾಗೂ ಮಾರಿ(40) ಬಂಧಿತ ಆರೋಪಿಗಳು.ಹೆಜಮಾಡಿಯ ಕಮಲ(78) ಎಂಬವರು ಡಿ.24ರಂದು ಮನೆಯ ಬಳಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸಕ್ಕೆ ಹೋಗಿದ್ದರು. ಅಲ್ಲಿಗೆ ಬಂದ ಈ ಮೂವರು ಕಳ್ಳಿಯರು ಜನಸಂದಣಿಯ ಮಧ್ಯೆಯೇ ಕಮಲ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದರು. ಚಿನ್ನದ ಸರ ಕಳವಾಗಿರುವುದು […]