ಉಡುಪಿ: ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

ಕೋಟ: ಆಟೋ ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಸಾಲಿಗ್ರಾಮದ ಹಾಡಿಮನೆ ಹೊಟೇಲ್ ಮುಂಬಾಗ ನಡೆದಿದೆ. ರಿಕ್ಷಾ ಚಾಲಕ, ಕಾರ್ಕಡ ನಿವಾಸಿ ಭೋಜ ಪೂಜಾರಿ(52) ಮೃತರು. ಆಟೋ ರಿಕ್ಷಾ ಪಲ್ಟಿಯಾದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾರೆ.ಮೃತರು ಸಾಲಿಗ್ರಾಮ ರಿಕ್ಷಾ ಚಾಲಕ, ಮಾಲಕರ ಸಂಘದ ಪದಾಧಿಕಾರಿಯಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಉಡುಪಿ ಧರ್ಮಾಧ್ಯಕ್ಷರ – ಕ್ರಿಸ್ತ ಜಯಂತಿಯ ಸಂದೇಶ

ಕ್ರಿಸ್ತಜಯಂತಿ, ದೇವನ ಪ್ರೀತಿಯ ಹೃದಯದ ಒಂದು ಮಿಡಿತ. ಮನುಜನ ಮೇಲಿನ ಪ್ರೀತಿಯ ತುಡಿತ. ತನ್ನ ಮಗನನ್ನೇ ಜಗತ್ತಿಗೆ ಧಾರೆ ಎರೆದ ಅಪರಿಮಿತ ಪ್ರೀತಿ. ಕ್ರಿಸ್ತ ಜಯಂತಿ ದೇವನ ಅನುಪಮ ಪ್ರೀತಿಯ ರೀತಿ. ಮಮತೆ, ಮಮಕಾರದ ಆಗರವಾಗಿರುವ ಆ ದೇವರ ಪ್ರೀತಿಯನ್ನು ಅನುಭವಿಸಿ ನಾವದರ ನೆರಳಾದಾಗ, ನಮ್ಮ ಹೃದಯ ಪ್ರೇಮದಿಂದ ಕ್ರಿಸ್ತನನ್ನು ನೀಡಲು ಮುಂದಾದಾಗ ನೈಜ ಕ್ರಿಸ್ತಜಯಂತಿಯ ಆಚರಣೆಯಾಗುತ್ತದೆ. “ಬೆಳಗು ಬಾ ಜ್ಯೋತಿಯನು, ಎದೆಯ ಮಂದಿರದಲ್ಲಿ, ಜಗಕೆ ಬೆಳಕಾಗುವೇ ಶುಭ ಘಳಿಗೆಯಲ್ಲಿ. ಇನಿತು ಜಡ ನಾನು ಬಂದ ಚೇತನ […]

ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್ಮಸ್ ಈವ್ ಆಚರಣೆ

ಉಡುಪಿ : ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಜನ್ಮದಿನ ಕ್ರಿಸ್ಮಸ್ ಈವ್ ಹಬ್ಬವನ್ನು ಬುಧವಾರ ರಾತ್ರಿ ಕ್ರೈಸ್ತರು ಉಡುಪಿ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು. ಹಬ್ಬದ ಅಂಗವಾಗಿ ಕ್ರೈಸ್ತರು ಬುಧವಾರ ರಾತ್ರಿ ಸಮೀಪದ ಚರ್ಚ್ಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸ್ನೆಹಿತರು, ಬಂಧು ಬಾಂಧವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಸಂಜೆಯ ಬಲಿಪೂಜೆಯನ್ನು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಅರ್ಪಿಸಿ ಹಬ್ಬದ ಸಂದೇಶ ನೀಡಿದರು.ಈ ವೇಳೆ […]

ಕುಂದಾಪುರ: ಹಳ್ಳಿಹೊಳೆ ಗ್ರಾಪಂಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭೇಟಿ.

ಕುಂದಾಪುರ: ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಡಿ.24ರಂದು ಹಳ್ಳಿಹೊಳೆ ಗ್ರಾಪಂಗೆ ಭೇಟಿ ನೀಡಿ, ಇತ್ತೀಚೆಗೆ ಉದ್ಘಾಟನೆಗೊಂಡ ನೂತನ ಗ್ರಾಪಂ ಕಟ್ಟಡವನ್ನು ಪರಿಶೀಲಿಸಿ ಗ್ರಾಮಸ್ಥರ ಹಲವು ಮನವಿಗಳನ್ನು ಸ್ವೀಕರಿಸಿದರು. ಹಳ್ಳಿಹೊಳೆಯಿಂದ ಬೈಂದೂರು ತಾಲೂಕು ಕೇಂದ್ರಕ್ಕೆ ಹೋಗುವ ಸರಕಾರಿ ಬಸ್‌ಗೆ ಬೇಡಿಕೆ, ಹಳ್ಳಿಹೊಳೆ ಕಮಲಶಿಲೆ ರಸ್ತೆಯ ಪಾರೆಯಲ್ಲಿ ರಸ್ತೆ ಅಭಿವೃದ್ಧಿಗೆ ವನ್ಯಜೀವಿ ವಿಭಾಗದಿಂದ ಆಕ್ಷೇಪದ ಬಗ್ಗೆ, ಶಾಡಬೇರುನಿಂದ ಮೂಡಹಿತ್ಲು ರಸ್ತೆ ಅಭಿವೃದ್ಧಿಗೆ ಮನವಿ, ಸುಮಾರು 25 ವರ್ಷದಿಂದ ಓಡಾಡುತ್ತಿದ್ದ ಉಡುಪಿ-ಹೈದರಾಬಾದ್ ಸರಕಾರಿ ಬಸ್ ಸಂಚಾರ ಸ್ಥಗಿತ ಗೊಂಡ […]

ಉಡುಪಿ:ಬೈಂದೂರು ನೂತನ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭ

ಉಡುಪಿ:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗ ಇವರ ವತಿಯಿಂದ ಬೈಂದೂರು ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭವು ಡಿಸೆಂಬರ್ 27 ರಂದು ಬೆಳಗ್ಗೆ 11.30 ಕ್ಕೆ ಬೈಂದೂರು ಕ.ರಾ.ರ.ಸಾ.ನಿಗಮ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ […]