ಶಂಕರನಾರಾಯಣ: ನಕಲಿ ಚಿನ್ನಾಭರಣ ನೀಡಿ ವಂಚನೆ- ಆರೋಪಿ ಬಂಧನ

ಉಡುಪಿ: ರಾಯಚೂರು ಜಿಲ್ಲೆಯ ಗೋಪಾಲ ಎಂಬವರಿಗೆ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ.ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಜಯಪ್ರಕಾಸ್ ಡಿ ಬಂಧಿತ ಆರೋಪಿ. ಸಿದ್ದಾಪುರದ ಕಮಲಶಿಲೆ ರಸ್ತೆಯಲ್ಲಿ ಆರೋಪಿಗಳು ಗೋಪಾಲ ಎಂಬವರಿಗೆ 150 ಗ್ರಾಂ ಚಿನ್ನವೆಂದು ಹೇಳಿ 5 ಲಕ್ಷ ಪಡೆದುಕೊಂಡು ನಕಲಿ ಚಿನ್ನ ನೀಡಿ ಪರಾರಿಯಾಗಿದ್ದರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊತ್ತಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 4,50,000 ರೂ. […]
ಮುಂಬೈನಲ್ಲಿ ಪೊಲೀಸ್ ಅಧಿಕಾರಿಗಳೆಂದು ನಟಿಸಿ ಬೃಹತ್ ಸೈಬರ್ ವಂಚನೆ: ಬರೋಬ್ಬರಿ 9 ಕೋಟಿ ರೂ. ಕಳೆದುಕೊಂಡ 85ರ ವೃದ್ಧ!

ಮುಂಬೈ: ದೇಶದಲ್ಲಿ ಸೈಬರ್ ವಂಚಕರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ವಂಚಕರಿಗೆ ನಿವೃತ್ತ ಉದ್ಯೋಗಿಗಳು, ಟೆಕ್ಕಿಗಳು, ವಿದ್ಯಾವಂತರೇ ಹೆಚ್ಚು ಟಾರ್ಗೆಟ್. ಇದೀಗ ಮುಂಬೈನ ಗಿರ್ಗಾಂವ್ ಪ್ರದೇಶದಲ್ಲಿ ವಾಸಿಸುತ್ತಿದ್ದ 85 ವರ್ಷದ ವೃದ್ಧರೊಬ್ಬರಿಗೆ ‘ಡಿಜಿಟಲ್ ಬಂಧನ’ ಆಗಿದ್ದು, ಸೈಬರ್ ವಂಚನೆಯ ಮೂಲಕ ಬರೋಬ್ಬರಿ 9 ಕೋಟಿ ರೂ.ಗಳಷ್ಟು ಹಣ ವಂಚಿಸಿರುವ ಭಾರೀ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಅಧಿಕಾರಿಗಳೆಂದು ನಟನೆ ಮಾಡಿದ ವಂಚಕರು, ಹಣ ವರ್ಗಾವಣೆ ಹಾಗೂ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಆರೋಪ ಹೊರಿಸಿ, ಬೆದರಿಸಿ ವೃದ್ಧನನ್ನು ವಿವಿಧ ಬ್ಯಾಂಕ್ […]
ಕಾಂಬೋಡಿಯಾ- ಥಾಯ್ಲೆಂಡ್ ಗಡಿ ಸಂಘರ್ಷ: ಹಿಂದೂ ಧರ್ಮದ ವಿಷ್ಣು ಪ್ರತಿಮೆ ಧ್ವಂಸ; ಭಾರತ ತೀವ್ರ ಖಂಡನೆ!

ನವದೆಹಲಿ: ಕಾಂಬೋಡಿಯಾ ಗಡಿಯಲ್ಲಿ ಹಿಂದೂ ಧರ್ಮದ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಿರುವುದಕ್ಕೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಕಾಂಬೋಡಿಯಾ ಗಡಿಯಲ್ಲಿ ನಿರ್ಮಾಣ ಮಾಡಲಾಗಿದ್ದ 30 ಅಡಿ ಎತ್ತರದ ವಿಷ್ಣ ಪ್ರತಿಮೆಯನ್ನು ಧ್ವಂಸ ಮಾಡಿದ ಬಗ್ಗೆ ವರದಿಗಳನ್ನು ನಾವು ನೋಡಿದ್ದೇವೆ. ಈ ಘಟನೆ ಜಗತ್ತಿನಾದ್ಯಂತ ಇರುವ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದು ಇಂತಹ ಘಟನೆ ನಡೆಯಬಾರದಿತ್ತು ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಶಾಂತಿ ಕಾಪಾಡಲು ಹಾಗೂ ಪ್ರಾಣಹಾನಿ ಮತ್ತು ಆಸ್ತಿ–ಪಾಸ್ತಿ ನಷ್ಟವನ್ನು ತಡೆಯಲು, ಎರಡೂ ರಾಷ್ಟ್ರಗಳು […]
ಡಿ.26 – 28: ಕಾರ್ಕಳ ಜ್ಞಾನಸುಧಾ ಸಂಸ್ಥೆಗಳಲ್ಲಿ ‘ಸಂಸ್ಥಾಪಕರ ದಿನಾಚರಣೆ’ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ.

ಕಾರ್ಕಳ: ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥಾಪಕರ ದಿನಾಚರಣೆ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಕಳ ಜ್ಞಾನಸುಧಾದ ಆವರಣದಲ್ಲಿ ಡಿಸೆಂಬರ್ 26ರಂದು ಸಂಜೆ 6 ಗಂಟೆಯಿಂದ ಸಂಸ್ಥೆಯ ಯಕ್ಷೋ ತ್ಕರ್ಷ ಸದಸ್ಯರಿಂದ ‘ಲೀಲಾಮೂರ್ತಿ ಶ್ರೀಕೃಷ್ಣ’ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 27 ರಂದು ಸಂಜೆ 5:30ಕ್ಕೆ “ಜ್ಞಾನತೀರ್ಥ ವಿಠಲ” ಎನ್ನುವ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ರಾಷ್ಟ್ರೀಯ ಮಟ್ಟದ ಕಲಾವಿದರಾದ ಅಂಕುಶ್ ನಾಯಕ್, ಪಂಡಿತ್ ಜಯತೀರ್ಥ ಮೇವುಂಡಿ, ನರೇಂದ್ರ […]
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಕೇಂದ್ರದ ನಿರ್ದೇಶನಕ್ಕೆ ರಾಜ್ಯದಿಂದ ನಕಾರ.

ನವದೆಹಲಿ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಅರಣ್ಯ ನಾಶ ಕಡಿಮೆ ಮಾಡಲು ಸುರಂಗ ರಸ್ತೆ ನಿರ್ಮಿಸಬೇಕು ಎಂದು ಕೇಂದ್ರ ಅರಣ್ಯ ಸಚಿವಾಲಯದ ಸಲಹಾ ಸಮಿತಿ ಮಾಡಿದ್ದ ಸೂಚನೆಯನ್ನು ಕರ್ನಾಟಕ ಅರಣ್ಯ ಇಲಾಖೆ ಒಪ್ಪಿಲ್ಲ. ಸುರಂಗ ರಸ್ತೆ ನಿರ್ಮಾಣದಿಂದ ಅಧಿಕ ಪ್ರಮಾಣದ ಅರಣ್ಯ ನಾಶವಾಗಲಿದೆ ಎಂದೂ ಸ್ಪಷ್ಟಪಡಿಸಿದೆ. ‘ಯೋಜನೆಯ ಕಾಮಗಾರಿಗಾಗಿ ಈಗಿರುವ 9.2 ಕಿ.ಮೀ. ರಸ್ತೆಯನ್ನು 3.5 ಮೀ. ನಿಂದ 5.5 ಮೀ.ಗೆ ಅಗಲ ಮಾಡಲಾಗುತ್ತದೆ. ಈ ರಸ್ತೆಯು ಮೂರು ಗ್ರಾಮಗಳ ಮೂಲಕ ಹಾದು ಹೋಗುತ್ತದೆ. […]