ವಾಯ್ಸ್ ಆಫ್ ಚಾಣಕ್ಯ 2025 ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ

ಹೆಬ್ರಿ: ಗ್ರಾಮೀಣ ಪ್ರದೇಶವಾದ ಹೆಬ್ರಿಯಲ್ಲಿ ಕಳೆದ 11 ವರ್ಷಗಳಿಂದ ವಿವಿಧ ಕಲಾಪ್ರಕಾರಗಳನ್ನು ತರಬೇತಿ ನೀಡುತ್ತಿರುವ ಚಾಣಕ್ಯ ಸಂಸ್ಥೆ ಹೆಬ್ರಿಯಲ್ಲಿ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯನ್ನು ಅಯೋಜಿಸುವುದರ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದು ಅವಿಭಜಿತ ದ.ಕ.ಜವಳಿ ವರ್ತಕರ ಸಂಘದ ಅಧ್ಯಕ್ಷ ಯೋಗೀಶ್ ಭಟ್ ಹೇಳಿದರು. ಅವರು ಚಾಣಕ್ಯ ಮ್ಯೂಸಿಕ್ ಅಕಾಡೆಮಿ ಹೆಬ್ರಿ ಇವರ ನೇತೃತ್ವದಲ್ಲಿ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದೊಂದಿಗೆ ನಡೆದ ರಾಜ್ಯಮಟ್ಟದ ಸಂಗೀತ ಸಮರವನ್ನು […]
ಮಣಿಪಾಲ್ ಮ್ಯಾರಥಾನ್ 2026: ಹಸಿರುಭರಿತ, ಸುಸ್ಥಿರ ನಾಳಿನ ಭವಿಷ್ಯಕ್ಕಾಗಿ ಓಟ

ಮಣಿಪಾಲ:MAHE ನ 8 ನೇ ಆವೃತ್ತಿಯ ಮಣಿಪಾಲ್ ಮ್ಯಾರಥಾನ್ 100+ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಸೇರಿದಂತೆ 20,000ಕ್ಕೂ ಹೆಚ್ಚು ಓಟಗಾರರನ್ನು ಆಕರ್ಷಿಸಲಿದೆ ಹಾಗೂ 25ಲಕ್ಷಕ್ಕೂ ಮೀರಿದ ಬಹುಮಾನಗಳನ್ನು ಹೊಂದಿದೆ. ಈ ಓಟವು ಐದು ರೇಸ್ ವಿಭಾಗಗಳನ್ನು ಒಳಗೊಂಡಿರುತ್ತದೆ – 42K ಪೂರ್ಣ ಮ್ಯಾರಥಾನ್, 21K ಹಾಫ್ ಮ್ಯಾರಥಾನ್, 10K, 5K, ಮತ್ತು 3K ಫನ್ ರನ್ ಮತ್ತು ವೃತ್ತಿಪರ ಕ್ರೀಡಾಪಟುಗಳು, ಹವ್ಯಾಸಿ ಓಟಗಾರರು ಹಾಗೂ ಫಿಟ್ನೆಸ್ ಉತ್ಸಾಹಿಗಳಿಗೆ ಸಮಾನವಾಗಿ ಅವಕಾಶ ಕಲ್ಪಿಸುತ್ತದೆ. ಈ ಮ್ಯಾರಥಾನ್ ದುಬೈ, ಇಂಗ್ಲೆಂಡ್, ಇಥಿಯೋಪಿಯಾ, […]
ಕಾರ್ಕಳ:ನಿಟ್ಟೆಯಲ್ಲಿ ನಡೆದ ಸಂಭ್ರಮದ ಹಳೆವಿದ್ಯಾರ್ಥಿಗಳ ಪುನರ್ಮಿಲನ

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಹಾಗೂ 1996 ರಲ್ಲಿ ಪ್ರವೇಶ ಪಡೆದ ಎನ್ಎಂಎಎಂಐಟಿಯ ಹಳೆಯ ವಿದ್ಯಾರ್ಥಿಗಳ ಸಿಲ್ವರ್ ರಿಯೂನಿಯನ್ ನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘವಾದ “ವೆನಮಿತಾ” ಡಿ.20 ರಂದು ನಿಟ್ಟೆಯ ಸಂಭ್ರಮ್ ಸಭಾಂಗಣದಲ್ಲಿ ಹಮ್ಮಿಕೊಂಡಿತು. ಕಾರ್ಯಕ್ರಮವನ್ನು ನಿಟ್ಟೆ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಕುಲಾಧಿಪತಿ ಎನ್.ವಿನಯ ಹೆಗ್ಡೆ ಉದ್ಘಾಟಿಸಿದರು. ನಿಟ್ಟೆ ಕ್ಯಾಂಪಸ್ ನ್ನು ಅವರು ಎಷ್ಟು […]
ಡಿ.25ರಂದು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನಿಂದ 14 ಮನೆಗಳ ಹಸ್ತಾಂತರ

ಉಡುಪಿ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದ ಕೊರಗರ ಕಾಲೋನಿಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 14 ಮನೆಗಳ ಗೃಹಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಇದೇ ಡಿ. 25ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ. ಎಚ್.ಎಸ್. ಶೆಟ್ಟಿ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗೃಹಪೂಜೆ ನೆರವೇರಿಸಿ, ಆಶೀರ್ವಚನ ನೀಡಲಿದ್ದಾರೆ. […]
ಡಿ. 26ರಿಂದ 28ರವರೆಗೆ ಕಾಪು ಲೈಟ್ ಹೌಸ್ ಕಡಲ ತೀರದಲ್ಲಿ “ಕಡಲ ಪರ್ಬ “

ಉಡುಪಿ: ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ಪ್ರಯುಕ್ತ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಕಾಪು ಮಂಡಲ ಬಿಜೆಪಿ ವತಿಯಿಂದ ಇದೇ ಡಿ. 26, 27 ಮತ್ತು 28ರಂದು ಕಾಪು ಲೈಟ್ ಹೌಸ್ ಕಡಲ ತೀರದಲ್ಲಿ “ಕಾಪು ಕಡಲ ಪರ್ಬ”ವನ್ನು ಆಯೋಜಿಸಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, ಈ ಕಡಲ ಪರ್ಬದಲ್ಲಿ ಬೀಚ್ ಉತ್ಸವ, ಆಹಾರ ಮೇಳ, ಕ್ರೀಡೋತ್ಸವ, ಸಾಂಸ್ಕೃತಿಕ ಉತ್ಸವಗಳು […]