ಮಲ್ಪೆ ಕಡಲ ತೀರದಲ್ಲಿ ತೇಲಿಬಂದ ಕೃಷ್ಣನ ವಿಗ್ರಹ: ವಿಡಿಯೋ ವೈರಲ್

ಉಡುಪಿ: ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಕೃಷ್ಣನ ವಿಗ್ರಹ ತೇಲಿ ಬಂದು ಪವಾಡ ಸಂಭವಿಸಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಭಾನುವಾರ ಕೃಷ್ಣಮಠದಲ್ಲಿ ಇಸ್ಕಾನ್ ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮ ಇದ್ದು, ಸುಮಾರು 18 ಬಸ್ಸುಗಳಲ್ಲಿ ಇಸ್ಕಾನ್ ಅನುಯಾಯಿಗಳು ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಕಡಲಲ್ಲಿ ತೇಲಿ ಬಂದ ವಿಗ್ರಹವೊಂದು ಎಲ್ಲರ ಗಮನ ಸೆಳೆಯಿತು. ಅಲ್ಲಿ ಸೇರಿದ್ದ ಸಾವಿರಾರು ಮಂದಿ ಆ ವಿಗ್ರಹವನ್ನು ಮೇಲಕ್ಕೆ ತೆಗೆದು ಸಂಭ್ರಮಿಸಿದರು. ಉಡುಪಿಯ ಕೃಷ್ಣ ದೇವರು ಕೂಡ ಕಡಲಲ್ಲೇ […]
ಗಂಡನನ್ನು ಕೊಂದು ಗ್ರೈಂಡರ್ ನಲ್ಲಿ ಹಾಕಿ ರುಬ್ಬಿದ ಹೆಂಡತಿ: ಪ್ರಿಯಕರನ ಜೊತೆ ಸೇರಿ ಭಯಾನಕ ಕೃತ್ಯ!

ಉತ್ತರ ಪ್ರದೇಶ: ಲವರ್ ಜೊತೆಗೆ ಸೇರಿದ ಮಹಿಳೆಯೊಬ್ಬಳು, ತನ್ನ ಗಂಡನನ್ನು ಹತ್ಯೆಗೈದಿದ್ದು, ಬಳಿಕ ಮೃತದೇಹವನ್ನು ಗ್ರೈಂಡರ್ ನಲ್ಲಿ ರುಬ್ಬಿ, ಚರಂಡಿಗೆ ಎಸೆದಿರುವ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಆರೋಪಿಗಳನ್ನು ರೂಬಿ ಮತ್ತು ಗೌರವ್ ಎಂದು ಗುರುತಿಸಲಾಗಿದ್ದು, ಅವರನ್ನು ಡಿಸೆಂಬರ್ 20 ರಂದು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ ಕೆ ಬಿಷ್ಣೋಯ್ ತಿಳಿಸಿದ್ದಾರೆ. ತಲೆ, ಕೈ-ಕಾಲು ಇಲ್ಲದ ಮೃತದೇಹ […]
ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಬಂದ್ ಆಗಲಿದೆ 22 ಖಾಸಗಿ ಕಾಲೇಜುಗಳು!

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದಿದ್ದ 22 ಖಾಸಗಿ ಪದವಿ ಶಿಕ್ಷಣ ಕಾಲೇಜುಗಳು ಸಲ್ಲಿಸಿದ್ದ ಸ್ವಯಂ ಮುಚ್ಚುವ ಪ್ರಸ್ತಾವಗಳಿಗೆ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಸೋಮವಾರ ಅನುಮೋದನೆ ನೀಡಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ‘ಕಾಲೇಜುಗಳನ್ನು ಮುಚ್ಚಲು ಆಡಳಿತ ಮಂಡಳಿಗಳು ನಿರ್ಧರಿಸಿವೆ. ಈಗ ಪ್ರವೇಶ ಪಡೆದು ಬೇರೆ ಬೇರೆ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಚಟುವಟಿಕೆ ಮುಂದುವರಿಸಲಿವೆ. ಅಂಕಪಟ್ಟಿ ಪರಿಶೀಲನೆ ಸೇರಿ ವಿದ್ಯಾರ್ಥಿಗಳಿಗೆ ಎಲ್ಲ ಅಗತ್ಯ ಸೇವೆಗಳನ್ನು ಒದಗಿಸಲು ಆಯಾ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ‘ ಎಂದರು. […]
ಉಡುಪಿಯ ಬಲ್ಲಾಳ್ ಮೊಬೈಲ್ಸ್ ನಲ್ಲಿ ಕ್ರಿಸ್ ಮಸ್ ಹಬ್ಬವನ್ನು ಬಿಂದಾಸ್ ಆಗಿ ಆಚರಿಸಿರಿ: ಇಲ್ಲಿ ನಿಮಗಾಗಿ ಕಾದಿವೆ ಉಡುಗೊರೆಗಳ ಮಹಾಪೂರ! ಕ್ರಿಸ್ ಮಸ್ ಮತ್ತು ನ್ಯೂ ಇಯರ್ ಧಮಾಕಾ!

ಉಡುಪಿ: ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿರುವ ಹೆಸರಾಂತ “ಬಲ್ಲಾಳ್ ಮೊಬೈಲ್ಸ್” ಶೋರೂಮ್ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ಭರ್ಜರಿ ಆಫರ್ಗಳನ್ನು ಲಾಂಚ್ ಮಾಡಲಾಗಿದೆ. ಇಲ್ಲಿಗೆ ಭೇಟಿ ನೀಡುವ ಮೂಲಕ ನಿಮ್ಮ ಹಬ್ಬವನ್ನು ಮತ್ತಷ್ಟು ಸಂತೋಷವಾಗಿ ಆಚರಿಸಕೊಳ್ಳಬಹುದು. ಎಕ್ಸ್ಚೇಂಜ್ ಆಫರ್: ತಮ್ಮ ಹಳೆಯ ಸ್ಮಾರ್ಟ್ಫೋನ್ನ್ನು ಉತ್ತಮ ಮಾದರಿಯ ಹೊಸ ಫೋನ್ಗೆ ಅಪ್ಗ್ರೇಡ್ ಮಾಡಲು ಬಲ್ಲಾಳ್ ಮೊಬೈಲ್ಸ್ ವಿಶೇಷ ಎಕ್ಸ್ಚೇಂಜ್ ಆಫರ್ ನೀಡುತ್ತಿದೆ. ನಿಮಗೆ ಇಷ್ಟವಾದ ಬ್ರ್ಯಾಂಡ್ಗಳ ಹೊಸ ಫೋನ್ಗಳನ್ನು ಆಕರ್ಷಕ ದರದಲ್ಲಿ ಪಡೆಯಬಹುದು. “ದಿ ಗ್ರೇಟ್ ಫೆಸ್ಟಿವಲ್ […]
ಉಡುಪಿ: ಹಿರಿಯ ರಂಗಕರ್ಮಿ ಪ್ರೊ.ರಾಮದಾಸ್ ನಿಧನ

ಉಡುಪಿ: ಶ್ರೇಷ್ಠ ನಾಟಕಕಾರ ಕವಿ ಸಾಹಿತಿ ರಂಗನಟ ನಿರ್ದೇಶಕರಾದ ಉಡುಪಿಯ ಪ್ರೊ. ರಾಮದಾಸ್ (86) ಇಂದು ಮುಂಜಾನೆ ನಿಧನರಾದರು. ರಂಗಭೂಮಿ ಉಡುಪಿಯ ರಂಗನಟರಾಗಿ, ನಿರ್ದೇಶಕರಾಗಿ ಇವರ ಕೊಡುಗೆ ಅಪಾರವಾದುದು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಇವರು ಕಾಲೇಜಿನ ಹಾಗೂ ಉಡುಪಿಯ ಸಾಂಸ್ಕೃತಿಕ, ಸಾಹಿತ್ಯ ರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದರು. ರಂಗಭೂಮಿ (ರಿ.) ಉಡುಪಿಯ ಓರ್ವ ಮುಖ್ಯ ಕಲಾವಿದರಾಗಿ ವೀರ ಪುರೂರವ, ಧರ್ಮಚಕ್ರ, ಸಂಕ್ರಾಂತಿ, ನಾಯೀಕತೆ, ಹರಕೆಯ ಕುರಿ , ಓಡಿಸ್ಸಿ, ಸಾಕ್ಷಾತ್ಕಾರ, ಸೂರ್ಯ ಶಿಕಾರಿ .. […]