ಕಾರ್ಕಳ: ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಸಂಪರ್ಕ ರಸ್ತೆ ಕಡಿತ; ರಸ್ತೆ ಕಾಮಗಾರಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಕಾರ್ಕಳ: ಕಾರ್ಕಳ ತಾಲೂಕು ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ–169ರ ಸರ್ವಿಸ್ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ತೆರಳುವ ಸಂಪರ್ಕ ರಸ್ತೆ ಸಂಪೂರ್ಣವಾಗಿ ಕಡಿತಗೊಂಡಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾ.ಹೆ.169 ಸರ್ವಿಸ್ ರಸ್ತೆ ಕಾಮಗಾರಿ ಸಾರ್ವಜನಿಕರ ನಿರಂತರ ಒತ್ತಡದ ನಂತರ ಇತ್ತೀಚೆಗೆ ಆರಂಭಗೊಂಡಿದೆ. ಆದರೆ ಕಾಮಗಾರಿಯ ವೇಳೆ ಸಹಕಾರಿ ಸಂಘದ ಎದುರುಗಡೆ ರಸ್ತೆ ಅಗೆಯಲ್ಪಟ್ಟ ಪರಿಣಾಮ ಸಾಣೂರು, […]
ಕಿಡ್ನಿ ಸ್ಟೋನ್ ಆಗಲು ಇವುಗಳೇ ಪ್ರಮುಖ ಕಾರಣಗಳು: ಈ ತಪ್ಪುಗಳನ್ನು ಯಾವತ್ತೂ ಮಾಡಬೇಡಿ

ಮೂತ್ರಪಿಂಡಗಳು ದೇಹದಲ್ಲಿ ಬಹಳ ಮುಖ್ಯವಾದ ಅಂಗಗಳಾಗಿವೆ. ಅನೇಕ ಕಾರ್ಯಗಳನ್ನು ನಿರ್ವಹಿಸುತ್ತವೆ. ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ನೀರನ್ನು ಫಿಲ್ಟರ್ ಮಾಡಿ ಮೂತ್ರದ ರೂಪದಲ್ಲಿ ಹೊರಹಾಕುವುದು ಅವುಗಳ ಪ್ರಾಥಮಿಕ ಕೆಲಸ. ಅವು ದೇಹದ pH ಮಟ್ಟಗಳು, ಉಪ್ಪಿನ ಮಟ್ಟವನ್ನು ನಿಯಂತ್ರಿಸುತ್ತವೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ ಮತ್ತು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತವೆ. ಮೂತ್ರಪಿಂಡದೊಳಗೆ ಸಂಗ್ರಹವಾಗಿರುವ ಖನಿಜಗಳು ಒಟ್ಟಿಗೆ ಸೇರಿಕೊಂಡು ಸಣ್ಣ ಅಥವಾ ದೊಡ್ಡ, ಗಟ್ಟಿಯಾದ, ಘನ ಹರಳುಗಳನ್ನು ರೂಪಿಸುತ್ತವೆ. ಈ ಹರಳುಗಳು ಮೊದಲಿಗೆ ಚಿಕ್ಕದಾಗಿರುತ್ತವೆ. ಆದರೆ ಕಾಲಾನಂತರದಲ್ಲಿ, […]
ಮಣಿಪಾಲದ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಪಲ್ಲವಿ ಭಟ್ ನಿಧನ

ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಣಿಪಾಲದ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಪಲ್ಲವಿ ಭಟ್(34) ಅವರು ಚಿಕಿತ್ಸೆ ಫಲಿಸದೆ ಶನಿವಾರ ನಿಧನ ಹೊಂದಿದರು.ಆಟೊ ಇಮ್ಯುನೋ ಖಾಯಿಲೆಯಿಂದಾಗಿ ಒಂದು ವಾರದ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಪಲ್ಲವಿ ಭಟ್ ಮಾಧವ ಕೃಪಾ ಶಾಲೆಯಲ್ಲಿ ಭೌತಶಾಸ್ತ್ರ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿಕ್ಷಕಿಯ ಅಕಾಲಿಕ ನಿಧನಕ್ಕೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.
ಪ್ರೀತಮ್ ಗೋಪಾಲಕೃಷ್ಣ ಅಡಿಗ ಅವರಿಗೆ ಪಿಎಚ್ ಡಿ ಪದವಿ

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹಯರ್ ಎಜುಕೇಶನ್ (ಮಾಹೆ), ಮಣಿಪಾಲ ಸಂಸ್ಥೆಯು ಪ್ರೀತಮ್ ಗೋಪಾಲಕೃಷ್ಣ ಅಡಿಗ ಅವರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ. ಅವರು ನಡೆಸಿದ ಪಿಎಚ್.ಡಿ. ಸಂಶೋಧನೆ “Memes, Millennials and Media: A Thematic Exploration of Video Internet Memes and their Relevance in the Indian Digital Space” ಎಂಬ ಶೀರ್ಷಿಕೆಯಲ್ಲಿ, ಭಾರತದ ಡಿಜಿಟಲ್ ಪ್ರಾಂಗಣದಲ್ಲಿ ವೀಡಿಯೋ ಮೀಮ್‌ಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾಗವಹಿಸುವಿಯ ಮಹತ್ವವನ್ನು ಸಮಗ್ರವಾಗಿ ವಿಶ್ಲೇಷಿಸುತ್ತದೆ. ಈ […]