ಕಾಪು: ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ದಂಧೆ: ಇಬ್ಬರು ಪಿಂಪ್ ಗಳ ಬಂಧನ

ಉಡುಪಿ: ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪಿಂಪ್ಗಳಿಬ್ಬರನ್ನು ಪಡುಬಿದ್ರೆ ಪೊಲೀಸರು ಬಂಧಿಸಿ ಮಹಿಳೆಯರನ್ನು ರಕ್ಷಿಸಿದ ಘಟನೆ ಕಾಪು ಠಾಣಾ ವ್ಯಾಪ್ತಿಯ ನಡ್ಸಾಲು ಎಂಬಲ್ಲಿ ನಡೆದಿದೆ. ಉಚ್ಚಿಲ ಪೊಲ್ಯದ ಯತಿರಾಜ ಪೊಲ್ಯ ಶೆಟ್ಟಿ(48), ಮತ್ತು ಕಾಡಿಪಟ್ನ ನವೀನ್ ಪೂಜಾರಿ(39) ಬಂಧಿತರು. ಕಾಪು ತಾಲೂಕು ನಡ್ಸಾಲು ಗ್ರಾಮದ ರಾ.ಹೆ 66ರ ಪಕ್ಕದಲ್ಲಿರುವ ಮಹಾದೇವಿ ಟೂರಿಸ್ಟ್ ಹೋಮ್ ಲಾಡ್ಜ್ನಲ್ಲಿ ಮಹಿಳೆಯರನ್ನು ಇರಿಸಿಕೊಂಡು ವೈಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಖಚಿತ ಮಾಹಿತಿಯಂತೆ ಪಡುಬಿದ್ರಿ ಪೊಲೀಸರು ಕಾಪು ಪೊಲೀಸರೊಂದಿಗೆ ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು […]
ಹಿರಿಯಡ್ಕ: ಕೆಎಸ್ಆರ್ಟಿಸಿ ಬಸ್ ಢಿಕ್ಕಿ; ರಸ್ತೆ ದಾಟುತ್ತಿದ್ದ ಕಾರ್ಮಿಕ ಮೃತ್ಯು.

ಹಿರಿಯಡ್ಕ: ಕೆಎಸ್ಆರ್ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮದಗ ಶೇಡಿಗುಡ್ಡೆ, ಹತ್ತಿರ ಬಳಿ ನಡೆದಿದೆ. ಮೃತರನ್ನು ಸಲೀಂ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇನ್ನೋರ್ವ ಕಾರ್ಮಿಕ ಗೋವಾರ್ಧನ ಬೀಮ್ ಮಂಡಲ್ ಎಂಬವರು ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿ.18ರಂದು ಸಂಜೆ ವೇಳೆ ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್, ಕೆಲಸ ಮುಗಿಸಿ ಅತ್ರಾಡಿಯಿಂದ ಪೆರ್ಣಂಕಿಲಕ್ಕೆ ಹೋಗಲು ರಸ್ತೆ ದಾಟುತ್ತಿದ್ದ ಸಲೀಂ ಮತ್ತು ಗೋವಾರ್ಧನ ಅವರಿಗೆ ಡಿಕ್ಕಿ […]
ಇನ್ನು ಮುಂದೆ ಸರ್ಕಾರಿ ನೌಕರರು ಸ್ಲೀವ್ ಲೆಸ್ ಡ್ರೆಸ್, ಹರಿದ ಜೀನ್ಸ್ ಹಾಕೋ ಹಾಗಿಲ್ಲ!

ರಾಜ್ಯ ಸರ್ಕಾರವು ತನ್ನ ನೌಕರರಿಗೆ ಕಚೇರಿಗೆ ಬರುವಾಗ ಸರಿಯಾದ, ಸಭ್ಯ ಉಡುಗೆ ತೊಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕಳೆದ ಸಮಯದಲ್ಲಿ ಕೆಲ ನೌಕರರು ಅಸಭ್ಯ ಉಡುಗೆ ಧರಿಸಿ ಕಚೇರಿಗೆ ಬರುವ ಪ್ರಕರಣಗಳು ಬಹಳಷ್ಟು ವರದಿಯಾಗಿದ್ದು, ಸಾರ್ವಜನಿಕ ಮತ್ತು ಕೆಲವು ಸಂಸ್ಥೆಗಳಿಂದ ದೂರುಗಳು ಬಂದಿರುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ತಿಳಿಸಿದೆ. ಈ ಕ್ರಮದ ಹಿಂದೆ ಸರಕಾರಿ ಅಧಿಕಾರಿಗಳ ಪ್ರತಿಷ್ಠೆ, ಕಚೇರಿ ಪ್ರಾತಿನಿಧ್ಯ ಮತ್ತು ಸಾರ್ವಜನಿಕರ ಮೇಲೆ ಆಗುವ ಪರಿಣಾಮವನ್ನು ಗಮನಿಸಿ ಈ ನಿಯಮಗಳನ್ನು ಜಾರಿಗೆ […]
ಉಡುಪಿ:ಜ.10ರಂದು ನಂದಿಗೋಣ ಬೊಬ್ಬರ್ಯ ಮತ್ತು ನೀಚ ದೈವಸ್ಥಾನದ ವಾರ್ಷಿಕ ನೇಮೋತ್ಸವ

ಕಟಪಾಡಿ:ಜ.10ರಂದು ನಂದಿಗೋಣ ಬೊಬ್ಬರ್ಯ ಮತ್ತು ನೀಚ ದೈವಸ್ಥಾನದ ವಾರ್ಷಿಕ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ ಗಂಟೆ 12:30ಕ್ಕೆ ಅನ್ನಸಂತರ್ಪಣೆ ಹಾಗೂ ರಾತ್ರಿ 9.00ಕ್ಕೆ ನಂದಿಗೋಣ ಹಾಗೂ ಬೊಬ್ಬರ್ಯ ದೈವದ ನೇಮೋತ್ಸವ ನಡೆಯಲಿದೆ. ದಿನಾಂಕ: 11-01-2026 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 5:00ಕ್ಕೆ ನೀಚ ದೈವದ (ಕೊರಗಜ್ಜ) ನೇಮೋತ್ಸವ ನಡೆಯಲಿದೆ.
ತಂದೆಗೆ ಕಿರುಕುಳ ನೀಡದಂತೆ ಚೈತ್ರಾಗೆ ನ್ಯಾಯಾಲಯ ಸೂಚನೆ

ಉಡುಪಿ: ತಂದೆಗೆ ದೈಹಿಕ, ಮಾನಸಿಕ ಕಿರುಕುಳ ನೀಡದಂತೆ ಹಾಗೂ ಅವರ ಮನೆಯಲ್ಲಿ ವಾಸಿಸಲು ಅನುವು ಮಾಡಿಕೊಂಡುವಂತೆ ಕುಂದಾಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಚೈತ್ರಾ ಕುಂದಾಪುರ ಅವರಿಗೆ ನಿರ್ದೇಶಿಸಿದೆ. ಚೈತ್ರಾ ತಂದೆ 71 ವರ್ಷದ ಬಾಲಕೃಷ್ಣ ನಾಯ್ಕ ಅವರು, ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯ್ದೆ 2007ರ ಅಡಿ ಪರಿಹಾರ ಕೋರಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ದೂರು ಪುರಸ್ಕರಿಸಿ ವಾದ ಪ್ರತಿವಾದ ಆಲಿಸಿದ ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಅವರು ಈ ಆದೇಶ ನೀಡಿದ್ದಾರೆ. […]