ಉತ್ತರ ಕೆರೊಲಿನಾದಲ್ಲಿ ವಿಮಾನ ಅಪಘಾತ; ಮಾಜಿ ಎನ್‍ಎಎಸ್‍ಸಿಎಆರ್ ಚಾಲಕ ಹಾಗೂ ಕುಟುಂಬ ಸದಸ್ಯರು ಮೃತ್ಯು.

ಕರೋಲಿನಾ: ಉತ್ತರ ಕರೋಲಿನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಪ್ರಯತ್ನದಲ್ಲಿದ್ದ ಖಾಸಗಿ ವಿಮಾನ ಗುರುವಾರ ತಡ ರಾತ್ರಿ ಅಪಘಾತಕ್ಕೀಡಾಗಿ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಮಾಜಿ ಎನ್‍ಎಎಸ್‍ಸಿಎಆರ್ ಚಾಲಕ ಗ್ರೆಗ್ ಬಿಫೆಲ್ ಹಾಗೂ ಅವರ ಕುಟುಂಬ ಸದಸ್ಯರು ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಚಾರ್ಲೊಟ್‍ನಿಂದ 45 ಮೈಲಿ ದೂರದ ಸ್ಟೇಟಸ್‍ವಿಲ್ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಭೂಮಿಗೆ ಅಪ್ಪಳಿಸಿದ ವಿಮಾನ ಸ್ಫೋಟಗೊಂಡು ಭಸ್ಮಗೊಂಡಿತು ಎಂದು ಹೇಳಲಾಗಿದೆ. ಬಿಫಲ್ ಕಂಪನಿ ಈ ವಿಮಾನವನ್ನು ನಿರ್ವಹಿಸುತ್ತಿತ್ತು ಎಂದು ದಾಖಲೆಗಳಿಂದ ತಿಳಿದು ಬಂದಿದೆ. […]
ಇರಾನ್ ಕಡಲತೀರದಲ್ಲಿ ಅಚ್ಚರಿಯ ದೃಶ್ಯ; ಕಡು ಕೆಂಪು ಬಣ್ಣಕ್ಕೆ ತಿರುಗಿದ ಹಾರ್ಮುಜ್ ದ್ವೀಪ ಸಮುದ್ರ!

ತೆಹ್ರಾನ್: ಇರಾನ್‌ನ ಹಾರ್ಮುಜ್ ದ್ವೀಪದಲ್ಲಿ ಅಚ್ಚರಿಯ ನೈಸರ್ಗಿಕ ವಿದ್ಯಮಾನವೊಂದು ಜರುಗಿದೆ. ಅಲ್ಲಿನ ಕರಾವಳಿಯು ರಾತ್ರೋರಾತ್ರಿ ರಕ್ತಸಿಕ್ತ ದೃಶ್ಯವಾಗಿ ರೂಪಾಂತರಗೊಂಡಿತು. ಭಾರಿ ಮಳೆಯ ನಂತರ, ಈ ಪರ್ಷಿಯನ್ ಕೊಲ್ಲಿ ದ್ವೀಪದ ಕಡಲತೀರಗಳು ಕಡುಗೆಂಪು ಬಣ್ಣದಲ್ಲಿ ತೋಯ್ದುಹೋದಂತೆ ಕಂಡುಬಂದಿತು. ಈ ದೃಶ್ಯ ವಿಸ್ಮಯ, ಕುತೂಹಲ ಮತ್ತು ಕಳವಳವನ್ನು ಉಂಟುಮಾಡಿತ್ತು. ಇದನ್ನು ಜನರು ರಕ್ತದ ಮಳೆ ಎಂದು ಕರೆದರು. ಈ ದೃಶ್ಯಾವಳಿಗೆ ಸಂಬಂಧಿಸಿದಂತೆ ವೈಜ್ಞಾನಿಕ ವಿವರ ಈ ದ್ವೀಪದ ವಿಶಿಷ್ಟ ಭೂಗರ್ಭಶಾಸ್ತ್ರದಲ್ಲಿ ಇದೆ. ಹೋರ್ಮುಜ್ ದ್ವೀಪವು ಲೋಹ ಆಕ್ಸೈಡ್, ವಿಶೇಷವಾಗಿ ಹೆಮಟೈಟ್ […]
ಮಂಗಳೂರು:ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ

ಮಂಗಳೂರು ನಗರದ ತ್ರಿಶಾ ಶೈಕ್ಷಣಿಕ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾದ ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಾರ್ಷಿಕೋತ್ಸವದ ಆಚರಣೆಯು ಕಾಲೇಜಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಹಳೆ ನ್ಯೂಸ್ ನೆಟ್ ವರ್ಕ್ ನ ಸಂಸ್ಥಾಪಕರು, ಸಂಪಾದಕರು ಮತ್ತು ಮುಖ್ಯಸ್ಥರಾದ ಶ್ರೀ ಶ್ಯಾಮ್ ಸುದರ್ಶನ್ ಹೊಸಮೂಲೆಯವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅವರು ಅನುಭವಗಳು ಬದುಕನ್ನು ಕಲಿಸುತ್ತವೆ. ಆ ಅನುಭವಗಳ ಮೂಲಕ ಜೀವನವು ಸಾಧನೆಯ ಕಡೆಗೆ ಸಾಗಬೇಕು. ಆ ಸಾಧನೆಯಲ್ಲಿ ನಾವು ಮೊದಲಿಗರಾಗಬೇಕು ಎಂದು […]
ರಾಜ್ಯದಲ್ಲಿ ಮುಂದಿನ ಐದು ದಿನ ಬೀಸಲಿದೆ ಶೀತಗಾಳಿ!

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಶೀತಗಾಳಿ ಮುಂದುವರಿಯಲಿದ್ದು, ಚಳಿ ಹೆಚ್ಚಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಶೀತಗಾಳಿ ಹೆಚ್ಚಾಗುವ ಸಾಧ್ಯೆತೆಯಿದೆ. ಹವಾಮಾನ ಇಲಾಖೆ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಬೆಳಿಗ್ಗೆ ಮಂಜು ಮುಸುಕಿದ ವಾತಾವರಣ ಮತ್ತು ಸಾಧಾರಣ ಚಳಿ ಇರಲಿದ್ದು, ತುಂತುರು ಮಳೆಯಾಗುವ ಸಂಭವವಿದೆ.ರಾಜ್ಯದಲ್ಲಿ ನಿನ್ನೆ ಬೀದರ್‌ನಲ್ಲಿ ಕನಿಷ್ಠ 10 ಡಿಗ್ರಿ […]
ಡಿ.21ರಂದು ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿ ವೇತನ ಪರೀಕ್ಷೆ

ಉಡುಪಿ: ಉಡುಪಿ ಜಿಲ್ಲೆಯ ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆ ಡಿಸೆಂಬರ್ 21ರಂದು ವಿದ್ಯಾರ್ಥಿವೇತನ ಪರೀಕ್ಷೆಯನ್ನು ಆಯೋಜಿಸಿದೆ. ಈ ಪರೀಕ್ಷೆಯ ಮೂಲಕ ₹3 ಕೋಟಿ ಮೌಲ್ಯದ ವಿದ್ಯಾರ್ಥಿವೇತನವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಈ ವಿದ್ಯಾರ್ಥಿವೇತನ ಪರೀಕ್ಷೆ ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ಐಬಿ ಸೇರಿದಂತೆ ಎಲ್ಲಾ ಪಠ್ಯಕ್ರಮಗಳ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ವಿವಿಧ ತರಗತಿಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗ ಪರೀಕ್ಷೆಯಲ್ಲಿನ ಸಾಧನೆಯ ಆಧಾರದ ಮೇಲೆ ಶುಲ್ಕದಲ್ಲಿ ರಿಯಾಯಿತಿಯನ್ನು ಪಡೆಯಬಹುದು. ಶಾಲಾ ಆಡಳಿತದ ಪ್ರಕಾರ, ಈ ಉಪಕ್ರಮವು ಶೈಕ್ಷಣಿಕ ಶ್ರೇಷ್ಠತೆಯನ್ನು ಉತ್ತೇಜಿಸುವುದು […]