ಅಕ್ಷತಾ ಪೂಜಾರಿ ಮೇಲೆ ಪೊಲೀಸರ ದೌರ್ಜನ್ಯ ಆರೋಪ: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ

ಉಡುಪಿ: ಅಕ್ಷತಾ ಪೂಜಾರಿ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿ ಹಾಗೂ ಸುಳ್ಳು ಎಫ್ಐಆರ್ ದಾಖಲಿಸಿದ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಬಿಲ್ಲವ ಸಮಾಜದವರು ಬ್ರಹ್ಮಾವರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಪೊಲೀಸ್ ಠಾಣೆಯ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಿಲ್ಲವ ಸಮಾಜದವರು ಅಕ್ಷತಾ ಪೂಜಾರಿ ಅವರಿಗೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ಆಕೆ ಹಾಗೂ ಆಕೆಯ ತಾಯಿಯ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ […]

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಗಾಯಕ ಮ್ಯೂಸಿಕ್ ಮೈಲಾರಿ ಬಂಧನ.

ಬಾಗಲಕೋಟೆ: ಪೋಕ್ಸೊ ಪ್ರಕರಣದಲ್ಲಿ ಜಾನಪದ ಗಾಯಕ ಮ್ಯೂಸಿಕ್ ಮೈಲಾರಿ ಬಂಧನವಾಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಡಗುಂಟಿ ಗ್ರಾಮದ ನಿವಾಸಿಯಾಗಿರುವ ಮ್ಯೂಸಿಕ್ ಮೈಲಾರಿ ವಿರುದ್ಧ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಪೊಲೀಸರು, ವಿಜಯಪುರ ಬಳಿಯ ತಿಕೋಟಾದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಬಾಗಲಕೋಟೆ ಎಸ್ಪಿ ಸಿದ್ಧಾರ್ಥ್ ಗೋಯಲ್ ಅವರು, ಪ್ರಕರಣ ದಾಖಲಾಗುತ್ತಿದಂತೆ ಮೈಲಾರಿ ಬಂಧನಕ್ಕೆ […]

2026 ಹೊಸ ವರ್ಷ ಸಂಭ್ರಮಾಚರಣೆ: ಬೆಂಗಳೂರಿನಲ್ಲಿ ಕಠಿಣ ರೂಲ್ಸ್, ಪೊಲೀಸರಿಂದ ಮಾರ್ಗಸೂಚಿ ಬಿಡುಗಡೆ!

ಬೆಂಗಳೂರು ಆಗಮಿಸಲಿರುವ 2026ರ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಕೌಂಟ್‌ಡೌನ್ ಶುರುವಾಗಿರುವ ಬೆನ್ನಲ್ಲೇ ಬೆಂಗಳೂರು ಪೊಲೀಸರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಗೋವಾದ ಪಬ್‌ ಒಂದರಲ್ಲಿ ಇತ್ತೀಚೆಗೆ ಸಂಭವಿಸಿದ ದುರ್ಘಟನೆಯ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಪೊಲೀಸರು, ಡಿ.31ರಂದು ನಡೆಯಲಿರುವ ಹೊಸ ವರ್ಷಾಚರಣೆಯ ಕಾರ್ಯಕ್ರಮಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಹೋಟೆಲ್, ಬಾರ್, ಪಬ್, ರೆಸ್ಟೋರೆಂಟ್‌ಗಳು ಸೇರಿದಂತೆ ಕಾರ್ಯಕ್ರಮಗಳನ್ನು ಆಯೋಜಿಸುವ ಎಲ್ಲಾ ಸ್ಥಳಗಳಿಗೆ ಈ ಗೈಡ್‌ಲೈನ್ಸ್‌ಗಳು ಅನ್ವಯವಾಗಲಿವೆ. 19 ಕಟ್ಟುನಿಟ್ಟಿನ ರೂಲ್ಸ್‌ಬೆಂಗಳೂರು ನಗರ ಪೊಲೀಸರು ಸುಮಾರು 19 ಅಂಶಗಳ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಪ್ರಮುಖವಾಗಿ […]

ಪಡುಬಿದ್ರೆ: ಬೈಕ್ ಡಿಕ್ಕಿ ಹೊಡೆದು ಪಾದಾಚಾರಿ ಮೃತ್ಯು

ಪಡುಬಿದ್ರೆ: ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ತೆಂಕ ಎರ್ಮಾಳಿನ ಸತ್ಯಂ ಬಾರ್ ಎದುರುಗಡೆ ರಾ.ಹೆದ್ದಾರಿ 66 ರಲ್ಲಿ ನಡೆದಿದೆ. ಮೃತರನ್ನು ತೆಂಕ ಎರ್ಮಾಳಿನ ಅಣ್ಣಯ್ಯ ಬಂಗೇರ(67) ಎಂದು ಗುರುತಿಸಲಾಗಿದೆ. ಬಾದಾಮಿ ಮೂಲದ ಹಸನ್ ಎಂಬವರು ಕಾಪುನಿಂದ ಸುರತ್ಕಲ್ ಕಡೆ ಬೈಕಿನಲ್ಲಿ ಹೋಗುತ್ತಿದ್ದಾಗ ರಸ್ತೆ ದಾಟುತ್ತಿದ್ದ ಅಣ್ಣಯ್ಯ ಬಂಗೇರ ಅವರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಅಣ್ಣಯ್ಯ ಬಂಗೇರ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬೈಕ್ ಸವಾರ ಹಸನ್ ಕೂಡ […]

ಚಿಕ್ಕಮಗಳೂರಿನಲ್ಲಿ 18 ದಿನಗಳ ‘ಹೆಲಿ ಟೂರಿಸಂ’; ಆನ್ಲೈನ್ ಬುಕ್ಕಿಂಗ್ ಆರಂಭ!

ಚಿಕ್ಕಮಗಳೂರು: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಬರುವ ಪ್ರವಾಸಿಗರಿಗೆ ಮುಳ್ಳಯ್ಯನಗಿರಿ ಸೇರಿ ಜಿಲ್ಲೆಯ ಪ್ರಕೃತಿಯ ಸೊಬಗನ್ನು ವೈಮಾನಿಕ ನೋಟದ ಮೂಲಕ ಪರಿಚಯಿಸಲು ಜಿಲ್ಲಾಡಳಿತ ಮುಂದಾಗಿದ್ದು, 18 ದಿನಗಳ ಹೆಲಿ ಟೂರಿಸಂ(ಹೆಲಿಕಾಪ್ಟರ್ ಪ್ರವಾಸ) ಆರಂಭಿಸಿದೆ. ಆನ್‌ಲೈನ್ ಬುಕ್ಕಿಂಗ್ ಆರಂಭವಾಗಿದ್ದು, ಪ್ರತಿದಿನ 156 ಜನರಿಗೆ ಮಾತ್ರ ಅವಕಾಶ ದೊರಕಲಿದ್ದು, ಮೊದಲು ಕಾಯ್ದಿರಿಸಿದವರಿಗೆ ಹೆಲಿಕಾಪ್ಟರ್ ಪ್ರವಾಸದ ಭಾಗ್ಯ ಲಭ್ಯವಾಗಲಿದೆ. ಡಿ.20ರಿಂದ ಹೆಲಿ ಟೂರಿಸಂ ಆರಂಭವಾಗಲಿದೆ. ಮೊದಲ ದಿನ ಮೂಡಿಗೆರೆ, ಡಿ.21 ಮತ್ತು 22 ರಂದು ಚಿಕ್ಕಮಗಳೂರು, 23ರಂದು ಮೂಡಿಗೆರೆ, 24ರಂದು […]